Advertisement
ಹೈಕೋರ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ವಿಚಾರವಾಗಿ ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅವರು, ಅರ್ಜಿದಾರರು ಅರ್ಜಿ ವಾಪಸ್ ಪಡೆದುಕೊಳ್ಳಲು ಅಥವಾ ಪ್ರಕರಣದಲ್ಲಿ ಮುಂದುವರಿಯಲು ಸ್ವತಂತ್ರರು. ಅದು ಅವರಿಗೆ ಬಿಟ್ಟ ವಿಚಾರ. ಜತೆಗೆ ಯಾರಾದರೂ ಸರಕಾರದ ಆದೇಶ ಪ್ರಶ್ನಿಸಲು ಮುಕ್ತರಾಗಿದ್ದಾರೆ. ಅಂತಹ ಪ್ರಸಂಗ ಬಂದಾಗ ಸರಕಾರ ಅದನ್ನು ಕಾನೂನು ರೀತಿ ಎದುರಿಸಲಿದೆ ಎಂದು ಕಪಿಲ್ ಸಿಬಲ್ ಹೇಳಿದರು.
Related Articles
Advertisement
ಸರಕಾರ ತನ್ನ ನಿರ್ಧಾರವನ್ನು ಹಿಂಪಡೆದು ಅಗತ್ಯವಿದ್ದಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರೆ, ಸಮಾಜಕ್ಕೆ ಯಾವ ಸಂದೇಶ ನೀಡಿದಂತೆ. ಇಡೀ ಸರಕಾರದ ಸಂಪುಟ ಮೇಲ್ಮನವಿದಾರರ (ಡಿ.ಕೆ. ಶಿವಕುಮಾರ್) ಬೆಂಬಲಕ್ಕೆ ನಿಂತಿದೆ. ಅಷ್ಟಕ್ಕೂ ಮೇಲ್ಮನವಿದಾರ ಸಾಮಾನ್ಯ ವ್ಯಕ್ತಿಯಲ್ಲ. ಖಾಸಗಿ ವ್ಯಕ್ತಿ ಈ ರೀತಿಯಲ್ಲಿ ಮಾಡಿದರೆ ಒಪ್ಪಬಹುದು, ಸರಕಾರವೇ ಈ ರೀತಿಯ ನಿರ್ಧಾರಕ್ಕೆ ಮುಂದಾದರೆ ಹೇಗೆ? ರಾಜ್ಯ ಸರಕಾರದ ಈ ನಿರ್ಧಾರ ಒಪ್ಪುವಂತದ್ದಲ್ಲ. ಸಂಪುಟ ಅವಸರದಲ್ಲಿ ತೀರ್ಮಾನ ಕೈಗೊಂಡಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ. ಆದರೆ, ಮೇಲ್ಮನವಿಯಲ್ಲಿ ಪ್ರತಿವಾದಿಯಾಗಿ ಸೇರಲು ಮಧ್ಯಾಂತರ ಅರ್ಜಿದಾರರು ಬಯಸುವುದಿಲ್ಲ ಎಂದು ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ನ್ಯಾಯಪೀಠಕ್ಕೆ ತಿಳಿಸಿದರು.
ಡಿಕೆಶಿ ಪರ ವಕೀಲರ ವಾದ
ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ರಾಜ್ಯ ಸರಕಾರವು ನ. 28ರಂದು ವಾಪಸ್ ಪಡೆದು ಆದೇಶ ಹೊರಡಿಸಿದೆ. ಯಾವ ಅನುಮತಿಯನ್ನು ಪ್ರಶ್ನಿಸಿ ಮೊದಲು ಏಕಸದಸ್ಯ ನ್ಯಾಯಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತೋ, ಆ ಅರ್ಜಿಯ ಮೇಲೆ ಏಕಸದಸ್ಯ ನ್ಯಾಯಪೀಠದ ಆದೇಶದಿಂದ ಉದ್ಭವಿಸಿದ ಸನ್ನಿವೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತೋ ಈಗ ಇವೆರಡೂ ವಿಚಾರಣ ಮಾನ್ಯತೆ ಕಳೆದುಕೊಂಡಂತಾಗಿದೆ. ಹೀಗಿದ್ದಾಗ ಪ್ರಕರಣ ಮುಂದುವರಿಸುವುದು ನಿರರ್ಥಕ. ಆದ್ದರಿಂದ ಅರ್ಜಿ ಹಾಗೂ ಮೇಲ್ಮನವಿ ವಾಪಸ್ ಪಡೆದುಕೊಳ್ಳಲು ಅನುಮತಿಸಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ಹಾಗೂ ಉದಯ ಹೊಳ್ಳ ಮನವಿ ಮಾಡಿದರು.
ನ್ಯಾಯಪೀಠ ಹೇಳಿದ್ದು
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರಕಾರದ ನಡೆಯನ್ನು ಪ್ರತಿವಾದಿಗಳು ಕಟುವಾಗಿ ಖಂಡಿಸಿದ್ದಾರೆ ಹಾಗೂ ಸರಕಾರದ ಈ ಕ್ರಮ ಒಪ್ಪುವಂತಹದ್ದಲ್ಲ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಸರಕಾರದ ನಿರ್ಧಾರವನ್ನು ಯಾರೂ ಪ್ರಶ್ನಿಸದಿರುವಾಗ ಪ್ರತಿವಾದಿಗಳ ವಾದವನ್ನು ಅಂಗೀಕರಿಸಲು ನಮಗೆ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ಹಾಗೂ ಮೇಲ್ಮನವಿ ವಾಪಸ್ ಪಡೆದುಕೊಳ್ಳುವ ಡಿ.ಕೆ. ಶಿವಕುಮಾರ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು. ಇದೇ ವೇಳೆ ಸಿಬಿಐ ದಾಖಲಿಸಿದ ಎಫ್ಐಆರ್ ಬಗ್ಗೆ, ಈವರೆಗೆ ನಡೆದ ತನಿಖೆ ಬಗ್ಗೆ ಏನ್ನನ್ನೂ ಹೇಳುವುದಿಲ್ಲ; ಒಂದಕ್ಷರದ ವಿಶ್ಲೇಷಣೆಯನ್ನೂ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ನಾನೇನೂ ತಪ್ಪು ಮಾಡಿಲ್ಲ, ದೇವರಿದ್ದಾನೆ: ಡಿಕೆಶಿ
ಬೆಂಗಳೂರು: ನಾನೇನೂ ತಪ್ಪು ಮಾಡಿಲ್ಲ. ಎಲ್ಲ ಬೆಳವಣಿಗೆಗಳನ್ನು ಜನರು ನೋಡಿ¨ªಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತನಿ¨ªಾನೆ. ನಾಡಿನ ಜನರಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಟೆಕ್‌ಸಮ್ಮಿಟ್‌ನಲ್ಲಿ ಭಾಗವಹಿಸಿದ್ದ ಅವರು ಹೈಕೋರ್ಟ್‌ನಲ್ಲಿ ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ ಎಂದರು.