Advertisement

ಭೇಟಿ ಮುಂದುವರಿಸಿದ ಡಿಕೆಶಿ

10:23 AM Mar 17, 2020 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡಿ.ಕೆ.ಶಿವಕುಮಾರ್‌, ಅಧಿಕಾರ ಸ್ವೀಕಾರಕ್ಕೂ ಮುನ್ನ ಪಕ್ಷದ ಮುಖಂಡರ ಭೇಟಿ ಮುಂದುವರಿಸಿದ್ದಾರೆ. ಭಾನುವಾರವೂ ಪಕ್ಷದ ಹಲವು ಹಿರಿಯರನ್ನು ಭೇಟಿಯಾಗಿ ಸಹಕಾರ ಕೋರಿ ಪಕ್ಷದ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement

ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗು ತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ದೂರ ಉಳಿದಿರುವವರನ್ನು ಮತ್ತೆ ಪಕ್ಷದಲ್ಲಿ ಸಕ್ರಿಯ ಗೊಳಿಸಿ ಪಕ್ಷ ಸಂಘಟಿಸುವ ಕೆಲಸಕ್ಕೆ ಶಿವಕುಮಾರ್‌ ನಿರ್ಧರಿಸಿದ್ದು, ಎಲ್ಲರ ವಿಶ್ವಾಸ ಗಳಿಸಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.

ಶನಿವಾರ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಅವರನ್ನು ಭೇಟಿಯಾಗಿದ್ದರು. ಭಾನುವಾರ ಡಾ.ಜಿ.ಪರಮೇಶ್ವರ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ, ಬಳಿಕ ಹಿರಿಯ ಮುಖಂಡ ಕೆ.ರೆಹಮಾನ್‌ಖಾನ್‌ ಹಾಗೂ ಎಂ.ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ನಾವೆಲ್ಲ ಒಂದೇ. ನಮ್ಮ ಪಕ್ಷ ಒಗ್ಗಟ್ಟಿನೊಂದಿಗೆ ವಿರೋಧ ಪಕ್ಷದಲ್ಲಿದೆ. ನಾನು ಜನರ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದೇನೆ. ಹಾಗಾಗಿಯೇ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯ ಕರನ್ನು ಭೇಟಿ ಮಾಡುತ್ತಿದ್ದೇನೆ. ಬೆಂಗಳೂರಿನ ಎಲ್ಲಾ ಕಾಂಗ್ರೆಸ್‌ ಶಾಸಕರ ಮನೆಗಳಿಗೆ, 28 ವಿಧಾನಸಭಾ ಬ್ಲಾಕ್‌ ಘಟಕಗಳಿಗೆ ತೆರಳಿ ಕಾರ್ಯಕರ್ತರನ್ನು ಭೇಟಿ ಯಾಗುತ್ತೇನೆ. ಹೀಗಾಗಿ, ಕಾರ್ಯಕರ್ತರು ಭೇಟಿ ಗಾಗಿ ಮನೆಗೆ ಬರುವ ಅವಶ್ಯಕತೆಯಿಲ್ಲ ಎಂದರು.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆದೇಶಿಸಿದ ನಂತರ ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಪಕ್ಷ ಸಂಘಟನೆಗಾಗಿ ಕಾರ್ಯಕರ್ತರಿಗೆ ಭರವಸೆ ಮೂಡಿ ಸುವ ಕೆಲಸ ಮಾಡಲಾಗುವುದು. ಪಕ್ಷದ ಚಟುವಟಿಕೆ ಗಳಿಂದ ದೂರವಾಗಿರುವ ಇನ್ಯಾವುದೋ ಕಾರಣಕ್ಕಾಗಿ ಕೆಲ ಕಾಂಗ್ರೆಸ್‌ ಹಿರಿಯ ನಾಯಕರು ಮನೆಯಲ್ಲಿಯೇ ಉಳಿದು ಬಿಟ್ಟಿದ್ದಾರೆ. ಅವರನ್ನೆಲ್ಲಾ ಹುಡುಕಿ ಪಕ್ಷದಲ್ಲಿ ಸಕ್ರಿಯಗೊಳಿಸಲಾಗುವುದು. ಹಿರಿಯರು, ಕಾರ್ಯ ಕರ್ತರಿಂದಲೇ ಇರುವ ಪಕ್ಷ ನಮ್ಮದು ಎಂದರು.

Advertisement

ಹೈಕಮಾಂಡ್‌ಗೆ ಧನ್ಯವಾದ: ಸುದ್ದಿಗಾರರ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಶಿವಕುಮಾರ್‌ಗೆ ಕೆಪಿಸಿಸಿ ಸಾರಥ್ಯ ನೀಡಿರುವುದಕ್ಕೆ ಹೈಕ ಮಾಂಡ್‌ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ರಾಜ್ಯ, ರಾಷ್ಟ್ರದ ರಾಜಕಾರಣ ಕವಲು ದಾರಿ ಯಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿ ಒಬ್ಬ ಸಮರ್ಥ ನಾಯಕನ ಅಗತ್ಯ ಇದೆ. ಇಂತಹ ಸನ್ನಿವೇಶದಲ್ಲಿ ಡಿ.ಕೆ.ಶಿವಕು ಮಾರ್‌ ಸಮರ್ಥವಾಗಿ ಕೆಲಸ ಮಾಡು ತ್ತಾರೆ ಎನ್ನುವ ವಿಶ್ವಾಸ ಇದೆ. ಹೀಗಾಗಿ, ಅವರು ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next