Advertisement
ಅವನಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ! ಅದಕ್ಕೆ ಹೀಗೆ ಮಾತನಾಡುತ್ತಿದ್ದಾನೆ. ಅವನು ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಟೋಪಿ ಹಾಕಿದ್ದಾನೆ. ಅದನ್ನು ಮರೆತು ಹೋಗಿದ್ದಾನಾ ಕೇಳಿ. ರಿಯಲ್ ಎಸ್ಟೇಟ್ ದಂಧೆ ಮಾಡಬೇಕಾದ ಅನಿವಾರ್ಯ ನಮಗಿಲ್ಲ. ಮೆಡಿಕಲ್ ಕಾಲೇಜು ಕನಕಪುರದಲ್ಲೂ ಆಗುತ್ತದೆ, ರಾಮನಗರದಲ್ಲೂ ಆಗುತ್ತದೆ. ಇವರೆಲ್ಲ ಕೆಲಸ ಇಲ್ಲ ಎಂದು ಹೀಗೆ ಗೊಂದಲ ಮಾಡುತ್ತಿದ್ದಾರೆ. ಇಬ್ಬರನ್ನೂ ಜನ ಉಗಿದು ಆಚೆ ಇಟ್ಟಿದ್ದಾರೆ. 20 ವರ್ಷದಿಂದ ಮಾಡದಿದ್ದವರು ಈಗ ಬಂದ್ ಮಾಡುತ್ತೇವೆ, ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಐದು ವರ್ಷ ಬಿಜೆಪಿ ಸರ್ಕಾರವಿದ್ದಾಗ ಮೆಡಿಕಲ್ ಕಾಲೇಜು ಮಾಡಲಿಲ್ಲ. ಅರಣ್ಯ ಮಂತ್ರಿ ಆಗಿದ್ದರು, ಪ್ರವಾಸೋದ್ಯಮ ಮಂತ್ರಿಯಾಗಿದ್ದರು. ಆಗ ಯಾಕೆ ಮೆಡಿಕಲ್ ಕಾಲೇಜು ಮಾಡಲಿಲ್ಲ. ಈಗ ಬಣ್ಣ ಹಾಕೊಂಡು ನಾಟಕ ಮಾಡಲು ಬಂದಿದ್ದಾನೆ ಎಂದರು.
Related Articles
Advertisement
ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಆ ಪಕ್ಷಗಳ ವೈಯಕ್ತಿಕ ವಿಚಾರ. ಅವರ ಏನೇ ತೀರ್ಮಾನ ಮಾಡಿ ಮೈತ್ರಿ ಮಾಡ್ಕೊಂಡರೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಜಾತ್ಯಾತೀತ ತತ್ವದ ಮೇಲೆ ಆಡಳಿತ ಮಾಡುತ್ತಿದೆ. ಯಾರು ಹೊಂದಾಣಿಕೆ ಮಾಡಿಕೊಂಡರೂ ನಮ್ಮ ಸಿದ್ದಾಂತದ ಮೇಲೆ ನಾವು ಹೋರಾಟ ಮಾಡುತ್ತೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಹೋರಾಟ ಮಾಡುತ್ತೇವೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಧಾರಾಳವಾಗಿ ಮಾಡಲಿ ಟಾರ್ಗೆಟ್ ಮಾಡಲಿ, ಯಾರು ಬೇಡ ಎನ್ನುತ್ತಾರೆ. ಬಿಜೆಪಿ ಅವರು ಮಾಡಲಿ, ಜೆಡಿಎಸ್ ಅವರೂ ಮಾಡಲಿ. ಎಲ್ಲವನ್ನೂ ಜನ ನೋಡುತ್ತಾರೆ. ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಇಂಡಿಯಾ ಒಕ್ಕೂಟ ದೇಶದಲ್ಲಿ ಒಗ್ಗಟ್ಟಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಿಲು ಮೈತ್ರಿ ಮಾಡ್ಕೊತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.