Advertisement

ಸದಾಶಯ ದೀಪಾವಳಿ ಸಂಚಿಕೆ ಬಿಡುಗಡೆ 

11:52 AM Oct 25, 2017 | |

ಬಲ್ಮಠ: ಅಧ್ಯಯನ, ಸಂಶೋಧನ ಗ್ರಂಥಗಳ ಮೇಲಿನ ಟೀಕೆಗಳು ಸಾಹಿತಿಗಳನ್ನು ಧೃತಿಗೆಡಿಸುತ್ತಿದೆ ಎಂದು ಸಾಹಿತಿ, ಸಂಶೋಧಕಿ ಇಂದಿರಾ ಹೆಗ್ಡೆ ಹೇಳಿದರು.

Advertisement

ಇಂಟರ್‌ನ್ಯಾಶನಲ್‌ ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌ನ ಮುಖವಾಣಿ ಸದಾಶಯ ತ್ತೈಮಾಸಿಕದ ದೀಪಾವಳಿ ವಿಶೇಷ ಸಂಚಿಕೆಯನ್ನು ಮಂಗಳವಾರ ನಗರದ ಹೊಟೇಲ್‌ ಕುಡ್ಲ ಪೆವಿಲಿಯನ್‌ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯದ ವಿಮರ್ಶೆ ತಪ್ಪಲ್ಲ. ಆದರೆ ವಿನಾ ಕಾರಣ ಟೀಕೆ ಸಲ್ಲದು. ಪ್ರಸ್ತುತ ಬಹುತೇಕ ಸಂಶೋಧನ ಗ್ರಂಥಗಳ ಮೇಲೆ ಟೀಕೆಗಳು ಹೆಚ್ಚುತ್ತಿದ್ದು, ಸಾಹಿತಿಗಳಿಗೆ ನೋವಾಗುತ್ತಿದೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ತಾರಾನಾಥ ಶೆಟ್ಟಿ ಬೋಳಾರ ಅವರನ್ನುಟ್ರಸ್ಟ್‌ ವತಿಯಿಂದ ಸಮ್ಮಾನಿಸಲಾಯಿತು. ಮೂಡಬಿದಿರೆಯಲ್ಲಿ ಬಿಡುಗಡೆಯಾದ ಸದಾನಂದ ಶೆಟ್ಟಿ ಅವರ ಅಭಿನಂದನ ಗ್ರಂಥ ‘ಸದಾಭಿನಂದನೆ’ಯ ಲೇಖಕರನ್ನು ಗೌರವಿಸಲಾಯಿತು.

ರೋಟರಿ ಜಿಲ್ಲಾ ಮಾಜಿ ಗವರ್ನರ್‌ ಕೃಷ್ಣ ಶೆಟ್ಟಿ, ಟ್ರಸ್ಟ್‌ನ ಅಮರನಾಥ ಶೆಟ್ಟಿ, ಚಿತ್ತರಂಜನ್‌ ರೈ ಪಡು, ಶ್ರೀ ದೇವಿ ಎಜುಕೇಶನ್‌ ಟ್ರಸ್ಟ್‌ನ ನಿರ್ದೇಶಕ ಕೆ.ವಿ. ಪ್ರಕಾಶ್‌, ವಿಜಯಲಕ್ಷ್ಮೀ ಶೆಟ್ಟಿ, ದೇವಿಚರಣ್‌ ಶೆಟ್ಟಿ, ಸುರೇಶ್ಚಂದ್ರ, ರಾಜ್‌ ಗೋಪಾಲ್‌ ರೈ, ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ನವನೀತ್‌ ಶೆಟ್ಟಿ ಕದ್ರಿ ಸಮ್ಮಾನಿತರ ವಿವರ ನೀಡಿದರು. ವಸಂತ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ್‌ ರೈ ಕುಕ್ಕುವಳ್ಳಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next