Advertisement

ದೀಪಾವಳಿ: ಸರ್ವಧರ್ಮಗಳ ಸಂಗಮ

12:33 PM Oct 20, 2017 | |

ಪುರಭವನ: ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ ದೀಪಾವಳಿಯ ಸರ್ವಧರ್ಮಗಳ ಸಂಗಮ ಪುರಭವನದಲ್ಲಿ ಜರಗಿತು. ಕಾರ್ಯಕ್ರಮದ ಅಂಗವಾಗಿ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ವೇ| ಮೂ| ಅನಂತ ಪದ್ಮನಾಭ ಆಸ್ರಣ್ಣ, ಸಿಎಸ್‌ಐ ಕೆ.ಎಸ್‌.ಡಿ. ಧರ್ಮಾಧ್ಯಕ್ಷ ರೆ| ಮೋಹನ್‌ ಮನೋರಾಜ್‌., ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌. ಮಸೂದ್‌, ಸಚಿವ ಯು. ಟಿ. ಖಾದರ್‌, ಶ್ರೀದೇವಿ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಎ. ಸದಾನಂದ ಶೆಟ್ಟಿ , ಯೇನೆಪೊಯ ಸಮೂಹ ಸಂಸ್ಥೆ, ಅಧ್ಯಕ್ಷ ಅಬ್ದುಲ್ಲ ಕುಂಞಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ಅಮರನಾಥ ಶೆಟ್ಟಿ, ಉಪ ಮೇಯರ್‌ ರಜನೀಶ್‌, ಸುರೇಶ್‌ ಚಂದ್ರ ಶೆಟ್ಟಿ, ಬಿ.ಎಚ್‌. ಖಾದರ್‌, ಸುನಿಲ್‌ ಪಾಯಸ್‌, ಶಶಿಧರ್‌ ಹೆಗ್ಡೆ, ಹೇಮನಾಥ ಶೆಟ್ಟಿ, ನಾಗವೇಣಿ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್‌, ಅಮೃತ್‌ ಕದ್ರಿ, ವಾಲ್ಟರ್‌ ಡಿ’ಸೋಜಾ ಕೋಡಿಜಾಲ್‌ ಇಬ್ರಾಹಿಂ, ಕೆ. ಅಶ್ರಫ್‌, ಶೌವಾದ್‌ ಗೂನಡ್ಕ, ನವೀನ್‌ ಡಿ’ ಸೋಜಾ, ಜೆ. ಅಬ್ದುಲ್‌ ಸಲೀಂ, ಸಾಹುಲ್‌ ಹಮೀದ್‌ ಮೊದಲಾದವರು ಉಪಸ್ಥಿತರಿದ್ದರು.

ಸುಮಾರು 1000ಕ್ಕಿಂತಲೂ ಅಧಿಕ ಮಂದಿಗೆ ಅಕ್ಕಿ ವಿತರಿಸಲಾಯಿತು. ಐವನ್‌ ಡಿ’ಸೋಜಾ ಸ್ವಾಗತಿಸಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ನಾಗೇಂದ್ರ ಕುಮಾರ್‌ ವಂದಿಸಿದರು. ವಸಂತ್‌ ಶೆಟ್ಟಿ ಮಾಸ್ಟರ್‌ ಹಾಗೂ ಅಭಿಷೇಕ್‌ ಶೆಟ್ಟಿ ಪಡೀಲ್‌ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಆಲ್ವಿನ್‌ ಪೌಲ್‌ ಮಂಗಳೂರು ಅವರಿಂದ ದೇಹದಾರ್ಢ್ಯ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಿಜೈ ಜನಾರ್ದನ್‌ ಬಳಗದವರಿಂದ ಸಂಗೀತ ರಸಮಂಜರಿ ಜರಗಿತು. ಪಿಲಿನಲಿಕೆ, ಭಾಷಣ ಸ್ಪರ್ಧೆ, ಡ್ರಾಯಿಂಗ್‌ ಸ್ಪರ್ಧೆ, ಗೂಡುದೀಪ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next