Advertisement

ಡಿಎಲ್‌, ಇತರ ದಾಖಲೆ ಮಾನ್ಯತೆ ವಿಸ್ತರಣೆ

02:12 AM May 25, 2020 | Sriram |

ಹೊಸದಿಲ್ಲಿ: ಡ್ರೈವಿಂಗ್‌ ಲೈಸನ್ಸ್‌ ಸೇರಿದಂತೆ ವಿವಿಧ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಫೆ.1ರಿಂದ ಬಾಕಿ ಇರುವ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದೆ.

Advertisement

ಕೋವಿಡ್ 19 ಲಾಕ್‌ಡೌನ್‌ ಅವಧಿಯಲ್ಲಿ ಜನಸಾಮಾನ್ಯ ರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿದೆ. ಮೋಟಾರು ವಾಹನಗಳ ದಾಖಲೆಗಳ ಮಾನ್ಯತಾ ಅವಧಿ 2020ರ ಫೆ.1ಕ್ಕೆ ಅಥವಾ ಅನಂತರದ ಅವಧಿಗೆ ಮುಗಿದಿದ್ದರೆ, ಅದರ ಮಾನ್ಯತಾ ಅವಧಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಲಾಗುವುದು. ಅಲ್ಲದೆ, ಈ ಅವಧಿ ಯಲ್ಲಿ ಮಾಡಲಾಗುವ ಮಾನ್ಯತಾ ನವೀಕರಣಕ್ಕೆ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದ ರಿಂದ ವಾಹನ ದಾಖಲೆ ಗಳ ಮಾನ್ಯತೆ ಅವಧಿ ಮುಗಿದು ಅವು ರದ್ದಾಗುವ ಭೀತಿ ಆವರಿ ಸಿದ್ದ ಅನೇಕರಿಗೆ ಸಮಾಧಾನ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next