ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 173 ಮಂದಿಗೆ ಕೋವಿಡ್ ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 117ಕ್ಕೆ ಏರಿದೆ. 91 ಮಂದಿಗೆ ಇನ್‌ಫ್ಲ್ಯೂಯೆಯೆಂಜಾ ಲೈಕ್ ಇಲ್‌ನೆಸ್‌ನಿಂದ, 21 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 22 ಮಂದಿಗೆ ಉಸಿರಾಟದ ಸಮಸ್ಯೆಯಿಂದ ಹಾಗೂ ಒಬ್ಬ ಅಂತಾರಾಷ್ಟ್ರೀಯ ಪ್ರಯಾಣಿಕನಿಗೆ ಕೋವಿಡ್ ದೃಢಪಟ್ಟಿದೆ. 38 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. 41 ಮಂದಿ ಗುಣಮುಖರಾಗಿದ್ದಾರೆ.
ಮೃತ ನಾಲ್ವರಿಗೆ ಪಾಸಿಟಿವ್
84ರ ಸಕಲೇಶಪುರ ನಿವಾಸಿ ಜು. 22ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಜು. 26ರಂದು ನಿಧನ ಹೊಂದಿದರು. ಅವರು ರೆಫ್ರಾಕ್ಟರಿ ಹೈಪೊಕ್ಸೆಮಿಯ/ಹೃದಯಾಘಾತದ ಸಮಸ್ಯೆಯಿಂದ ಬಳಲುತ್ತಿದ್ದರು. 62ರ ಬಂಟ್ವಾಳ ನಿವಾಸಿ ಜು. 26ರಂದು ವೆ ವೆನ್ಲಾಕ್‌ಗೆ ದಾಖಲಾಗಿ ಜು. 28ರಂದು ನಿಧನ ಹೊಂದಿದರು. ಅವರು ಸೆಪ್ಟಿಕ್ ಶಾಕ್ ಹಾಗೂ ಮೋಡ್ಸ್, ಲಿವರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು.
25ರ ಬಂಟ್ವಾಳ ನಿವಾಸಿ ಜು. 25ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು. 28ರಂದು ನಿಧನ ಹೊಂದಿದರು. ಅವರು ಮೆದುಳು ಸಂಬಂಧಿತ ಕಾಯಿಲೆ, ಇನ್‌ಫ್ರಾ ಪರೆಂಚಿಮಲ್ ಬ್ಲೀಡ್‌ನಿಂದ ಬಳಲುತ್ತಿದ್ದರು. 72ರ ಭಟ್ಕಳ ನಿವಾಸಿ ಜು. 23ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಜು. 27ರಂದು ನಿಧನ ಹೊಂದಿದರು. ಅವರು ಸೆಪ್ಟಿಕ್ ಶಾಕ್, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು.