Advertisement

ದ.ಕ. ವಿದ್ಯಮಾನ: ನಾಡಿದ್ದು ಕೇಂದ್ರಕ್ಕೆ ಮನವರಿಕೆ

03:45 AM Jul 14, 2017 | Team Udayavani |

ಮಂಗಳೂರಿನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಂಪೂರ್ಣ ವಿದ್ಯಮಾನ ಗಳ ಬಗ್ಗೆ ಜು. 16 ಮತ್ತು 17ರಂದು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನ ವರಿಕೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ಮಂಗಳೂರಿನ ಪುರಭವನದಲ್ಲಿ ನಡೆದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕೇರಳದ ಕೊಲೆಗಡುಕರು
ಕೇರಳದ ಕೊಲೆಗಡುಕರನ್ನು ಇಲ್ಲಿಗೆ ಕರೆ ತಂದು ದುಷ್ಕೃತ್ಯ ಎಸಗಲಾಗುತ್ತಿದೆ. ರಾಜ್ಯದ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ಕೇರಳದ ಸಂಸದ ವೇಣುಗೋಪಾಲ್‌ ಇದಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿ ಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ರಾಜಕೀಯ ಆಟಗಳು ಇನ್ನು ಕೇವಲ 8 – 9 ತಿಂಗಳು ಮಾತ್ರ. ಆ ಬಳಿಕ ಅವರ ಅಡ್ರೆಸ್‌ ಇರಲಾರದು. ಈಗ ದೇಶದಲ್ಲಿ ಕಾಂಗ್ರೆಸ್‌ ಸರಕಾರ ಕರ್ನಾಟಕ ದಲ್ಲಿ ಮಾತ್ರ ಉಳಿದಿದೆ. ಮುಂದಿನ ಚುನಾ ವಣೆ ಯಲ್ಲಿ ಅದು ನಿರ್ನಾಮ ವಾಗುವುದು ಖಚಿತ ಎಂದರು.

1 ಲಕ್ಷ  ಜನ ಸೇರಿಸಿ ಶಕ್ತಿ ಪ್ರದರ್ಶನ
ಜಿಲ್ಲೆಯಲ್ಲಿ 144ರನ್ವಯ ವಿಧಿಸಿರುವ ನಿಷೇಧಾಜ್ಞೆಯನ್ನು ತೆರವುಗೊಳಿಸಿದ ಬಳಿಕ ಮಂಗಳೂರಿನಲ್ಲಿ 1 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನೂ ಈ ಸಭೆಗೆ ಕರೆಸ ಲಾಗುವುದು ಎಂದರು.

ನಳಿನ್‌, ಶೋಭಾ, ಕಲ್ಲಡ್ಕ ಡಾ| ಭಟ್‌ ಅವರನ್ನು ಬಂಧಿಸುವ ಭ್ರಮೆ ಬೇಡ. ನಿಮ್ಮಂತಹ ಬಹಳ ಜನ ರನ್ನು ನೋಡಿದ್ದೇವೆ. ನಮಗೆ ದೈವ ಬಲ, ಜನ ಬಲ ಇದೆ. ಅದನ್ನು ನೋಡಿ ಸಹಿಸ ಲಾಗದೆ ಅಧಿಕಾರ ಉಳಿ ಸು ವುದ ಕ್ಕಾಗಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದೀರಿ. ಕೊಲೆಗಡುಕರನ್ನು ಬೆಂಬ ಲಿಸುತ್ತೀರಿ. ನೀವು ಮುಖ್ಯಮಂತ್ರಿ ಹುದ್ದೆಯಲ್ಲಿರಲು ನಾಲಾಯಕ್ಕು. ಇದು ಕೇರಳ ಅಲ್ಲ; ಕರ್ನಾಟಕ. ಇಲ್ಲಿ ನಿಮ್ಮ ರಾಜಕೀಯ ಆಟ ನಡೆಯದು  ಎಂದು ಯಡಿಯೂರಪ್ಪ ಹೇಳಿದರು. 

Advertisement

ಸವಾಲು ಸ್ವೀಕರಿಸಿದ್ದೇವೆ
ಬಂಟ್ವಾಳ ಕ್ಷೇತ್ರದಲ್ಲಿ ತನ್ನೆದುರು ನಿಂತು ಚುನಾವಣೆಯಲ್ಲಿ ಸ್ಪರ್ಧಿಸು ವಂತೆ ಡಿ.ವಿ. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ರಮಾ ನಾಥ ರೈ ಅವರು ಹಾಕಿರುವ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ಹೇಳಿದ ಯಡಿಯೂರಪ್ಪ ಅವರು ರಮಾನಾಥ ರೈ ವಿರುದ್ಧ ಸ್ಪರ್ಧಿಸಲು ಡಿ.ವಿ. ಸದಾನಂದ ಗೌಡ ಅಥವಾ ಶೋಭಾ ಕರಂದ್ಲಾಜೆ ಅವರ ಅಗತ್ಯವಿಲ್ಲ; ಸಾಮಾನ್ಯ ಕಾರ್ಯಕರ್ತ ಸಾಕು. ಅಂತಹ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರೇರಿತ ಭಯೋತ್ಪಾದನೆ ನಡೆಯುತ್ತಿದೆ. ಕೊಲೆಗಡುಕರನ್ನು ಬಂಧಿಸುವ ಪೊಲೀಸರನ್ನು ಸಚಿವ ರಮಾನಾಥ ರೈ ಅವರು ಬಂಧಿಸಿಟ್ಟಿದ್ದಾರೆ. ರಮಾನಾಥ ರೈ ಅವರು 6 ಬಾರಿ ಸಚಿವರಾಗಿ ಕೋಮು ಗಲಭೆ ಮಾಡಿಸಿದ್ದರೇ ಹೊರತು ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರ ಕೃಪೆಯಲ್ಲಿಯೇ ಇಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಆರೋಪಿಸಿದರು ಮತ್ತು ಆದ್ದರಿಂದ ಶಾಂತಿ ಸಭೆಗೆ ಹೋಗಿಲ್ಲ ಎಂದು ತಿಳಿಸಿದರು. 

ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮತ್ತು ತನ್ನನ್ನು ಬಂಧಿಸಿದರೆ ಅದು ಕಾಂಗ್ರೆಸ್‌ ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ ಎಂದರು.

ವಿಧಾನ ಪರಿಷತ್‌ ವಿಪಕ್ಷ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಹಿಂದೂಗಳ ಮೇಲೆ ಹಲ್ಲೆ, ಕೊಲೆ ನಡೆಸುವವರನ್ನು ಪೊಲೀಸರು ಬಂಧಿಸುತ್ತಿಲ್ಲ. ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್‌ ಅವರ ಕೈಗೊಂಬೆಗಳಾಗಿ ವರ್ತಿಸಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತದ ಶಾಂತಿ ಸಮಿತಿ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದರು. 
ಶಾಸಕ ಎಸ್‌. ಅಂಗಾರ, ಜಿ.ಪಂ. ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿಯ ವಿಭಾಗ ಪ್ರಮುಖ್‌ ಉದಯ ಕುಮಾರ್‌ ಶೆಟ್ಟಿ ವೇದಿಕೆಯಲ್ಲಿದ್ದರು. 

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಸ್ವಾಗತಿಸಿದರು. ರಾಜ್ಯ ಬಿಜೆಪಿ ವಕ್ತಾರರಾದ ಸುಲೋಚನಾ ಜಿ.ಕೆ. ಭಟ್‌ ಪ್ರಸ್ತಾವನೆಗೈದರು. ರಾಜೀವಿ ಕೆಂಪು ಮಣ್ಣು ವಂದಿಸಿದರು. ರೂಪಾ ಡಿ. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next