Advertisement
ಅ.31ನರಕ ಚತುರ್ದಶಿ, ನ.1 ರಂದು ಕನ್ನಡ ರಾಜ್ಯೋತ್ಸವ, ನ.2 ಬಲಿಪಾಡ್ಯ ಜತೆಗೆ ನ.3 ವಾರಾಂತ್ಯ ಭಾನುವಾರ ಇರುವ ಕಾರಣ ಸರ್ಕಾರಿ ನೌಕರರು, ಶಾಲಾ-ಕಾಲೇಜು ಮಕ್ಕಳು, ಕೆಲ ಖಾಸಗಿ ಸಂಸ್ಥೆ ಉದ್ಯೋಗಿಗಳಿಗೆ ಸತತ 4 ದಿನ ರಜೆ ಸಿಗಲಿವೆ. ಹಾಗಾಗಿ ಹಬ್ಬದ ಸಡಗರವನ್ನು ಕುಟುಂಬದೊಟ್ಟಿಗೆ ಕಳೆಯಲು ಅವಕಾಶ ಸಿಗುವ ಕಾರಣ ಜನರು ಮುಗಿಬಿದ್ದು ಕುಟುಂಬದೊಟ್ಟಿಗೆ ತಮ್ಮ ಊರುಗಳಿಗೆ ತೆರಳಿದರು.
Related Articles
Advertisement
ಹೆಚ್ಚುವರಿ ಬಸ್ಗಳ ಕಾರ್ಯಾಚರಣೆ: ಮತ್ತೂಂದೆಡೆ ಸರಣಿ ರಜೆಗಳಿರುವುದರಿಂದ ರಾಜಧಾನಿ ಬೆಂಗಳೂರಿ ನಿಂದ ಬುಧವಾರ ಸಂಜೆಯಿಂದಲೇ ಲಕ್ಷಾಂತರ ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದರು. ಅದರಿಂದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ, ಶಾಂತಿನಗರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿ ನಗರದ ಪ್ರಮುಖ ಕಡೆಯ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಜನಜಂಗುಳಿ ನಿರ್ಮಾಣವಾಗಿತ್ತು. ಅದರಿಂದ ಕೆಲವು ಕಡೆಗಳಲ್ಲಿ ಬಸ್ಗಳಿಗಾಗಿ ಪ್ರಯಾಣಿಕರು ಪರದಾಡಿದರು.
ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ 2000 ಬಸ್
ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿಯಾಗಿ 2000 ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ್ತೂಂದೆಡೆ ಬಿಎಂಟಿಸಿಯಿಂದಲೂ ಹೆಚ್ಚುವರಿಯಾಗಿ ಬೇರೆ ಊರುಗಳಿಗೆ ಹತ್ತಾರು ವಿಶೇಷ ಬಸ್ಗಳ ನಿಯೋಜಿಸಲಾಗಿತ್ತು.
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಬೀದರ್, ತಿರುಪತಿ, ಹೈದರಾಬಾದ್ ಸೇರಿ ಮುಂತಾದ ಸ್ಥಳಗಳಿಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಬಸ್ಗಳು ಕಾರ್ಯಾಚರಣೆ ನಡೆಸಿದವು.
ಇನ್ನು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಹೆಚ್ಚುವರಿ ವಿಶೇಷ ಕೆಎಸ್ಆರ್ಟಿಸಿ/ಬಿಎಂಟಿಸಿ ಬಸ್ ಸೇವೆ ಒದಗಿಸಲಾಗಿತ್ತು. ಅಲ್ಲದೆ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ ದಿಂದ ತಮಿಳುನಾಡು, ಕೇರಳ, ಚೆನ್ನೈ, ಕೊಯಮ ತ್ತೂರು, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಪ್ರತಿಷ್ಠಿತ ಬಸ್ಗಳಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಪ್ರಯಾಣಿಕರು ಪ್ರಯಾಣಿಸಿದರು. ಕೆಲವರು ಆಸನಗಳು ಸಿಗದೆ ಅಧಿಕ ಹಣ ನೀಡಿ ಖಾಸಗಿ ಬಸ್ಗಳಲ್ಲಿಯೇ ತೆರಳುವ ಸನ್ನಿವೇಶ ಇತ್ತು.