Advertisement

ವೃತ್ತಿಗೆ ನ್ಯಾಯ ಕಲ್ಪಿಸುವ ಕಾರ್ಯ ಮಾಡಿ

04:11 PM Aug 07, 2023 | Team Udayavani |

ಚಾಮರಾಜನಗರ: ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳನ್ನು ನೆನೆಯುವುದು ಅಪ ರೂಪದ ಕಾರ್ಯಕ್ರಮ. ನಮ್ಮಿಂದ ವಿದ್ಯೆ ಕಲಿತು ಉತ್ತಮ ಸ್ಥಾನದಲ್ಲಿ ಉತ್ತಮ ಸೇವೆ ಮಾಡು ತ್ತಿದ್ದಾರೆ. ಯಾವುದೇ ವೃತ್ತಿಯಲ್ಲಿರಲಿ ಆ ವೃತ್ತಿಗೆ ನ್ಯಾಯ ಒದಗಿಸುವಂತೆ ಕೆಲಸ ಮಾಡಬೇಕು ಎಂದು ನಿವೃತ್ತ ಶಿಕ್ಷಕ ವೀರೇಶ್ವರ ಹೇಳಿದರು.

Advertisement

ತಾಲೂಕಿನ ಸಂತೇಮರಳ್ಳಿಯ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ವೆಂಕಟಯ್ಯನ ಛತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1979-80ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು ನಮನ, ಅಪೂರ್ವ ಸ್ನೇಹ ಸಮ್ಮಿಲನ ಕಾರ್ಯ ಕ್ರಮದಲ್ಲಿ ಮಾತನಾಡಿ, ತಮ್ಮ ಶಿಕ್ಷಕರಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ಎಂದಿಗೂ ಗುರುಗಳನ್ನು ಮರೆಯುವುದಿಲ್ಲ. ಗುರುವಿಗೆ ಗೌರವ ಕೊಡುವ ವಿದ್ಯಾರ್ಥಿ ಎತ್ತರಕ್ಕೆ ಬೆಳೆಯುತ್ತಾನೆ. ಇಷ್ಟು ವರ್ಷ ವಾದ ಬಳಿಕವೂ ನಾವು ಕಲಿಸಿದ ವಿದ್ಯಾರ್ಥಿಗಳು ನಮ್ಮನ್ನು ಕರೆಸಿ, ಗೌರವಿಸುತ್ತಿರುವುದು ಸ್ಮರಣೀಯವಾಗಿದೆ ಎಂದರು.

ಸಹೋದ್ಯೋಗಿಗಳ ಸಹಕಾರ ಮುಖ್ಯ: ನಿವೃತ್ತ ಶಿಕ್ಷಕ ಆರ್‌.ಎನ್‌.ಸುಂದರ್‌ಮಾತನಾಡಿ ಕೆಲವು ವಿದ್ಯಾರ್ಥಿಗಳು ನಾವು ಮಾಡಿದ ಪಾಠವನ್ನು ಈಗಲೂ ಮೆಲಕು ಹಾಕುತ್ತಾರೆ. ಇದು ಗುರುವಿಗೆ ಸಂತೋಷದ ಸಂಗತಿ. ಶಿಕ್ಷಣ ವೃತ್ತಿ ನಮಗೆ ತೃಪ್ತಿ ತಂದಿದೆ. 13 ವರ್ಷಗಳ ಕಾಲ ವೆಂಕಟಯ್ಯ ನÊ ‌ ಛತ್ರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೆನೆ. ಯಾವುದೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಹೋದ್ಯೋಗಿ ಗಳ ಸಹಕಾರ ಮುಖ್ಯ. ಆ ಸಮಯದಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡಿದರು ಎಂದು ಸ್ಮರಿಸಿದರು.

ನಾಳೆಯೆನ್ನುವುದು ಹಾಳು:  ನಿವೃತ್ತ ಶಿಕ್ಷಕ ಎಸ್‌.ವಂಗಶೆಟ್ಟಿ ಮಾತನಾಡಿ, ವೆಂಕಟಯ್ಯನಛತ್ರದ ಶಾಲೆಯಲ್ಲಿ ನನ್ನ ವೃತ್ತಿಯ ಸುವರ್ಣಯುಗವೆನ್ನಬೇಕು. ಯಾವುದೇ ಕೆಲಸವನ್ನು ಮಾಡಬೇಕಾದರೆ ಆದಿನವೇ ಮಾಡಿದರೆ ಒಳ್ಳೆಯದು. ನಾಳೆಯೆನ್ನುವುದು ಹಾಳು. ಶಾಲೆಗಳಲ್ಲಿ ಪಠ್ಯ ಚಟುವಟಿಕೆ ಮಾಡುವ ಕೆಲಸ ನಾಳೆ ಎನ್ನುವ ಪದಕ್ಕೆ ಜಾಗವಿರಲಿಲ್ಲ .ಗ್ರಾಮದ ಜನರ ಪ್ರೊತ್ಸಾಹ ಬಹಳ ಇತ್ತು. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಉತ್ಸಾಹದಿಂದ ಬರುತ್ತಿದ್ದರು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿ. ಶ್ರೀನಿವಾಸ್‌ ಮತ್ತಿತರರು ಮಾತನಾಡಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ.ನಂದೀಶ್‌, ಹೊಸೂರು ಜಗದೀಶ್‌, ಎಚ್‌.ಪಿ ಪ್ರಸಾದ್‌, ನರಸಿಂಹರಾಜು, ಲಿಂಗರಾಜು, ವಿ.ವಿ.ಅನಂತ, ಕುಮಾರಸ್ವಾಮಿ, ಶಿವಕುಮಾರ್‌, ಪ್ರಸಾದ್‌.ಮಹದೇವಯ್ಯ ಹಾಗೂ 60ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಶಿಕ್ಷಕರ ಪಾತ್ರ ಬಹಳ ಮುಖ್ಯ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯುತ್‌ ಗುತ್ತಿಗೆದಾರ ನಂಜುಂಡಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆಯಲು ಶಿಕ್ಷಕರ ಪಾತ್ರ ಬಹಳ ಮುಖ್ಯ. ನಮಗೆ ಶಿಕ್ಷಣ ನೀಡಿದ ಗುರುಗಳನ್ನು ಸ್ಮರಿಸುವ ಈ ಕಾರ್ಯಕ್ರಮದಲ್ಲಿ ಶಿಷ್ಯರಾದ ನಮಗೆ ಹೆಮ್ಮೆಯಾಗುತ್ತದೆ. ಗುರುಗಳು ನೀಡಿದ ವಿದ್ಯಾದಾನದಿಂದ ಎಷ್ಟೋ ವಿದ್ಯಾರ್ಥಿಗಳು ಸರ್ಕಾರಿ ಸೇವೆ, ಸ್ವಯಂ ಉದ್ಯೋಗ, ರಾಜಕೀಯ, ಸಾರ್ವಜನಿಕರ ಸೇವೆಗಳನ್ನು ಮಾಡುತ್ತಿದ್ದಾರೆ. ಹಳೆಯ ಸ್ನೇಹಿತರನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷದ ವಿಷಯ. ಪ್ರತಿವರ್ಷವು ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಶಿಕ್ಷಕರ ಮತ್ತು ವಿದ್ಯಾರ್ಥಿಯ ಬಾಂಧವ್ಯ ಹೆಚ್ಚುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next