Advertisement

ಜಿಲ್ಲೆಯಾದ್ಯಂತ ಬೆಳಕಿನ ಹಬ್ಬದ ಸಂಭ್ರಮ

12:39 PM Nov 05, 2021 | Team Udayavani |

ದಾವಣಗೆರೆ: ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದಸಂಭ್ರಮ ಮನೆ ಮಾಡಿದ್ದು, ಗುರುವಾರ ಹಬ್ಬದಾ‌ರಣೆಯ ಸಡಗರಎಲ್ಲೆಡೆ ಕಂಡು ಬಂತು. ಕೊರೊನಾ ಮೂರನೇ ಅಲೆ ಬಗ್ಗೆ ಆತಂಕಪಡದೆ ಜನರು ಹಬ್ಬದ ಖರೀದಿ, ಸಿದ್ಧತೆಯಲ್ಲಿ ತೊಡಗಿರುವುದು ವಿಶೇಷವಾಗಿತ್ತು.

Advertisement

ದೀಪಾವಳಿ ಅಮವಾಸ್ಯೆ ದಿನವಾದ ಗುರುವಾರ ಅಂಗಡಿ,ವ್ಯಾಪಾರದ ಸ್ಥಳ, ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಲಕ್ಷ್ಮೀಪೂಜೆ ಮಾಡಲಾಯಿತು. ಶುಕ್ರವಾರ ನಡೆಯುವ ಬಲಿಪಾಡ್ಯಆಚರಣೆಗಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹೂವು ಖರೀದಿಜೋರಾಗಿತ್ತು. ದಿನಸಿ ಸೇರಿದಂತೆ ಉಳಿದೆಲ್ಲ ವಸ್ತುಗಳ ಬೆಲೆ ಏರಿದ್ದರಿಂದಜನಸಾಮಾನ್ಯರ ಜೇಬಿಗೂ ಬಿಸಿ ತಟ್ಟಿತು. ಆದರೆ ಪೂಜೆಗೆ ಬೇಕಾದಹಣ್ಣು ಹಾಗೂ ಹೂವಿನ ದರ ತುಸು ಕಡಿಮೆಯಾಗಿದ್ದು ಜನರಲ್ಲಿಸಮಾಧಾನ ಮೂಡಿಸಿತು.

ದೀಪಾವಳಿ ಹಬ್ಬಕ್ಕೆ ಬೇಕಾದ ಕಾಚಿಕಡ್ಡಿ,ಮಾವಿನ ಸೊಪ್ಪು, ಬಾಳೆಕಂಬ, ಹೂವು ಮತ್ತಿತರೆ ವಸ್ತುಗಳ ಮಾರಾಟಗುರುವಾರ ತಡರಾತ್ರಿವರೆಗೂ ನಡೆಯಿತು. ಮಂಡಿಪೇಟೆ, ಚಾಮರಾಜವೃತ್ತ, ಹೆ„ಸ್ಕೂಲ್‌ ಮೈದಾನ, ಪಿ.ಬಿ. ರಸ್ತೆ, ನಿಟುವಳ್ಳಿ ದುರ್ಗಾಂಬಿಕಾದೇವಿ ದೇವಸ್ಥಾನ ಬಳಿ, ಹೊಂಡದ ವೃತ್ತ, ಜಿಲ್ಲಾ ಕ್ರೀಡಾಂಗಣದ ಬಳಿಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು.

ಅದೇ ರೀತಿ ದೀಪಾವಳಿ ಹಬ್ಬದ ವಿಶೇಷ ಎನ್ನಿಸಿದ ಹಣತೆ,ವೈವಿಧ್ಯಮಯ ಆಕಾಶಬುಟ್ಟಿಗಳ ಮಾರಾಟ ಕೂಡ ಜೋರಾಗಿತ್ತು.ಬಟ್ಟೆ ಅಂಗಡಿಗಳಲ್ಲಿಯೂ ವ್ಯಾಪಾರ ಉತ್ತಮವಾಗಿತ್ತು. ಒಟ್ಟಾರೆಜಿಲ್ಲೆಯಾದ್ಯಂತ ದೀಪಾವಳಿಯನ್ನು ಜನರು ಶ್ರದ್ಧಾ-ಭಕ್ತಿಯಿಂದಹಾಗೂ ಸಡಗರ- ಸಂಭ್ರಮದಿಂದ ಆಚರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next