Advertisement
ಬಟ್ಟೆ, ಇಲೆಕ್ಟ್ರಾನಿಕ್ಸ್, ಫರ್ನಿಚರ್, ಗೃಹೋಪಕರಣ, ವಾಹನ, ಸಿಹಿ ತಿಂಡಿ, ಸಹಿತ ವಿವಿಧ ಉಡುಗೋರೆ ಮಾರಾಟದ ಅಂಗಡಿಗಳು, ಸಂಸ್ಥೆಯವರು ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುವ ಘೋಷಣೆ ಮಾಡಿದ್ದಾರೆ. ಸಂಸ್ಥೆಯ ಉದ್ಯೋಗಿ, ಕಾರ್ಮಿಕರು, ಸ್ನೇಹಿತರು, ಕುಟುಂಬ ಸದಸ್ಯರಿಗೆ ಸಿಹಿ ತಿಂಡಿ ನೀಡುವ ಸಲುವಾಗಿ ವಿವಿಧ ಬೇಕರಿ, ಕ್ಯಾಟರಿಂಗ್ ಅವರಿಗೆ ಮುಂಚಿತ ಆರ್ಡರ್‌ಗಳನ್ನು ನೀಡಿದ್ದಾರೆ. ಹೆಚ್ಚುವರಿ ಸಿಹಿ ತಿಂಡಿ ಪೊಟ್ಟಣ ತಯಾರಿಸುವ ಕಾರ್ಯವು ಎಲ್ಲೆಡೆ ಭರದಿಂದ ಸಾಗುತ್ತಿದೆ. ಶುಕ್ರವಾರದವರೆಗೂ ವ್ಯಾಪಾರ ವಹಿವಾಟು ಹೆಚ್ಚಿರುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಪೇಟೆಗಳ ಪ್ರಮುಖ ಅಂಗಡಿಗಳ ಎದುರು ಗೂಡುದೀಪಗಳನ್ನು ನೇತು ಹಾಕಲಾಗಿದೆ. ಬಣ್ಣ-ಬಣ್ಣಗಳಿಂದ ಇದು ಕಂಗೊಳಿಸುತ್ತಿದ್ದು, ವೈವಿಧ್ಯಮಯವಾಗಿ ಕಂಗೊಳಿಸುತ್ತಿದೆ. ಅದೇ ರೀತಿ ಮಿನಿಯೇಚರ್‌ಗಳು, ಹಣತೆ, ಕ್ಯಾಂಡಲ್, ಪಟಾಕಿ ಸಹಿತ ಇತರ ಪರಿಕರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಬ್ಬದ ಪ್ರಯುಕ್ತ ಹೂವಿನ ಮಾರಾಟ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ತರಕಾರಿ ದರದಲ್ಲಿ ಏರಿಳಿತ
ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿ ದರವು ಕೊಂಚ ಏರಿಳಿತ ಕಾಣುತ್ತಿದೆ. ಅಲ್ಲದೆ ಬೆಂಗಳೂರಿನ ಮಳೆ ಕಾರಣ ಸೊಪ್ಪು, ಕೆಲವು ತರಕಾರಿ ಪೂರೈಕೆಯಲ್ಲಿಯೂ ವ್ಯತ್ಯಾಸವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಯಶವಂತ್.
Related Articles
Advertisement