Advertisement
ಭಾನುವಾರ ನಗರದಲ್ಲಿರುವ ತಮ್ಮ ಚುನಾವಣಾ ಪ್ರಚಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಲಿಂಗಪ್ಪ, ಜೆ.ಎಚ್.ಪಟೇಲ, ವೀರೇಂದ್ರ ಪಾಟೀಲ ಅವರಂಥ ನಾಯಕರು ಭ್ರಷ್ಟಾಚಾರ ಮಾಡಿದ್ದಾರೆಯೇ ಎಂದು ಪ್ರಶ್ನಿಸಿ, ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಆಗ್ರಹಿಸಿದರು. ಅಲ್ಲದೇ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ತಾಕತ್ತಿದ್ದರೆ ಲಿಂಗಾಯತ ನಾಯಕರಿಗೆ ಅದರಲ್ಲೂ ಜಗದೀಶ ಶಟ್ಟರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
Related Articles
Advertisement
ಬಿಜೆಪಿ ಪಕ್ಷ ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಮಾಡಿದ ಅನ್ಯಾಯ ಏನು? ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದಲಿತರಿಗೆ ಮೀಸಲಾತಿ ತೆಗೆಯುವುದಾಗಿ, ಗೋ ಹತ್ಯೆ ನಿಷೇಧ ಹಿಂಪಡೆಯುವುದಾಗಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರಕ್ಕೆ ನಿಮ್ಮ ಸಹಕಾರ ಇದೆಯೇ ಎಂದು ಯತ್ನಾಳ ಪ್ರಶ್ನಿಸಿದರು.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯನ್ನು ನಾನು ಪ್ರಶ್ನಿಸಿದರೆ, ಯತ್ನಾಳ ಪಕ್ಷಬಿಟ್ಟು ಹೋಗಿರಲಿಲ್ಲವೇ ಎನ್ನುತ್ತಾರೆ. ಪಕ್ಷದ ಅಂದಿನ ನಾಯಕರು ನನ್ನನ್ನು ಉಚ್ಛಾಟಿಸಿದ್ದರಿಂದ ನಾನು ಜೆಡಿಎಸ್ ಪಕ್ಷ ಸೇರಿದ್ದೆ ಹೊರತು, ನಾನಾಗೇ ಪಕ್ಷ ಬಿಟ್ಟಿರಲಿಲ್ಲ. ಮತ್ತೊಮ್ಮೆ ಇಂಥದ್ಧೇ ಪರಿಸ್ಥಿತಿ ಎದುರಾದಾಗ ಪಕ್ಷೇತರನಾಗಿ ಸ್ಪರ್ಧಿಸಿದ್ದೆನೆಯೇ ಹೊರತು ಕಾಂಗ್ರೆಸ್ ಸೇರಿರಲಿಲ್ಲ ಎಂದು ಸಮಜಾಯಿಶಿ ನೀಡಿದರು.
ಕ್ಷೇತ್ರದ ಮತದಾರ ಸ್ಪರ್ಧಿಗಳ ಯೋಗ್ಯತೆ, ವ್ಯಕ್ತಿತ್ವ, ಅಭಿವೃದ್ಧಿ ನೋಡಿ ಮತದಾನ ಮಾಡುತ್ತಾರೆ. ಹೀಗಾಗಿ ಮುಸ್ಲೀಂ, ಹಿಂದುತ್ವದ ಪ್ರಶ್ನೆಗಿಂತ ಅಭಿವೃದ್ಧಿ ನೋಡಿ ಜನರು ಮತ ಹಾಕುತ್ತಾರೆ. ನಗರದಲ್ಲಿ ಕಾಂಗ್ರೆಸ್ ಸ್ಪರ್ಧಿ ಗೆದ್ದರೆ ವ್ಯಾಪಾರಿಗಳಿಗೆ ಹಸ್ತಾವಸೂಲಿ, ಗೂಂಡಾಗಿರಿ ಆರಂಭಗೊಳ್ಳುತ್ತವೆ. ಭೂಮಾಫಿಯಾ ಹೆಚ್ಚಲಿದೆ ಎಂಬ ಭಯದಲ್ಲಿದ್ದಾರೆ ಎಂದರು.
ಕಾರಣ ನಗರದ ಎಲ್ಲ ಸಮುದಾಯದ ಜನರು ನನ್ನ ಅವಧಿಯಲ್ಲಿ ಒಂದೇ ಒಂದು ಗಲಭೆ ನಡೆಯದೇ ಅಭಿವೃದ್ಧಿಗೆ ಆದ್ಯತೆ ನೀಡಿದ್ದರಿಂದ ನೆಮ್ಮದಿಯಾಗಿದ್ದಾರೆ. ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದೇನೆ ಎಂದರು.