Advertisement

ದ.ಕ., ಉಡುಪಿ: ಪಿಎಂಎಸ್‌ವೈಎಂ ಯೋಜನೆ‌ಗೆ ಚಾಲನೆ

01:00 AM Mar 06, 2019 | Harsha Rao |

ಮಂಗಳೂರು/ಉಡುಪಿ: ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಒದಗಿಸುವ “ಪ್ರಧಾನ
ಮಂತ್ರಿ ಶ್ರಮ ಯೋಗಿ ಮಾನ-ಧನ್‌’ (ಪಿಎಂಎಸ್‌ವೈಎಂ) ಯೋಜನೆಗೆ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

Advertisement

ದ.ಕ. ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್‌ ಅವರು ಕಾರ್ಮಿಕರ ಭವಿಷ್ಯನಿಧಿ ಯೋಜನೆಯ ಮಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಮತ್ತು ಉಡುಪಿ ಜಿಲ್ಲಾ ಮಟ್ಟದ ಕಾರ್ಯ
ಕ್ರಮವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಡಾ| ಅಜಯ್‌ ಸಿಂಗ್‌ ಚೌಧರಿ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಉದ್ಘಾಟಿಸಿದರು.

ಅಸಂಘಟಿತ ಕಾರ್ಮಿಕರಿಗೆ ಭದ್ರತೆ
ಒದಗಿಸುವ ಪಿಎಂಎಸ್‌ವೈಎಂ ಮಹತ್ತರ ಯೋಜನೆಯಾಗಿದೆ ಎಂದು ಶಾಸಕ ಕಾಮತ್‌ ಹೇಳಿದರು. 18ರಿಂದ 40 ವರ್ಷದೊಳಗಿನ ತಿಂಗಳಿಗೆ 15,000 ರೂ. ವರೆಗೆ ದುಡಿಯುವ ಉದ್ಯೋಗಿಗಳು ಯೋಜನೆಗೆ ಒಳಪಡುತ್ತಾರೆ. 60 ವರ್ಷದ ಬಳಿಕ ಮಾಸಿಕ 3,000 ರೂ. ಪಿಂಚಣಿ ಪಡೆಯುತ್ತಾರೆ ಎಂದು ತಿಳಿಸಿದರು.

ಕಾರ್ಮಿಕ ವಿಮಾ ಯೋಜನೆಯ ಮಂಗಳೂರು ಉಪವಲಯ ಕಚೇರಿಯ ನಿರ್ದೇಶಕ ಎಸ್‌. ಶಿವರಾಮಕೃಷ್ಣನ್‌ ಮತ್ತು ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್‌ ಮಾತನಾಡಿ, ಮಹತ್ವದ ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯ ಎಂದರು. 

ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಡಿ.ಕೆ. ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬಿಎಂಎಸ್‌ ಮುಖಂಡ ವಿಶ್ವನಾಥ ಶೆಟ್ಟಿ, ಸಹಾಯಕ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಾದ ಸಿ. ಮುರಲೀಧರನ್‌, ವಿನ್ಸೆಂಟ್‌ ಜಾಕೋಬ್‌ ಚೇರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್‌ ಯೋಜನೆ ವಿವರ ನೀಡಿದರು.  ಇಎಸ್‌ಐಸಿ ಅಧಿಕಾರಿ ಆರ್‌. ದಿನಕರನ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next