ಚಿಕ್ಕೋಡಿ: ಬಂಜಾರ ಹಾಗೂ ಬೇಡಜಂಗಮ ಸಮುದಾಯವನ್ನು ಎಸ್ಸಿ ಸಮುದಾಯಕ್ಕೆ ಸೇರಿಸಿರುವದನ್ನು ಕೈ ಬಿಡುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಮಾದಿಗ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲಾಗಿಲ್ಲ. ಕೆಳ ಸಮುದಾಯದವರಿಗೆ ನೀಡಿದ ಮೀಸಲಾತಿಯಲ್ಲಿ ಲಂಬಾಣಿ ಹಾಗೂ ಬೇಡ ಜಂಗಮ ಸಮುದಾಯವನ್ನು ಎಸ್.ಸಿ ಮೀಸಲಾತಿಗೆ ಸೇರಿಸಿರುವದರಿಂದ ಮೂಲ ಅಸ್ಪೃಶ್ರರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿದ್ದಾರೆ.
ಸರ್ಕಾರಿ ನೌಕರಿ ಹಾಗೂ ಇತರೆ ಮೀಸಲಾತಿಯಲ್ಲಿ ಅಸ್ಪೃಶ್ರರ ಮೀಸಲಾತಿ ಈ ಎರಡು ಸಮಯದಾಯದವರ ಪಾಲಾಗುತ್ತಿದೆ. ಇದರಿಂದಾಗಿ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಎಲ್ಲಾ ರೀತಿಯಿಂದ ಅನ್ಯಾಯವಾಗುತ್ತಿದೆ. ಮೂಲತ: ಬಂಜಾರ ಸಮುದಾಯವು ಗುಜರಾತ ಹಾಗೂ ರಾಜಸ್ಥಾನದಿಂದ ವಲಸೆ ಬಂದಿದ್ದಾರೆ. ಈ ಸಮಯದಾಯವು ಆ ರಾಜ್ಯದಲ್ಲಿ ರಾಜ ಮನೆತನಕ್ಕೆ ಸೇರಿದವರಾಗಿದ್ದಾರೆ. ಅವರು ಅಸ್ಪೃಶ್ರರು ಎಂದು ಯಾರು ಅವರನ್ನು ಕರೆಯುವದಿಲ್ಲ. ಅಲ್ಲದೆ ಬೇಡ ಜಂಗಮ ಸಮಾಜದವರು ಕೆಲವು ಕಡೆ ದೊಡ್ಡ ಮಠಾಧೀಶರಾಗಿದ್ದಾರೆ. ಅವರು ಸ್ಥಿತಿವಂತರಾಗಿದ್ದಾರೆ. ಅವರಿಗೆ ಸಾವಿರಾರು ಎಕರೆ ಜಮೀನುಯಿದ್ದು, ಇವರು ಲಿಂಗಾಯತ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಲಂಬಾಣಿ ಹಾಗೂ ಬೇಡ ಜಂಗಮ ಎರಡು ಸಮುದಾಯವನ್ನು ಕೂಡಲೇ ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರದೇ ಹೋದರೆ ಉಘ್ರ ಹೋರಾಟ ಮಾಡುವದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಗಂಗಾಧರ ದೇವಋಷಿ,ರಮೇಶ ರಾಯವಗೋಳ, ವಿಶ್ವನಾಥ ಮಲಾಯಿಗೋಳ, ಸುಂದರ ಯಲಾಯಿಗೋಳ, ಕೆಂಪ್ಪಣ್ಣ ಕಾಂಬಳೆ, ಸರ್ಜಿರಾವ ಸೇರಿದಂತೆ ಇತರರು ಇದ್ದರು.