ಹೊಸಪೇಟೆ: ಕುಕ್ಕರ್ ಬಾಂಬ್ ಸ್ಫೋಟ ಹೇಳಿಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಐಸಿಎಸ್ ಹಾಗೂ ತಾಲಿಬಾನಿಗೆ ಬೆಂಬಲ ನೀಡುತ್ತಿದೆ ಎಂದು ಜನರೇ ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಫಲಾನುಭವಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ನಾವೇ ಎಂದು ಐಸಿಎಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಆದರೆ ಡಿಕೆಶಿ ಅದೊಂದು ಆ್ಯಕ್ಸಿಡೆಂಟ್, ಬಿಜೆಪಿಯವರು ಅಟೆನÒನ್ ಡೈವರ್ಶನ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಅಥವಾ ತಾವು ಉಗ್ರರ ಪರವಾಗಿದ್ದೇವೆ ಎಂದು ಒಪ್ಪಿಕೊಳ್ಳಬೇಕು ಎಂದರು.
ಲೋಕಾಯುಕ್ತ ಬಲಿಷ್ಠ: ಲೋಕಾಯುಕ್ತ ಸಂಸ್ಥೆ ಬಲಿಷ್ಠವಾಗಿದೆ. ಯಾವುದೇ ಪಕ್ಷ ಭಷ್ಟಾಚಾರ ಮಾಡಿದರೂ ಅದಕ್ಕೆ ಕಡಿವಾಣ ಹಾಕಲು ಲೋಕಾಯುಕ್ತಕ್ಕೆ ಬಲ ನೀಡಿದೆ. ಕಾಂಗ್ರೆಸ್ ಕೆಲವರ 59 ಕೇಸ್ ಮುಚ್ಚಿಹಾಕುವುದಕ್ಕೆ, ಲೋಕಾಯುಕ್ತ ದುರ್ಬಲಗೊಳಿಸಿ, ಎಸಿಬಿ ಸಂಸ್ಥೆಯನ್ನು ಕಾಂಗ್ರೆಸ್ ಹುಟ್ಟು ಹಾಕಿತ್ತು. ಬೆಳಗಾವಿಯಲ್ಲಿ ಪ್ರತಿಮೆ ಪಾಲಿಟಿಕ್ಸ್ ಸರಿಯಲ್ಲ. ಕಾಂಗ್ರೆಸ್‌ನವರಿಗೆ ದುರಹಂಕಾರ, ರಾಜ್ಯ ಸರ್ಕಾರದಿಂದ ಉದ್ಘಾಟನೆ ಮಾಡಿದ್ದಾರೆ, ಮತ್ತೆ ಅದನ್ನು ಉದ್ಘಾಟನೆ ಮಾಡ್ತಾರೆ ಎಂದರೆ ಅದು ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧ ಎಂದರು.
ಕುಕ್ಕರ್ ಬಾಂಬ್ ಸ್ಫೋಟದ ಕುರಿತು ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ? ಅದೊಂದು ಸಾದಾ ಕುಕ್ಕರ್, ಈ ಪ್ರಕರಣವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಈ ಕುರಿತು ಡಿ.ಕೆ.ಶಿವಕುಮಾರ ಅವರನ್ನು ಪ್ರಶ್ನಿಸಬೇಕು.
-ಬಸವರಾಜ ಬೊಮ್ಮಾಯಿ.ಸಿಎಂ
ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸದೆ ಅದನ್ನು ಕಪ್ಪು ಪಟ್ಟಿಗೆ ಸೇರಿಸಿ ಏಕಾಂಗಿ ಮಾಡಬೇಕು ಎಂಬುದು ಭಾರತದ ದಿಟ್ಟ ನಿಲುವು. ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ವಿದೇಶಿ ಶಕ್ತಿಗಳಿವೆ. ಘಟನೆಗೆ ಪಾಕಿಸ್ತಾನದ ಸಪೋರ್ಟ್ ಕೂಡ ಇದೆ. ಇಂತಹ ಸಮಯದಲ್ಲಿ ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಡಿಕೆಶಿ ಕ್ಷಮೆ ಕೇಳಿದರೆ ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿದ್ದಾರೆ ಎಂದರ್ಥ, ಇಲ್ಲವಾದಲ್ಲಿ ಭಯೋತ್ಪಾದಕರ ಪರವಾಗಿ ಇದ್ದಾರೆ ಎಂಬುದು ಸಾಬೀತಾಗುತ್ತದೆ. ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್‌ನವರು, ತುಷೀrಕರಣದ ರಾಜಕಾರಣ ಮಾಡುತ್ತಿದ್ದಾರೆ. ಯುಪಿ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೀಟುಗಳು ಇಲ್ಲ. ಆದರೂ ಕಾಂಗ್ರೆಸ್ ಈ ರೀತಿಯಲ್ಲಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದರು.