Advertisement
ಗಂಗಾಮಾತೆಗೆ ಪೂಜೆ: ಲಂಬಾಣಿ ತಾಂಡದವರು ಸಾಮೂಹಿಕವಾಗಿ ಮಧ್ಯಾಹ್ನದ ಭೋಜನ ನಂತರ ತಾಂಡಾದಲ್ಲಿ ಹರಟೆ, ಮೋಜು, ಮಸ್ತಿ ನಡೆಯುತ್ತದೆ. ಕತ್ತಲಾಗುತ್ತಿದ್ದಂತೆ ಹೆಣ್ಣು ಮಕ್ಕಳು ಒಂಬತ್ತು ದಿನಗಳಿಂದ ಬೆಳೆಸಿದ್ದ ನವಧಾನ್ಯಗಳ ಪೈರು (ತೀಜ್) ಮತ್ತು ಮಣ್ಣಿನ ಹಣತೆ ಹೆಚ್ಚಿ ತಟ್ಟೆಯಲ್ಲಿ ಇಟ್ಟು ದೇವಾಲಯಗಳಿಗೆ ನಂತರ ಎಲ್ಲ ಮನೆಗಳಿಗೆ ತೆರಳಿ ಹೊಸ ವರ್ಷದ ಶುಭಾಶಯ ಕೋರುತ್ತಾರೆ. ಇಡೀ ರಾತ್ರಿ ಈ ಪ್ರಕ್ರಿಯೆ ಮುಗಿದ ನಂತರ ಹೆಣ್ಣು ಮಕ್ಕಳು ಮಾರನೇ ದಿನ ಹೊಸ ಉಡುಗೆಯೊಂದಿಗೆ ಪೈರುಗಳನ್ನು ಅಲಂಕರಿಸಿ ತಲೆಯ ಮೇಲೆ ಹೊತ್ತು ನೀರು ತುಂಬಿರುವ ಕೆರೆ ಕುಂಟೆಗಳ ಬಳಿ ತೆರಳಿ ಭಕ್ಷಿಸು ಬಂದ ಹಣದಲ್ಲಿ ಪ್ರಸಾದ ಸಿದ್ಧಪಡಿಸಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುತ್ತಾರೆ.
Related Articles
Advertisement
ಪ್ರತಿ ದಿನ ಬಿತ್ತನೆ ಮಾಡಿದ ನವಧಾನ್ಯಗಳ ಬುಟ್ಟಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ತಮ್ಮ ಲಂಬಾಣಿ ಭಾಷೆಯಲ್ಲೇ ಹಾಡುವುದು ನೃತ್ಯ ಮಾಡುವುದು ಸಂಪ್ರದಾಯ ಎಂದು ಲಕ್ಷ್ಮಮ್ಮ ಹೇಳುತ್ತಾರೆ. ದೇವಾಲಯದ ಆವರಣಗಳಲ್ಲಿ, ತಾಂಡದ ನಾಯಕ್(ಯಜಮಾನ), ತೋಟಿ (ಡಾವ್), ತಳವಾರ(ಕಾರ್‌ಬಾರಿ)ಮನೆಯಂಗಳ ದಲ್ಲಿ ಹೂವುಗಳನ್ನು ಚೆಲ್ಲುವುದು ಸಂಪ್ರದಾಯ. ನಂತರ ಕುಟುಂಬದ ಹಿರಿಯ ಮೃತರಾಗಿ ರುವವ ರಿಗೆ ಧೂಪ(ದಬಕಾರ್)ಸಲ್ಲಿಸುವುದು ಮತ್ತು ಮೃತರ ಸಮಾಧಿಗಳಿಗೆ ಪೂಜೆ ನೈವೇದ್ಯ ನಡೆಸು ವುದು ಸಮುದಾಯದಲ್ಲಿ ನಡೆದು ಬಂದಿರು ವುದು ರೂಢಿ ಎಂದು ಹಿರಿಯರು ಹೇಳುತ್ತಾರೆ.