ಬಾಗೇಪಲ್ಲಿ: ಕ್ಷೇತ್ರದಲ್ಲಿ ಸಿಪಿಐ(ಎಂ) ಜತೆ ಈವರೆಗೆ ಹೊಂದಾಣಿಕೆ ಬಗ್ಗೆ ಯಾರೂ ನಮ್ಮ ಜತೆ ಮಾತುಕತೆ ಮಾಡಿಲ್ಲ. ಅಂತಿಮವಾಗಿ ಜೆಡಿಎಸ್ ನಿಂದ ಅಧೀ ಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜ ರೆಡ್ಡಿರ ವರೇ ಆಗಿರುತ್ತಾರೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸೂರ್ಯ ಕನ್ವೆಂಷನ್ ಹಾಲ್‌ನಲ್ಲಿ ಖಾಸಗಿ ಕಾರ್ಯಕ್ರಮಕ್ಕಾಗಿ ಪಟ್ಟಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು. ಬಾಗೇಪಲ್ಲಿ ಚುನಾವಣೆಯಲ್ಲಿ ಈವರೆಗೆ ಯಾವ ರಾಜಕೀಯ ಪಕ್ಷದ ಜತೆಗೆ ಹೊಂದಾಣಿಕೆ ಬಗ್ಗೆ ಮಾತುಕತೆ ಮಾಡಿಲ್ಲ. ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ. ಜೆಡಿಎಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಿ.ಜೆ.ನಾಗರಾಜರೆಡ್ಡಿರವರ ಹೆಸರು ಪ್ರಕಟ ಮಾಡಲಾಗಿದೆ. ಅವರೇ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಡಿ.ಜೆ.ನಾಗರಾಜರೆಡ್ಡಿರವರು ಮೊದಲಿ ನಿಂದಲೂ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿದ್ದಾರೆ. ಇವರಿಗೆ ಟಿಕೆಟ್ ನೀಡದೇ ಬೇರೆಯವರಿಗೆ ನೀಡುವುದಿಲ್ಲ. ತಮ್ಮ ಸ್ವಕ್ಷೇತ್ರಗಳಲ್ಲಿ ಬಿಟ್ಟು ಬಾಗೇಪಲ್ಲಿ ಕ್ಷೇತ್ರಗಳಲ್ಲಿ ಅನಿತಾ ಕುಮಾರಸ್ವಾಮಿರವರನ್ನು ಅಭ್ಯರ್ಥಿ ಮಾಡಲು ನಮಗೇನೂ ಹುಚ್ಚು ಹಿಡಿದಿಲ್ಲ ಎಂದರು.
ಶಿವಲಿಂಗೇಗೌಡರು ಸೇರಿದಂತೆ ಅನೇಕರು ಪಕ್ಷ ತೊರೆದರೆ ಜೆಡಿಎಸ್‌ಗೆ ನಷ್ಟ ಇಲ್ಲ. ಸಿದ್ದರಾಮಯ್ಯ ರವರು ಎಲ್ಲ ಕಡೆ ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವುದಾಗಿ ಹೇಳಿದ್ದು, ಅವರೇ ಸೋಲೆತ್ತಿನ ಬಾಲ ಹಿಡಿಯುವವರು ಆಗಿದ್ದಾರೆ. ಅವರ ಪರಿಸ್ಥಿತಿ ನೋಡಿ, ಅವರಿಗೆ ಕ್ಷೇತ್ರ ಇಲ್ಲದೇ ರಾಜ್ಯದಲ್ಲೆಲ್ಲಾ ಓಡಾಡುತ್ತಿದ್ದಾರೆ. ದೇವೇಗೌಡ ಕುಟುಂಬದ ಬಗ್ಗೆ ಮಾತ ನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ನಾವು ಯಾರಿಗೂ ಏನೂ ಮೋಸ ಮಾಡಿ ಲ್ಲ. ದೇವೇಗೌಡರವರು, ಬೈರೇಗೌಡರು ಜತೆಯಲ್ಲಿ ರಾಜಕೀಯ ಮಾಡಿಕೊಂಡಿದ್ದವರು. ಕೃಷ್ಣಬೈರೇಗೌ ಡರವರು ಹಿಂದಿನ ಇತಿಹಾಸ ತಿಳಿದು ಮಾತನಾಡ ಬೇಕು. ನಮ್ಮ ಜೊತೆ ಇದ್ದು, ಅಧಿಕಾರ ಪಡೆದು, ನಾಯಕರಾಗಿ ನಮ್ಮ ಕುಟುಂಬಕ್ಕೆ ಎಲ್ಲರೂ ಚೂರಿ ಹಾಕಿದ್ದಾರೆ. ಎದುರಾಳಿ ಪಕ್ಷದ ರಾಜಕಾರಣಿಗಳು ನೀಚಮಟ್ಟದ ರಾಜಕೀಯ ಮಾಡಬಾರದು ಎಂದರು.
ಪಟ್ಟಣದ ಕೆಎಚ್‌ಬಿ ಕಾಲೋನಿಗೆ ಹೆಲಿಕಾಪ್ಟರ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸು ತ್ತಿದ್ದಂತೆ, ಜೆಡಿಎಸ್‌ನ ಅಭ್ಯರ್ಥಿ ಡಿ.ಜೆ.ನಾಗರಾಜರೆಡ್ಡಿ, ಪುತ್ರ ದೀಪಕ್ ಗೌಡ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಜೆಡಿಎಸ್ ನ ಶಾಸಕ ಬಂಡೆಪ್ಪ ಖಾಶಂಪುರ್, ಚಿಕ್ಕಬಳ್ಳಾಪುರದ ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮುನೇಗೌಡ, ಜೆಡಿಎಸ್ ಅಭ್ಯರ್ಥಿ ಡಿ.ಜೆ.ನಾಗರಾಜರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಹರಿನಾಥರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ಡು, ಪುರಸಭೆ ಸದಸ್ಯೆ ಸುಜಾತಾ ನಾಯ್ಡು, ಜೆಡಿಎಸ್ ಯುವ ಬ್ರಿಗೇಡ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಮುದ್ದಲಪಲ್ಲಿ ಎಂ.ಎನ್.ರಾಜಾರಾರೆಡ್ಡಿ, ಜೆಡಿಎಸ್ ತಾಲೂಕು ಗೌರವಾಧ್ಯಕ್ಷ ಮಹಮದ್ ಎಸ್. ನೂರುಲ್ಲಾ, ಅಧ್ಯಕ್ಷ ಸೂರ್ಯನಾರಾಯಣರೆಡ್ಡಿ, ಮುಖಂಡ ಚೇಳೂರಿನ ರಾಮಕೃಷ್ಣಾರೆಡ್ಡಿ, ಲಕ್ಷ್ಮೀನಾರಾಯಣ, ಪಿ.ಎಲ್.ಗಣೇಶ್ ಇತರರಿದ್ದರು.