Advertisement

Wimbledon final: ಅಲ್ಕರಾಜ್‌ಗೆ ಜೊಕೋವಿಕ್‌ ಸವಾಲು; ಇಂದು ಪುರುಷರ ಫೈನಲ್‌

10:57 PM Jul 13, 2024 | Team Udayavani |

ಲಂಡನ್‌: ಹಾಲಿ ಚಾಂಪಿಯನ್‌ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ರವಿವಾರ ಸೆಂಟರ್‌ ಕೋರ್ಟ್‌ನಲ್ಲಿ ನಡೆಯುವ ಫೈನಲ್‌ ಹೋರಾಟದಲ್ಲಿ ಏಳು ಬಾರಿಯ ಚಾಂಪಿಯನ್‌ ನೋವಾಕ್‌ ಜೊಕೋವಿಕ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಇದು ಕಳೆದ ವರ್ಷದ ವಿಂಬಲ್ಡನ್‌ ಫೈನಲ್‌ನ ಪುನ ರಾವರ್ತನೆಯಾಗಿದ್ದು ತಿರುಗೇಟು ನೀಡುವ ಗುರಿಯನ್ನು ಜೊಕೋವಿಕ್‌ ಇಟ್ಟುಕೊಂಡಿದ್ದಾರೆ.

Advertisement

ಶುಕ್ರವಾರ ನಡೆದ ಎರಡನೇ ಸೆಮಿ ಫೈನಲ್‌ ಪಂದ್ಯದಲ್ಲಿ ಜೊಕೋವಿಕ್‌ ಅವರು ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು 6-4, 7-6 (2), 6-4 ಸೆಟ್‌ಗಳಿಂದ ಸೋಲಿಸಿ ಜೊಕೋವಿಕ್‌ ಪ್ರಶಸ್ತಿ ಸುತ್ತಿಗೇರಿದರು. ಇದೇ ವೇಳೆ ಅಲ್ಕರಾಜ್‌ ಇನ್ನೊಂದು ಸೆಮಿಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಕೆಡಹಿದ್ದರು.

ಸೆಮಿಫೈನಲ್‌ನಲ್ಲಿ ಮುಸೆಟ್ಟಿ ಅವ ರನ್ನು ಕೆಡಹಿದ ರೀತಿಯನ್ನು ಗಮನಿ ಸಿದರೆ ಜೊಕೋವಿಕ್‌ ಈ ಬಾರಿ ಸೇಡು ತೀರಿಸಿಕೊಳ್ಳುವುದು ಖಚಿತ ವೆಂದು ಹೇಳಬಹುದು. ಜೊಕೋವಿಕ್‌ ಕಳೆದೊಂದು ದಶಕದಲ್ಲಿ ಸೆಂಟರ್‌ ಕೋರ್ಟ್‌ ನಲ್ಲಿ ಸೋತಿರುವುದು ಕಳೆದ ವರ್ಷ ಮಾತ್ರ.

ನನಗೆ ಈ  ಪಂದ್ಯದ ಫ‌ಲಿತಾಂಶ ದಿಂದ ತೃಪ್ತಿಯಾಗಿದೆ ಮತ್ತು ಸಮಾ ಧಾನವಾಗಿದೆ. ಆದರೆ ನನ್ನ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಇದು ನನ್ನ ಕೈಗೆ ಟ್ರೋಫಿ ಬರುವವರೆಗೆ ಸಾಗಲಿದೆ ಎಂದು ಜೊಕೋವಿಕ್‌ ಹೇಳಿದ್ದಾರೆ. 21ರ ಹರೆಯದ ಅಲ್ಕರಾಜ್‌ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರಬಹುದು ಮತ್ತು ಇನ್ನಷ್ಟು ಗ್ರ್ಯಾನ್‌ ಸ್ಲಾಮ್‌  ಪ್ರಶಸ್ತಿ ಗೆಲ್ಲಬಹುದು. ಆದರೆ ರವಿವಾರ ಇಲ್ಲವೆಂದು ಭಾವಿಸುವೆ ಎಂದು ಜೊಕೋವಿಕ್‌ ತಿಳಿಸಿದರು. ಗೆದ್ದ ಬಳಿಕ ಅವರು ರ್ಯಾಕೆಟನ್ನು ವಯಲಿನ್‌ ರೀತಿ ಹಿಡಿದು ನುಡಿಸುವಂತೆ ಮಾಡಿ ಸಂಭ್ರಮಿಸಿದರು.

ಪಂದ್ಯ ವೀಕ್ಷಿಸಲಿರುವ ರಾಜಕುಮಾರಿ:

Advertisement

ಬ್ರಿಟನ್‌ನ ವೇಲ್ಸ್‌ನ ರಾಜಕುಮಾರಿ ಕೇಟ್‌ ಮಿಡಲ್ಟನ್‌ ಅವರು ಕ್ಯಾನ್ಸರ್‌ ಚಿಕಿತ್ಸೆಯ ನಡುವೆ ಅಪರೂಪವೆಂಬಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅವರು ರವಿವಾರ ನಡೆಯುವ ವಿಂಬಲ್ಡನ್‌ ಪುರುಷರ ಫೈನಲ್‌ ಪಂದ್ಯವನ್ನು ವೀಕ್ಷಿಸಲಿದ್ದಾರೆ ಮಾತ್ರವಲ್ಲದೇ ವಿಜೇತರಿಗೆ ಟ್ರೋಫಿ ವಿತರಿಸಲಿದ್ದಾರೆ ಎಂದು ಕೆನ್ಸಿಂಗ್ಟನ್‌ ಅರಮನೆ ಕಚೇರಿಯ ಪ್ರಕಟನೆ ತಿಳಿಸಿದೆ.

ಸ್ವತಃ ಟೆನಿಸ್‌ ಆಟಗಾರ್ತಿಯಾಗಿರುವ ಕೇಟ್‌ ಆಲ್‌ ಇಂಗ್ಲೆಂಡ್‌ ಲಾನ್‌ ಟೆನಿಸ್‌ ಮತ್ತು ಕ್ರೋಕೆಟ್‌ ಕ್ಲಬ್‌ನ ಪೋಷಕರಾಗಿದ್ದಾರೆ. 42ರ ಹರೆಯದ ರಾಜಕುಮಾರಿ ಕೇಟ್‌ ಅವರಿಗೆ ಕ್ಯಾನ್ಸರ್‌ ರೋಗ ಲಕ್ಷಣ ಗೊತ್ತಾದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೆ ಸಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next