Advertisement
ಮಾ. 22ರ ಬಳಿಕ ಒಟ್ಟು 12 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕಂಡು ಬಂದಿತ್ತು. ಆದರೆ ಮೊದಲ ಪ್ರಕರಣದಿಂದಲೇ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಮನ್ವಯದಿಂದ ಕೆಲಸ ನಿರ್ವಹಿಸಿ ಜಿಲ್ಲೆಯಲ್ಲಿ ಪ್ರಕರಣ ಹೆಚ್ಚಾಗದಂತೆ ತಡೆಯುವಲ್ಲಿ ಶ್ರಮಿಸಿದ್ದವು. ಎ. 4ರಂದು ಒಂದೇ ದಿನ ಮೂವರಿಗೆ ಕೋವಿಡ್ 19 ದೃಢಪಟ್ಟಿತ್ತು. ಬಳಿಕ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ.
ಪರೀಕ್ಷೆಗೆ ಕಳುಹಿಸಲಾಗಿದ್ದ 8 ಮಂದಿಯ ಗಂಟಲು ದ್ರವ ಮಾದರಿ ವರದಿ ಗುರುವಾರ ಜಿಲ್ಲಾಡಳಿತದ ಕೈ ಸೇರಿದ್ದು, ಎಲ್ಲವೂ ನೆಗಟಿವ್ ವರದಿ ಬಂದಿದೆ. ವೆನಾÉಕ್‌ನಲ್ಲಿರುವ ಕೋವಿಡ್ 19 ಪತ್ತೆ ಪರೀಕ್ಷಾ ಪ್ರಯೋಗಾಲಯಕ್ಕೆ ಗುರುವಾರ ಒಟ್ಟು 24 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಹಿಂದೆ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬರಲು ಬಾಕಿ ಇದ್ದ ಪ್ರಕರಣ ಸೇರಿದಂತೆ ಒಟ್ಟು 25 ಮಂದಿಯ ಗಂಟಲ ದ್ರವ ಮಾದರಿ ಆರೋಗ್ಯ ಇಲಾಖೆ ಕೈ ಸೇರಲು ಬಾಕಿ ಇದೆ. 92 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದ್ದು, ವಿವಿಧ ರೋಗಲಕ್ಷಣಗಳಿರುವ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. 3,352 ಮಂದಿ ಗೃಹ ನಿಗಾದಲ್ಲಿದ್ದಾರೆ. 12 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿದ್ದಾರೆ. 2,594 ಮಂದಿ ಈಗಾಗಲೇ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
Related Articles
ಸಾರ್ವಜನಿಕರು ಅಪರಿಚಿತರೊಡನೆ ವ್ಯವಹರಿಸುವಾಗ, ವ್ಯಾಪಾರ ಮಳಿಗೆ ಗಳಿಗೆ ಭೇಟಿ ನೀಡುವಾಗ, ಕಚೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸೂಕ್ತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Advertisement
36 ಮಂದಿಯ ತಪಾಸಣೆಜಿಲ್ಲೆಯ ವಿವಿಧೆಡೆ ಆರಂಭ ಗೊಂಡಿರುವ ಫಿವರ್ ಕ್ಲಿನಿಕ್‌ಗಳಲ್ಲಿ ತಪಾಸಣೆ ಆರಂಭಗೊಂಡಿದ್ದು, 36 ಮಂದಿಯನ್ನು ತಪಾಸಿಸಲಾಗಿದೆ. ಯಾರಲ್ಲೂ ಕೋವಿಡ್ 19 ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. 2 ದಿನಗಳಲ್ಲಿ 518
ವಾಹನ ಮುಟ್ಟುಗೋಲು
ಮಂಗಳೂರು: ಲಾಕ್‌ಡೌನ್ ಉಲ್ಲಂಘನೆ ಮಾಡಿದ 201ವಾಹನಗಳನ್ನು ಮಂಗಳೂರು ನಗರ ಪೊಲೀಸರು ಗುರುವಾರ ಮುಟ್ಟುಗೋಲು ಹಾಕಿದ್ದಾರೆ. ಬುಧವಾರ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದ್ದು ಎರಡೇ ದಿನದಲ್ಲಿ ಒಟ್ಟು 518 ವಾಹನಗಳನ್ನು ಮುಟ್ಟುಗೋಲು ಹಾಕಿದಂತಾಗಿದೆ.