Advertisement
ಜಿಲ್ಲಾಡಳಿತದ ಪರದಾಟಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನಾದಿಂದ ಗುರುವಾರ ಮೃತಪಟ್ಟ ಬಂಟ್ವಾಳ ಕಸಬಾದ 75 ವರ್ಷದ ವೃದ್ಧೆಯ ಶವ ಸಂಸ್ಕಾರಕ್ಕೆ ಸಂಬಂಧಿಸಿದಂತೆ ನಗರದ ಸುಮಾರು ನಾಲ್ಕೈದು ರುದ್ರಭೂಮಿಗಳ ಆಸುಪಾಸಿನ ಜನ ವಿರೋಧ ವ್ಯಕ್ತಪಡಿಸಿದ್ದರಿಂದ ಜಿಲ್ಲಾಡ ಳಿತ ಅಂತ್ಯಕ್ರಿಯೆಗೆ ಪರದಾಡಬೇಕಾಯಿತು.ಮಂಗಳೂರು ಹೊರ ವಲಯದ ಪಚ್ಚ ನಾಡಿ, ಮೂಡು ಶೆಡ್ಡೆ, ನಂದಿ ಗುಡ್ಡೆ, ಬೋಳೂರು ರುದ್ರಭೂಮಿ ಗಳಲ್ಲಿ ವೃದ್ಧೆಯ ಮೃತದೇಹವನ್ನು ಶವ ಸಂಸ್ಕಾರಕ್ಕೆ ತರಲಾಗು ತ್ತಿದೆ ಎಂಬ ಮಾಹಿತಿಯರಿತು ಸ್ಥಳೀಯರು ರುದ್ರಭೂಮಿ ಬಳಿ ಜಮಾಯಿಸಿ ಅಧಿಕಾರಿ ಗಳಿಗೆ ವಿರೋಧ ವ್ಯಕ್ತ ಪಡಿಸಿದ್ದರು.
ಕೈಕುಂಜೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ಊಹಾಪೋಹಗಳು ಸೃಷ್ಟಿ ಯಾಗಿರುವ ಜತೆಗೆ ಸ್ಥಳೀಯರಿಂದ ದೂರು ಗಳು ಕೇಳಿಬಂದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಅವರು ಅಧಿಕಾರಿಗಳ ಜತೆ ರುದ್ರಭೂಮಿಯ ಪರಿಸರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶುಕ್ರವಾರ ಸ್ಥಳಕ್ಕೆ ಬಂಟ್ವಾಳ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರ ಜತೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಪರಿಸರದಲ್ಲಿ ಕ್ರಿಮಿನಾಶಕ ದ್ರಾವಣ ಸಿಂಪಡಿಸಲಾಯಿತು. ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ಕಂದಾಯ ನಿರೀಕ್ಷಕರಾದ ನವೀನ್, ರಾಮ ಕಾಟಿಪಳ್ಳ, ದಿವಾಕರ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ , ಪುರುಷೋತ್ತಮ ವಾಮದಪದವು ಮೊದಲಾದವರಿದ್ದರು. ಶಾಸಕರ ನಡೆಗೆ ಮೆಚ್ಚುಗೆ
ಬಂಟ್ವಾಳ ಮಹಿಳೆಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾೖಕ್ ಅವರು ತಮ್ಮ ಜಮೀನಿನ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಅವಕಾಶ ನೀಡುವುದಾಗಿ ಅಧಿಕಾರಿಗಳಿಗೆ ಹೇಳಿದರು. ಶಾಸಕರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ನಡೆಗೆ ಪ್ರಶಂಸೆ ಜನರ ಮನವೊಲಿಸುವ ಜತೆಗೆ ಶವಸಂಸ್ಕಾರಕ್ಕೆ ಕಟ್ಟಿಗೆ, ತುಪ್ಪ ಒದಗಿಸಿರುವ ಪೊಲೀಸರ ಕಾರ್ಯವು ಮೆಚ್ಚುಗೆಗೆ ಪಾತ್ರ ವಾಗಿದೆ. ತಾಲೂಕಾಡಳಿತ, ಪುರಸಭೆಯ ಸ್ಪಂದನೆಗೆ ಪ್ರಶಂಸೆ ವ್ಯಕ್ತವಾಗಿದೆ.