Advertisement

ಪರಮೇಶ್ವರ್ ರನ್ನು ಸೋಲಿಸಲು ಸಿದ್ದರಾಮಯ್ಯ ಜೊತೆ ಡಿಕೆಶಿ ಕೈಜೋಡಿಸಲಿದ್ದಾರೆ: ಬಿಜೆಪಿ

01:37 PM May 26, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷವು ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಮೇಲೆ ಬೂಟಾಟಿಕೆಯ ಒಲವು ತೋರುತ್ತಿದೆ. ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು ಎಂದು ರಾಜ್ಯ ಬಿಜೆಪಿಯು ದಲಿತ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ ಕೂ ಮಾಡಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ ಸಿದ್ದರಾಮಯ್ಯ ಅವರೇ, 2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ? ದಲಿತ ಮುಖ್ಯಮಂತ್ರಿ ಎಂಬ ಪದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಕನಸಿಗೆ ಭಂಗ ತರುತ್ತಿದೆಯೇ? ಎಂದು ಪ್ರಶ್ನಿಸಿದೆ.

ದಲಿತರ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರೇ, ಪರಮೇಶ್ವರ್, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು ಎಂದಿದೆ.

ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎಂಬ ಸಿದ್ದರಾಮಯ್ಯ, ಪಕ್ಷ ಸಂಘಟಿಸಿದ್ದು ನಾನು, ಅಧಿಕಾರ ಬೇರೆಯವರಿಗೆ ಏಕೆ ಬಿಟ್ಟುಕೊಡಬೇಕು ಎನ್ನುವು ಡಿಕೆಶಿ, ಸಿಎಂ ಪದವಿ ಕನಸು ಕಾಣುತ್ತಿರುವ ಇಬ್ಬರು ನಾಯಕರು ಪರಮೇಶ್ವರ್‌ ಅವರನ್ನು ಗೆಲ್ಲಲು ಬಿಡುತ್ತಾರೆಯೇ? ಪರಮೇಶ್ವರ್ ಅವರೇ 2023 ರಲ್ಲೂ ನಿಮ್ಮ ಸೋಲು ನಿಶ್ಚಿತ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಇದನ್ನೂ ಓದಿ:ಡಿಕೆಶಿ ವಿರುದ್ಧ ಚಾರ್ಜ್ ಶೀಟ್: ಏನೇ ಷಡ್ಯಂತ್ರ ಮಾಡಿದರೂ ನಾವು ಹೆದರಲ್ಲ ಎಂದ ಡಿ.ಕೆ ಸುರೇಶ್

Advertisement

ದಲಿತ ನಾಯಕ ಪರಮೇಶ್ವರ್ ಅವರನ್ನು 2013 ರಲ್ಲಿ ಸೋಲಿಸಲು ಸಿದ್ದರಾಮಯ್ಯ ಒಬ್ಬರೇ ಶ್ರಮಿಸಿದ್ದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಕೈ ಜೋಡಿಸುತ್ತಿದ್ದಾರೆ. ಇವರಿಬ್ಬರೂ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟೊಂದು ಅಸಹನೆ ಏಕೆ? ಕಾಂಗ್ರೆಸ್‌ ಪಕ್ಷ ಪದೇ ಪದೇ ದಲಿತ ನಾಯಕರಿಗೆ ಅನ್ಯಾಯ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದವರು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗುವುದು ಅಲಿಖಿತ ನಿಯಮವಾಗಿತ್ತು. 2013 ರಲ್ಲಿ ದಲಿತ ಸಮುದಾಯದ ಪ್ರಬಲ ನಾಯಕ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕುತಂತ್ರವೇ ನಡೆದು ಹೋಯಿತು! ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್‌ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013 ರ ಇತಿಹಾಸ 2023 ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್‌ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ಬಿಜೆಪಿ ಟೀಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next