Advertisement

French Open 2023: ಜೊಕೋ-ಕಶನೋವ್‌ ಕ್ವಾರ್ಟರ್‌ ಫೈನಲ್‌

10:53 PM Jun 04, 2023 | Team Udayavani |

ಪ್ಯಾರಿಸ್‌: ರಷ್ಯಾದ ಕರೆನ್‌ ಕಶನೋವ್‌ 2023ರ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ ಮೊದಲ ಆಟಗಾರನಾಗಿ ಮೂಡಿಬಂದರು. ರವಿವಾರ ನಡೆದ 16ರ ಸುತ್ತಿನ ಸ್ಪರ್ಧೆಯಲ್ಲಿ ಅವರು ಇಟಲಿಯ ಲೊರೆಂಜೊ ಸೊನೆಗೊ ಅವರಿಗೆ ಸೋಲುಣಿಸಿದರು.

Advertisement

ರಷ್ಯಾದ 11ನೇ ಶ್ರೇಯಾಂಕದ ಆಟಗಾರ ನಾಗಿರುವ ಕರೆನ್‌ ಕಶನೋವ್‌ ಮೊದಲ ಸೆಟ್‌ ಕಳೆದುಕೊಂಡೂ ಸೊನೆಗೊ ಮೇಲೆ ಸವಾರಿ ಮಾಡಿದರು. ಗೆಲುವಿನ ಅಂತರ 1-6, 6-4, 7-6 (9-7), 6-1.

ಆದರೆ ಕಶನೋವ್‌ ಅವರ ಕ್ವಾರ್ಟರ್‌ ಫೈನಲ್‌ ಸವಾಲು ಸುಲಭದ್ದಲ್ಲ. ಇಲ್ಲಿ ಅವರು ಸೂಪರ್‌ಸ್ಟಾರ್‌ ಆಟಗಾರ, ಹಾಟ್‌ ಫೇವರಿಟ್‌ ಆಗಿರುವ ನೊವಾಕ್‌ ಜೊಕೋವಿಕ್‌ ವಿರುದ್ಧ ಆಡಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಜೊಕೋವಿಕ್‌ ಪೆರುವಿನ ಜುವಾನ್‌ ಪಾಬ್ಲೊ ವರಿಲ್ಲಸ್‌ ವಿರುದ್ಧ 6-3, 6-2, 6-2 ಅಂತರದಿಂದ ಗೆದ್ದು ಬಂದರು. ಕೇವಲ ಒಂದು ಗಂಟೆ, 57 ನಿಮಿಷದಲ್ಲಿ ಅವರು ಗೆಲುವು ಸಾರಿದರು.

ಇದು ಜೊಕೋ ಅವರ 17ನೇ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌. ಇದರೊಂದಿಗೆ ಅವರು “ಕ್ಲೇ ಕೋರ್ಟ್‌ ಕಿಂಗ್‌” ರಫೆಲ್‌ ನಡಾಲ್‌ ಅವರ 16 ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ದಾಖಲೆ ಮುರಿದರು. ರೋಜರ್‌ ಫೆಡರರ್‌ 3ನೇ ಸ್ಥಾನದಲ್ಲಿದ್ದಾರೆ (12).

ಜೊಕೋವಿಕ್‌ ಕಾಣುತ್ತಿರುವ ಸತತ 14ನೇ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಎಂಬುದು ಮತ್ತೂಂದು ದಾಖಲೆ. ರಫೆಲ್‌ ನಡಾಲ್‌ ಸತತ 12 ಸಲ ಈ ಸಾಧನೆಗೈದಿದ್ದಾರೆ.
ಹಾಗೆಯೇ ಇದು ಜೊಕೋವಿಕ್‌ ಎದುರಾಳಿ ಕಶನೋವ್‌ ಕಾಣುತ್ತಿರುವ ಸತತ 3ನೇ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌. ಇದಕ್ಕೂ ಮುನ್ನ ಕಳೆದ ವರ್ಷದ ಯುಎಸ್‌ ಓಪನ್‌, ಈ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲೂ ಎಂಟರ ಸುತ್ತಿನ ನಂಟು ಬೆಳೆಸಿದ್ದರು.

Advertisement

ಪಾವುಚೆಂಕೋವಾ ಜಯ
ವನಿತಾ ವಿಭಾದದಲ್ಲೂ ರಷ್ಯಾ ಗಮನ ಸೆಳೆಯಿತು. ಇಲ್ಲಿನ ಅನಸ್ತಾಸಿಯಾ ಪಾವುಚೆಂಕೋವಾ ಬೆಲ್ಜಿಯಂನ ಎಲೈಸ್‌ ಮಾರ್ಟೆನ್ಸ್‌ ವಿರುದ್ಧ 3 ಸೆಟ್‌ಗಳ ಕಾದಾಟ ನಡೆಸಿ 3-6, 7-6 (7-3), 6-3ರಿಂದ ಗೆದ್ದು ಬಂದರು. ಇವರ ಜಿದ್ದಾಜಿದ್ದಿ ಕಾಳಗ 3 ಗಂಟೆ, 9 ನಿಮಿಷಗಳ ತನಕ ಸಾಗಿತು.

ಆದರೆ ರಷ್ಯದ ಮತ್ತೋರ್ವ ಆಟಗಾರ್ತಿ ಎಲಿನಾ ಅರಾರಟೋವಾ° ಸೋಲನುಭವಿಸಿದರು. ಇವರನ್ನು ಜೆಕ್‌ ಗಣರಾಜ್ಯದ ಕಾರ್ಲೋನಾ ಮುಖೋವಾ 6-4, 6-3 ಅಂತರದಿಂದ ಹಿಮ್ಮೆಟ್ಟಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next