Advertisement

ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾದ ‘ಗೋಲ್ಡ್‌ ರಶ್‌’ಪಟ್ಟಣ ಸಂಪೂರ್ಣ ಭಸ್ಮ

10:39 PM Aug 06, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ಪಶ್ಚಿಮ ಭಾಗವನ್ನು ದಹಿಸುತ್ತಿರುವ ಭೀಕರ ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾದ ಗೋಲ್ಡ್‌ ರಶ್‌ ಪಟ್ಟಣ ಸಂಪೂರ್ಣವಾಗಿ ಭಸ್ಮವಾಗಿದೆ.

Advertisement

ಕಾಡ್ಗಿಚ್ಚು ಆವರಿಸುವ ಮುನ್ನ ಅಲ್ಲಿದ್ದ ಸುಮಾರು 800 ನಾಗರಿಕರಿಗೆ ಸಂದೇಶ ರವಾನಿಸಿದ್ದ ಸ್ಥಳೀಯಾಡಳಿತ, ಆದಷ್ಟೂ ಬೇಗನೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತ್ತು. ಆದರೂ, ಹಲವಾರು ಜನರು ತಮ್ಮ ಮನೆಗಳನ್ನು ತೊರೆಯಲು ನಿರಾಕರಿಸಿದ್ದರಿಂದ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಮಾಡಿ ಅವರನ್ನು ಅಲ್ಲಿಂದ ತೆರವುಗೊಳಿಸಿದರು.

ಪೊಲೀಸರ ಪರಿಪರಿ ಮನವಿಗಳಿಗೆ ಜಗ್ಗದವರನ್ನು ಬಲವಂತವಾಗಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಕಾಡ್ಗಿಚ್ಚು ಪಟ್ಟಣವನ್ನು ಸಲ್ವ ದಿಕ್ಕುಗಳಿಂದ ಆವರಿಸಿತು. ಬೆಂಕಿಯನ್ನು ನಂದಿಸಲು ಮಾಡುವ ಎಲ್ಲಾ ಪ್ರಯತ್ನಗಳು ವಿಫ‌ಲವಾದವು.

ಇದನ್ನೂ ಓದಿ :ಹೆಸರಲ್ಲಿ ತಂದೆಯ ಸರ್‌ನೇಮ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್‌

ಶುಕ್ರವಾರ ರಾತ್ರಿ ಹೊತ್ತಿಗೆ ಗೋಲ್ಡ್‌ ರಶ್‌ನ ಬಹುತೇಕ ಭಾಗ ಭಸ್ಮವಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next