Advertisement
ಕೋವಿಡ್ ಮುಕ್ತರಾಗಿ 105 ಮಂದಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 5,509 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 2,561 ಮಂದಿ ಗುಣಮುಖರಾಗಿದ್ದಾರೆ. 2,800 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಮೃತಪಟ್ಟ ಎಂಟು ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಗುರುವಾರ ಸ್ವೀಕೃತವಾಗಿದ್ದು, ಎಲ್ಲರಿಗೂ ಕೋವಿಡ್ ಇರುವುದು ದೃಢಪಟ್ಟಿದೆ. ಎಲ್ಲ ಮರಣಗಳ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
– ಪುತ್ತೂರಿನ 36ರ ಮಹಿಳೆ ಜು. 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ಸೆಪ್ಟಿಕ್ ಶಾಕ್, ರೇನಲ್ ಫೈಲ್ಯೂರ್‌ನಿಂದ ಬಳಲುತ್ತಿದ್ದರು. -ಮಂಗಳೂರಿನ 60ರ ಮಹಿಳೆ ಗುರುವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ರೆಸ್ಪಿರೇಟರಿ ಫೈಲ್ಯೂರ್‌ನಿಂದ ಬಳಲುತ್ತಿದ್ದರು.
Related Articles
Advertisement
– ಮಂಗಳೂರಿನ 57ರ ವ್ಯಕ್ತಿ ಜು. 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 29ರಂದು ಮೃತಪಟ್ಟಿದ್ದಾರೆ. ಅವರು ಅಸ್ತಮಾ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದರು.
– ಮೈಸೂರಿನ 75ರ ವೃದ್ಧ ಜು. 26ರಂದು ವೆನಾÉಕ್ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ಅಸ್ತಮಾ, ಅಧಿಕ ರಕ್ತದೊತ್ತಡ, ನ್ಯುಮೋನಿಯಾದಿಂದ ಬಳಲುತ್ತಿದ್ದರು.
– ಪುತ್ತೂರಿನ 64ರ ವ್ಯಕ್ತಿ ಜು. 22ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾದಿಂದ ಬಳಲುತ್ತಿದ್ದರು.
– ಮಂಗಳೂರಿನ 52 ವರ್ಷದ ವ್ಯಕ್ತಿ ಜು. 28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ಅಕ್ಯುಟ್ ಕೊರೊನರಿ ಈವೆಂಟ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು.
– ಮಂಗಳೂರಿನ 87ರ ವೃದ್ಧೆ ಜು. 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.