Advertisement

ಮುಲಾಯಂ ಸಿಂಗ್ ಯಾದವ್ ಅಂತ್ಯಕ್ರಿಯೆಗೆ ರಾಹುಲ್ ಹೋಗಲ್ಲ : ಡಿಕೆಶಿ ಸ್ಪಷ್ಟನೆ

08:24 AM Oct 11, 2022 | Team Udayavani |

ಚಿತ್ರದುರ್ಗ : ಮುಲಾಯಾಂ ಸಿಂಗ್ ಯಾದವ್ ಅಂತ್ಯಕ್ರಿಯೆನಲ್ಲಿ ರಾಹುಲ್ ಗಾಂಧಿ ಭಾಗವಹಿಸುವ ಒತ್ತಡ ಇತ್ತು. ಈ ಬಗ್ಗೆ ರಾತ್ರಿ ಬಹಳ ಚರ್ಚೆ ನಡೆದ ನಂತರ ಪ್ರಿಯಾಂಕ ಗಾಂಧಿ ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

Advertisement

ಮಂಗಳವಾರ ಬೆಳಗ್ಗೆ ಹರ್ತಿಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಹುಲ್ ಇಲ್ಲದೇ ಯಾತ್ರೆ ಮಾಡುವುದು ಸರಿಯಾಗುವುದಿಲ್ಲ ಎಂದು ಭಾವಿಸಿ, ಇಲ್ಲಿಯೇ ಗೌರವ ಸಲ್ಲಿಸುತ್ತಾ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದರು.

ಮುಲಾಯಂ ಸಿಂಗ್ ದೊಡ್ಡ ಹೋರಾಟಗಾರ, ಸಮಾಜವಾದಿ ಪಕ್ಷ ಕಟ್ಟಿ ರಾಷ್ಟ್ರದ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಹೇಳಿದರು.

ಸೋನಿಯಾ ಹಾಗೂ ಪ್ರಿಯಾಂಕ ಗಾಂಧಿ ಶಿಮ್ಲಾದಲ್ಲಿದ್ದು ಅವರು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಯಾತ್ರೆಯ ಜಾಗದಲ್ಲೇ ಮತಗಟ್ಟೆ:

Advertisement

ಅ.17ರಂದು ಎಐಸಿಸಿ ಚುನಾವಣೆ ನಡೆಯಲಿದ್ದು, ಯಾತ್ರಿಗಳು ಮತ ಹಾಕಲು ಇಲ್ಲಿಯೇ ಬೂತ್ ತೆರೆಯಲಾಗುತ್ತದೆ. ಪಿಸಿಸಿ ಸದಸ್ಯರಿಗೆ, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಎಸ್ಟಿ ಮೀಸಲಾತಿಗೆ ಸಮಿತಿ ರಚಿಸಿದ್ದೇ ನಾವು:

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಬೇಕು ಎಂದು ನ್ಯಾ.ನಾಗಮೋಹನದಾಸ್ ಸಮಿತಿ ರಚಿಸಿದ್ದು ನಾವು. ನಾವೇ ಬೇರು. ಬೇರಿಲ್ಲದೆ, ಫಲವಿಲ್ಲ ಇಷ್ಟೊತ್ತಿಗೆ ಅನುಷ್ಠಾನಕ್ಕೆ ತಂದು ಸಂಸತ್ತಿನಲ್ಲಿ ಅನುಮೋದನೆ ನೀಡಬಹುದಿತ್ತು. ಈಗ ಮಾಡಲಿ. ನಾವು ವಿರೋಧ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿ ಜನಸಂಕಲ್ಪ ಯಾತ್ರೆ ಕುರಿತು ಪ್ರತಿಕ್ರಿಯಿಸಿ, ಇಷ್ಟು ದಿನ ಜನಕ್ಕೆ ಸಂಕಲ್ಪವೇ ಮಾಡಿರಲಿಲ್ಲ. ಜನಸ್ಪಂದನಾ ಆಯ್ತು , ಈಗ ಸಂಕಲ್ಪ ಎಂದು ಜನರ ಹತ್ತಿರ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಮುಸ್ಲೀಮರ ಮೀಸಲಾತಿ ತೆಗೆಯುವ ಅರವಿಂದ ಬೆಲ್ಲದ್ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಕೆಶಿ ನಿರಾಕರಿಸಿದರು.

ಇದನ್ನೂ ಓದಿ : ಅ.12ಕ್ಕೆ ಕುಷ್ಟಗಿಗೆ ಸಿಎಂ : ಮಳೆಯ ನಡುವೆಯೂ ಬರದಿಂದ ಸಾಗುತ್ತಿದೆ ಸಿದ್ದತಾ ಕಾರ್ಯ

Advertisement

Udayavani is now on Telegram. Click here to join our channel and stay updated with the latest news.

Next