Advertisement
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿದಿನ 200ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಗೊಳ್ಳುತ್ತಿದೆ. ಒಂದೇ ದಿನ 493 ಮಂದಿಗೆ ಸೋಂಕು ತಗಲಿರುವುದು ಆತಂಕಕ್ಕೆ ಕಾರಣವಾಗಿದೆ.
ದ.ಕ. ಜಿಲ್ಲಾ ಪಂ. ಸೋಮವಾರದಿಂದ ಪ್ರತಿ ಗ್ರಾಪಂ ಮಟ್ಟದಲ್ಲಿ ಕೊರೊನಾ ಪರೀಕ್ಷೆ ಹಮ್ಮಿಕೊಂಡಿದ್ದು, ಗುರುವಾರ ಜಿಲ್ಲೆಯಲ್ಲಿ 175 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯ ವಿವಿಧ ಗ್ರಾ. ಪಂ.ಗಳ ವ್ಯಾಪ್ತಿ, ವೆನ್ಲಾಕ್ ಆಸ್ಪತ್ರೆ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಒಟ್ಟು 3,927 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ಪೈಕಿ ಮಂಗಳೂರು ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ 710 ಮಂದಿಗೆ ರ್ಯಾಟ್ (62 ದೃಢ), 411 ಮಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಸುಳ್ಯದಲ್ಲಿ 159 ಮಂದಿ ರ್ಯಾಟ್ (15 ದೃಢ), 86 ಆರ್‌ಟಿಪಿಸಿಆರ್, ಬೆಳ್ತಂಗಡಿಯಲ್ಲಿ 436 ರ್ಯಾಟ್ (18 ದೃಢ), 85 ಆರ್‌ಟಿಪಿಸಿಆರ್, ಪುತ್ತೂರಿನಲ್ಲಿ 427 ರ್ಯಾಟ್ (39 ದೃಢ), 49 ಆರ್‌ಟಿಪಿಸಿಆರ್, ಬಂಟ್ವಾಳದಲ್ಲಿ 484 ರ್ಯಾಟ್ (21 ದೃಢ), 352 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
Related Articles
Advertisement