Advertisement
ಅಧ್ಯಕ್ಷರ ಆಯ್ಕೆ ಸಂದರ್ಭ ಪಕ್ಷದೊಳಗೆ ನಡೆದಿದೆ ಎನ್ನಲಾದ ಒಡಂಬಡಿಕೆಯಂತೆ ಮೀನಾಕ್ಷಿ ಅವರು ಅಧ್ಯಕ್ಷ ಪದವಿಯನ್ನು ಶಿರ್ತಾಡಿ ಜಿ.ಪಂ. ಕ್ಷೇತ್ರದ ಸದಸ್ಯೆ ಕೆ.ಪಿ. ಸುಜಾತ ಅವರಿಗೆ ಬಿಟ್ಟುಕೊಡಬೇಕಾಗಿದೆ. ಈ ಕಾರಣಕ್ಕೆ ಬುಧವಾರ ದ.ಕ. ಜಿ.ಪಂ.ನಲ್ಲಿದ್ದ 15ನೇ ಸಾಮಾನ್ಯ ಸಭೆಗೂ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯರ ಜತೆಗೆ ವಿಸ್ತೃತ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಇದರಿಂದಾಗಿ ಪೂರ್ವಾಹ್ನ 11ಕ್ಕೆ ಆರಂಭವಾದ ಜಿ.ಪಂ. ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಆಗಮಿ
ಸುವಾಗ ಅರ್ಧ ತಾಸು ತಡವಾಗಿತ್ತು. ಜಿ.ಪಂ.ನಲ್ಲಿ 36 ಸ್ಥಾನಗಳ ಪೈಕಿ ಬಿಜೆಪಿ 21 ಹಾಗೂ ಕಾಂಗ್ರೆಸ್‌ನ 15 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ವರ್ಗಕ್ಕೆ ಬಂದಿರುವ ಕಾರಣ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಮೀನಾಕ್ಷಿ ಶಾಂತಿಗೋಡು ಹಾಗೂ ಕೆ.ಪಿ. ಸುಜಾತಾಗೆ ಅವಕಾಶಗಳಿತ್ತು. ಈ ವೇಳೆ ಬಿಜೆಪಿ ಪಕ್ಷದ ಪ್ರಮುಖರ ಮಾತುಕತೆಯ ಪ್ರಕಾರ ತಲಾ ಎರಡೂವರೆ ವರ್ಷದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಹಂಚಿಕೊಳ್ಳುವ ಬಗ್ಗೆ ಮೊದಲೇ ತೀರ್ಮಾನವಾಗಿತ್ತು.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅವರು, ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲÉ ಎಂದು ಸ್ಪಷ್ಟಪಡಿಸಿದ್ದಾರೆ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, “ಬದಲಾವಣೆ ಬಗ್ಗೆ ತೀರ್ಮಾನವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ’ ಎಂದು ಹೇಳಿದ್ದಾರೆ.