ಚೆನ್ನೈ : ದೇಶದಲ್ಲಿ ಕೋವಿಡ್ ಹೆಮ್ಮಾರಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸೋಂಕಿನಿಂದ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಕೋವಿಡ್ ನಿಯಮ ಉಲ್ಲಂಘನೆ ಮಾಡಬಾರದು ಎಂದು ಆದೇಶಿತ್ತು.
ಆದ್ರೆ ಈ ನಿಯಮಗಳನ್ನು ಗಾಳಿಗೆ ತೂರಿರುವ ಟಿಎಂಸಿ ಬೆಂಬಲಿಗರು ಕೊಲ್ಕತ್ತಾದ ಕಲಿಘಟ್ ಪ್ರದೇಶದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲ ಕುಣಿದು ಕುಪ್ಪಳಿಸಿದ್ದಾರೆ. ಚುನಾವಣಾ ಮತ ಎಣಿಕೆಯಲ್ಲಿ ಟಿಎಂಸಿ ಪಕ್ಷವು ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.
ಇಷ್ಟೆ ಅಲ್ಲದೆ ಡಿಎಂಕೆ ಕಾರ್ಯಕರ್ತರು ಕೂಡ ಚೆನ್ನೈನ ತಮ್ಮ ಪಕ್ಷದ ಕಚೇರಿ ಎದುರು ಸಂಭ್ರಮಿಸಿದ್ದಾರೆ. ಈ ವೇಳೆ ಸಾಮಾಜಿ ಅಂತರವಿಲ್ಲದೆ, ಪಟಾಕಿ ಸಿಡಿಸಿದ್ದಾರೆ. ಹಲವು ಮಹಿಳಾ ಕಾರ್ಯಕರ್ತರು ಕೂಡ ಈ ವೇಳೆ ಭಾಗಿಯಾಗಿದ್ದರು. ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಅಂತಿಮ ಫಲಿತಾಂಶ ಹೊರ ಬೀಳುವ ಸಧ್ಯತೆ ಇದೆ.