Advertisement

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

05:29 AM Jan 30, 2019 | Team Udayavani |

ಮಂಗಳೂರು: ಕನ್ನಡ ಭಾಷೆಯಲ್ಲಿ ಇನ್ನಷ್ಟು ವೈದ್ಯಕೀಯ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಅದಕ್ಕಾಗಿ ವೈದ್ಯಕೀಯ ಪಾರಿಭಾಷಿಕ ಶಬ್ದಗಳ ಶಬ್ದಕೋಶ ಪ್ರಕಟವಾಗಬೇಕಿದೆ ಎಂದು ಡಾ| ಬಿ.ಎಂ. ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಪುರಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಕೇವಲ 3 ನಿಮಿಷಗಳಲ್ಲಿ ಭಾಷಣ ಮುಗಿಸಿದ ಅವರು, ವಿವರಗಳಿದ್ದ ಭಾಷಣದ ಪ್ರತಿಯನ್ನು ವಿತರಿಸಿದರು.

ಮನುಷ್ಯನ ಒಳ್ಳೆಯದಕ್ಕಾಗಿ ಸಾಹಿತ್ಯ ಸಮ್ಮೇಳನಗಳಿವೆ. ಎಲ್ಲರೂ ಒಟ್ಟಾಗಿರಬೇಕು ಎಂಬ ಆಶಯದ, ಸ್ವಸ್ಥ ಸಮಾಜ ಸೃಷ್ಟಿಸುವುದು ಅದರ ಉದ್ದೇಶ. ವ್ಯಸನಮುಕ್ತ ಸಮಾಜವು ಸೃಷ್ಟಿಯಾದರೆ ಅದು ಸಹಜವಾಗಿ ಸ್ವಸ್ಥವಾಗುತ್ತದೆ. ವ್ಯಕ್ತಿ ಒಳ್ಳೆಯವನಾಗಿದ್ದರೆ ಒಳ್ಳೆಯ ವೈದ್ಯನಾಗುವುದು ಸಾಧ್ಯ ಎಂದರು.

ಪೇಜಾವರ ಶ್ರೀ ವಿಶ್ವೇಶತೀರ್ಥರು ಶುಭಾಶೀರ್ವಾದ ನೀಡಿದರು. ಹಿರಿಯಸಾಹಿತಿ ನಾ. ಡಿ’ಸೋಜಾ ಉದ್ಘಾಟಿಸಿ ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಎ.ಪಿ. ಮಾಲತಿ ಮಾತನಾಡಿದರು.

ಮಾನವಿಕ ಶಿಕ್ಷಣ
ನಾ. ಡಿ’ಸೋಜಾ ಮಾತನಾಡಿ, ವಿದೇಶ ಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆ ಯುವ ವಿದ್ಯಾರ್ಥಿಗಳಿಗೆ ಮಾನವಿಕ ಶಿಕ್ಷಣ ನೀಡುವ ಪರಿಪಾಠ ವಿದೆ. ನಮ್ಮ ದೇಶದಲ್ಲಿಯೂ ಇದೇ ಪದ್ಧತಿ ಜಾರಿಗೆ ತರಬೇಕಾಗಿದೆ ಎಂದರು.

Advertisement

ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಶ್ವಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ, ಹರಿಕೃಷ್ಣ ಪುನರೂರು, ನೀಲಾವರ ಸುರೇಂದ್ರ ಅಡಿಗ, ಅಮರನಾಥ ಶೆಟ್ಟಿ, ಪ್ರೊ| ಎಂ.ಬಿ. ಪುರಾಣಿಕ್‌, ಎ.ಜೆ. ಶೆಟ್ಟಿ, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಆಶಯ ಭಾಷಣ ಮಾಡಿದರು. ಪೊಳಲಿನಿತ್ಯಾನಂದ ಕಾರಂತ ಅಭಿನಂದನ ಭಾಷಣ ಮಾಡಿದರು. ವಿದ್ವತ್‌ ಸಮ್ಮಾನ,ಕನ್ನಡ ಸಿರಿ ಗೌರವ ಪ್ರದಾನ ನೆರವೇರಿತು. ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೆಳಗ್ಗೆ ಸಚಿವ ಯು.ಟಿ. ಖಾದರ್‌ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ದರು. ಮಧ್ಯಾಹ್ನ ನಗರದಲ್ಲಿ ಭುವನೇಶ್ವರಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next