Advertisement

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿರಲು ಅಯೋಗ್ಯರು: ಈಶ್ವರಪ್ಪ

04:10 PM May 21, 2020 | keerthan |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏನೇ ಯೋಜನೆ ಶುರು ಮಾಡಬೇಕು ಎಂದರೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನ ಕೇಳಿ ಮಾಡುವುದಕ್ಕೆ ಹೇಳುತ್ತೀನೆ ಎಂದು ಕೇಂದ್ರ ಸರ್ಕಾರದ ಯೋಜನೆಗಳನ್ನು ಟೀಕಿಸುವ ಕಾಂಗ್ರೆಸ್ ಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.

Advertisement

ಮೈಸೂರಿನ ಸುತ್ತೂರು ಮಠದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು. ಇದೆಲ್ಲಾ ಬೋಗಸ್ ವಿರೋಧ ಪಕ್ಷದ ನಾಯಕರ ಹೇಳಿಕೆಗಳು ಎಂದಿದ್ದಾರೆ.

ಕೋವಿಡ್-19 ಸಂಕಷ್ಟಕ್ಕೆ ಸ್ಪಂದಿಸಿರುವ ಕೇಂದ್ರ ಸರಕಾರ ಗ್ರಾಮೀಣಾಭಿವೃದ್ಧಿ ಇಲಾಖೆಗೆ 40ಸಾವಿರ ಕೋಟಿ ಕೊಟ್ಟಿದೆ. ಇದರಿಂದ ನರೆಗಾ ಯೋಜನೆಗೆ ಹೆಚ್ಚು ಒತ್ತು ಸಿಕ್ಕಂತಾಗಿದೆ. ನಿನ್ನೆ ಒಂದೇ ದಿನ 9 ಲಕ್ಷಕ್ಕೂ ಅಧಿಕ ಜನ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಇಲ್ಲಿಯವರೆಗೆ ವರ್ಷದಲ್ಲಿ ನೂರು ದಿನಗಳ ಕೆಲಸ ನಡೆಯುತ್ತಿತ್ತು. ಅದು ಇನ್ಮುಂದೆ ನೂರೈವತ್ತು ದಿನಗಳಿಗೆ ಏರಿಕೆಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next