ಮುಂಬಯಿ: ಕತ್ತಲೆ ಎಂಬ ಋಣಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಬೆಳಕೆಂಬ ಧನಾತ್ಮಕ ಚಿಂತನೆಯನ್ನು ಅನುಷ್ಠಾನಗೊ ಳಿಸುವುದು ದೀಪಾವಳಿ ಹಬ್ಬದ ವೈಶಿಷ್ಟÂವಾಗಿದೆ. ಅಧ್ಯಾತ್ಮಿಕ ತಳಹದಿ ಹೊಂದಿರುವ ಪ್ರತಿಯೊಂದು ಹಬ್ಬಗಳು ಚದುರಿದ ಕುಟುಂಬ ಸದಸ್ಯರನ್ನು ಒಗ್ಗೂಡಿಸುವ ಮಾಧ್ಯ ಮವಾಗಿದೆ ಎಂದು ಪಲಿಮಾರು ಮಠದ ಪ್ರಬಂಧಕ ಟ್ರಸ್ಟಿ, ವಿದ್ವಾನ್ ರಾಧಾಕೃಷ್ಣ ಭಟ್ ಅವರು ನುಡಿದರು.
ನ. 7 ರಂದು ಸಂಜೆ ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ನಡೆದ ಬಲೀಂದ್ರ ಪೂಜೆ, ಲಕ್ಷಿ¾à ಪೂಜೆ, ದೀಪಾವಳಿ ಆಚಾರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಜ್ಞಾನದ ಜ್ಯೋತಿಯಂತಿರುವ ದೀಪಾವಳಿ ಹಬ್ಬ ಹೃದಯ ಮತ್ತು ಮನಸ್ಸುಗಳನ್ನು ಒಗ್ಗೂಡಿಸುವಂತಾಗಬೇಕು. ಕೃಷಿ ಪ್ರಧಾನ ತುಳುನಾಡಿನಲ್ಲಿ ಬಲೀಂದ್ರನ ಪೂಜೆ, ಗೋಪೂಜೆ, ಧನಲಕ್ಷ್ಮೀ ಪೂಜೆ, ತುಳಸಿ ಪೂಜೆಗಳು ವಿಶಿಷ್ಟ ಪರಂಪರೆಯೊಂದಿಗೆ ಈಗಲೂ ಮುಂದುವರಿದಿದೆ ಎಂದರು.
ಉಡುಪಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಇಚ್ಛೆ, ಸಲಹೆ, ಸೂಚನೆ ಹಾಗೂ ಆಶೀರ್ವಾ ದಗಳೊಂದಿಗೆ ತುಳಸಿ ಪೂಜೆಯವರೆಗೆ ಶ್ರೀ ಬಾ ಲಾಜಿ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಅವರು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿರುವ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ ಬಲೀಂದ್ರನ ಸ್ಮರಣೆಗೈದರು. ಆನಂತರ ಶ್ರೀನಿವಾಸ ದೇವರಿಗೆ, ಪರಿವಾರ ದೇವರಾದ ಶ್ರೀ ಆಂಜನೇಯ, ಶ್ರೀ ಪದ್ಮಾಂಬಿಕೆ, ಶ್ರೀ ಪರಮೇಶ್ವರ, ಶ್ರೀ ನಾಗದೇವರು ಹಾಗೂ ನವಗ್ರಹಗಳಿಗೆ, ಶ್ರೀ ಶನಿದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಟ್ರಸ್ಟಿ ಸಚ್ಚಿದಾನಂದ ರಾವ್. ಗಣೇಶ್ ಭಟ್ ಸಹಕರಿಸಿದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಚಿತ್ರ-ವರದಿ : ರಮೇಶ್ ಅಮೀನ್