ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕೂಟದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ಗೆದ್ದು ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ಫೈನಲ್ ತಲುಪಿದ್ದಾರೆ.
ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಸೆಮಿ ಫೈನಲ್ ಕದನದಲ್ಲಿ ರೋಜರ್ ಫೆಡರರ್ ಮತ್ತು ನುವಾನ್ ಜೋಕೊವಿಕ್ ಮುಖಾಮುಖಿಯಾದರು. ಆದರೆ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ನುವಾನ್ ಜೋಕೊವಿಕ್ ಮತ್ತೊಂದು ಸುಲಭ ಜಯ ಗಳಿಸಿ ಫೈನಲ್ ತಲುಪಿದರು.
7-6, 6-4, 6-3 ಸೆಟ್ ಗಳ ನೇರ ಹಣಾಹಣಿಯಲ್ಲಿ ಏಳು ಬಾರಿಯ ಚಾಂಪಿಯನ್ ಜೋಕೊವಿಕ್, ಟೆನ್ನಿಸ್ ದಂತಕಥೆ ರೋಜರ್ ಫೆಡರರ್ ರನ್ನು ಸೋಲಿಸಿದರು.
ಸರ್ಬಿಯಾದ ನುವಾನ್ ಜೋಕೊವಿಕ್ ಗೆ ಇದು 8ನೇ ಆಸ್ಟ್ರೇಲಿಯನ್ ಓಪನ್ ಫೈನಲ್. ವಿಶೇಷವೆಂದರೆ ಜೋಕೊ ಇದುವರೆಗೆ ಆಸೀಸ್ ಓಪನ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿಲ್ಲ.
ಮಹಿಳೆಯರ ಕೂಟದ ಸೆಮಿ ಫೈನಲ್ ನಲ್ಲಿ ಅಮೇರಿಕಾದ ಸೋಫಿಯಾ ಕೆನಿನ್ ವಿಶ್ವದ ನಂ1 ಆಟಗಾರ್ತಿ ಆಶ್ಲೆ ಬಾರ್ಟಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಇದು ಸೋಫಿಯಾ ಕೆನಿನ್ ರ ಮೊದಲ ಗ್ರ್ಯಾನ್ ಸ್ಲ್ಯಾಮ್ ಫೈನಲ್.