ಮಹಾನಗರ: ಯುವಾಬ್ರಿಗೇಡ್ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬದ ಸಂಭ್ರಮವನ್ನು ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಆಚರಿಸುತ್ತಿದ್ದು, ಈ ಬಾರಿ ಮಂಜೇಶ್ವರದ ಸಮೀಪದಲ್ಲಿರುವ ಸ್ನೇಹಾಯಲದಲ್ಲಿ ಆಚರಿಸಿದರು. ಆಶ್ರಮದಲ್ಲಿರುವವರಿಗೆ ಸಿಹಿ ಹಂಚಿ ದೀಪಾವಳಿಯ ಅಭ್ಯಂಗ ಸ್ನಾನಕ್ಕೆ ತೈಲನೀಡಿದರು. ನೆರೆದವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ದೀಪಾವಳಿ ಆಚರಣೆ ಶ್ಲಾಘನೀಯ
ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿ, ಯುವಾಬ್ರಿಗೇಡಿನ ಇಂತಹ ಕಾರ್ಯಗಳು ಶ್ಲಾಘನೀಯ. ಯುವಕರು ಸೇವಾಕಾರ್ಯದಲ್ಲಿರುವ ಹೆಚ್ಚೆಚ್ಚು ತೊಡಗಿಕೊಂಡಾಗ ಮಾತ್ರ ರಾಷ್ಟ್ರ ಬಲಿಷ್ಠಗೊಳ್ಳಲು ಸಾಧ್ಯ. ಅವಕಾಶ ವಂಚಿತರ ಮೊಗದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುವಂತೆ ಮಾಡಿದ ಕಾರ್ಯಕರ್ತರನ್ನು ಶ್ಲಾಘಿಸಿದರು.
ಯುವಾಬ್ರಿಗೇಡಿನ ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ, ಮಂಗಳೂರು ಸಂಪರ್ಕ ಪ್ರಮುಖ್ ವಿನೋದ್, ಮಂಜಯ್ಯ ನೇರೆಂಕಿ, ಭಾಸ್ಕರ್, ಗೌರವ್, ಕೇಶವ ಮತ್ತಿತರರು ಉಪಸ್ಥಿತರಿದ್ದರು.
ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಸ್ವಾಮಿಜಿ ಪ್ರಸಾದ ರೂಪವಾಗಿ ಕೊಡಮಾಡಿದ ಸಿಹಿ ತಿಂಡಿ ಮತ್ತು ಪುತ್ತೂರಿನ ಎಸ್‌ಡಿಪಿ ಆಯುರ್ವೇದಿಕ್‌ನವವರು ನೀಡಿದ ಅಭ್ಯಂಗ ತೈಲವನ್ನು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರ, ಅಸೈಗೋಳಿಯ ಅಭಯಾಶ್ರಮ, ಸಂವೇದನ ಮಕ್ಕಳ ಮನೆ, ಪೊಳಲಿ ರಾಮಕೃಷ್ಣ ತಪೋವನ, ಕಂಕನಾಡಿ ಬಾಲಿಕಾಶ್ರಮದ ಮಕ್ಕಳಿಗೆ ವಿತರಿಸಲಾಯಿತು.