Advertisement

ದೀಪಾವಳಿ ಹಬ್ಬ ಸಾಮೂಹಿಕ ಆಚರಣೆಯಾಗಲಿ: ಡಾ|ಜಿ. ಶಂಕರ್‌

12:15 AM Oct 30, 2019 | Team Udayavani |

ಮಲ್ಪೆ: ದೀಪಾವಳಿ ಹಬ್ಬ ವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಇನ್ನಷ್ಟು ಮನೋರಂಜನೆ ಸಿಗುವಂತಾಗಲಿ. ಸಮಾಜಮುಖೀ ಕಾಯಕದಲ್ಲಿ ತೊಡಗಿಕೊಂಡಿರುವ ಇಲ್ಲಿನ ಬೀಚ್‌ ಫ್ರೆಂಡ್ಸ್‌ನ ಸಮಾಜ ಸೇವೆ ಇನ್ನಷ್ಟು ಹೆಚ್ಚಾಗುವಂತಾಗಲಿ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಹೇಳಿದರು. ಅವರು ಮಂಗಳವಾರ ಮಲ್ಪೆ ಬೀಚ್‌ ಫ್ರೆಂಡ್ಸ್‌ ವತಿಯಿಂದ ಮಲ್ಪೆ ಬೀಚ್‌ನಲ್ಲಿ ದೀಪಾವಳಿ ಹಬ್ಬದ ಪಾಡ್ಯದ ವೈವಿಧ್ಯಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಮಲ್ಪೆ ಬೀಚ್‌ ಫ್ರೆಂಡ್ಸ್‌ 15 ವರ್ಷ ಗಳಿಂದ ದೀಪಾವಳಿ ಪ್ರಯುಕ್ತ ವಿವಿಧ ಕಾರ್ಯ ಕ್ರಮವನ್ನು ಆಯೋಜಿಸಿರು ವುದರಿಂದ ಪಾಡ್ಯದಂದು ಎಲ್ಲರೂ ಬೀಚ್‌ಗೆ ಬರುವ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿ ದೀಪಾವಳಿಯ ಅರ್ಥಪೂರ್ಣ ಆಚರಣೆಯಾಗುತ್ತಿದೆ ಎಂದರು.

ಉಡುಪಿ ಮತ್ತು ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಉದ್ಯಮಿಗಳಾದ ಆನಂದ ಸಿ. ಕುಂದರ್‌, ಹರಿಯಪ್ಪ ಕೋಟ್ಯಾನ್‌, ಸಾಧು ಸಾಲ್ಯಾನ್‌, ಆನಂದ ಪಿ. ಸುವರ್ಣ, ಕೆ. ಉದಯ ಕುಮಾರ್‌, ಎನ್‌.ಟಿ. ಅಮೀನ್‌, ದಯಾನಂದ ಕುಂದರ್‌, ನ್ಯಾಯವಾದಿ ಸುಪ್ರಸಾದ್‌ ಶೆಟ್ಟಿ, ಮೊಗವೀರ ಯುವಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಬೀಚ್‌ ಅಭಿವೃದ್ಧಿ ಸಮಿತಿಯ ಸುದೇಶ್‌ ಶೆಟ್ಟಿ, ಬೀಚ್‌ ಫ್ರೆಂಡ್ಸ್‌ ಅಧ್ಯಕ್ಷ ಧನಂಜಯ ಕುಂದರ್‌, ಚಂದ್ರಾವತಿ ಮುಖ್ಯ ಅತಿಥಿಗಳಾಗಿದ್ದರು.

ಸಮ್ಮಾನ, ನೆರವು
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್‌ ಮರಕಾಲ, ಅಂತಾರಾಷ್ಟ್ರೀಯ ವೈಟ್‌ ಲಿಫ್ಟರ್‌ ವಿಶ್ವನಾಥ್‌ ಗಾಣಿಗ ಕುಂದಾಪುರ ಮತ್ತು ನಿವೃತ್ತ ಯೋಧ ರಾಘವೇಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 7ನೇ ಮತ್ತು 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಪುರಸ್ಕಾರ, ಬಡರೋಗಿಗಳಿಗೆ ಸಹಾಯಧನ ವಿತರಿಸಲಾಯಿತು. ಪಾಂಡುರಂಗ ಮಲ್ಪೆ ಸ್ವಾಗತಿಸಿದರು. ಚಂದ್ರೇಶ್‌ ಪಿತ್ರೋಡಿ ನಿರೂಪಿಸಿದರು. ಕಿಶೋರ್‌ ಡಿ. ಸುವರ್ಣ ವಂದಿಸಿದರು.

ಎರಡು ದಿನವೂ ಜನಸಾಗರ
ಈ ಬಾರಿ ಎರಡು ದಿನ ದೀಪಾವಳಿ ಪಾಡ್ಯವನ್ನು ಆಚರಿಸಲಾಗಿದ್ದು ಎರಡೂ ದಿನ ಮಲ್ಪೆ ಬೀಚ್‌ನಲ್ಲಿ ಜನಸಾಗರವೇ ನೆರೆದಿತ್ತು. ಕಣ್ಣು ಹಾಯಿಸಿದಷ್ಟು ಬೀಚ್‌ನ ಉದ್ದಕ್ಕೂ ಜನಸಮೂಹವೇ ಕಾಣುತ್ತಿತ್ತು. ವಾಹನ ಪಾರ್ಕಿಂಗ್‌ ಸಮಸ್ಯೆಯಿಂದಾಗಿ ಬೀಚ್‌ನತ್ತ ಸಾಗುವ ವಾಹನಗಳನ್ನು 2 ಕಿ.ಮೀ. ದೂರದಲ್ಲಿಯೇ ತಡೆದು ನಿಲ್ಲಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next