Advertisement

ನರೇಗಾದಲ್ಲಿ ದಿವ್ಯಾಂಗರ ನೋಂದಣಿ ಹೆಚ್ಚಳ

01:30 AM Nov 22, 2021 | Team Udayavani |

ಬೆಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿವ್ಯಾಂಗರ ನೋಂದಣಿ ಹೆಚ್ಚಾಗಿದೆ. ಇದರ ಜತೆಗೆ ಉದ್ಯೋಗ ಪಡೆದುಕೊಳ್ಳು ತ್ತಿರು ವವರ ಸಂಖ್ಯೆಯೂ ದ್ವಿಗುಣಗೊಂಡಿದೆ.

Advertisement

ನರೇಗಾ ಯೋಜನೆಯಡಿ ಇದುವರೆಗೆ ಒಟ್ಟು 1.27 ಕೋಟಿ ಜನರು ನೋಂದಾಯಿಸಿದ್ದಾರೆ. ಅವರ ಪೈಕಿ 96,746 ಮಂದಿ ದಿವ್ಯಾಂಗರು ಉದ್ಯೋಗ ಚೀಟಿ ಪಡೆದಿ ದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಆಯುಕ್ತಾಲಯ ಗ್ರಾಮ ಮಟ್ಟ ದಲ್ಲಿ ದಿವ್ಯಾಂಗರ ಸಮೀಕ್ಷೆ ನಡೆಸಿ, ಮಾಹಿತಿ ಕ್ರೋಡೀ ಕರಿಸಿ ನರೇಗಾ ಉದ್ಯೋಗ ಚೀಟಿ ನೀಡು ತ್ತಿದೆ. ಪ್ರಸಕ್ತ ಸಾಲಿನಲ್ಲಿ 96,746 ಮಂದಿ ನೋಂದಾಯಿಸಿಕೊಂಡಿದ್ದು 21,133 ಮಂದಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ನರೇಗಾದಡಿ ದಿವ್ಯಾಂಗರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ನೀಡ ಲಾಗುತ್ತಿದೆ. ಕಾಯಕ ಬಂಧುವಾಗಿ ಕೆಲಸ ನಿರ್ವಹಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಇತರ ಕೆಲಸಗಾರರಿಗೆ ಕುಡಿಯುವ ನೀರು ಒದಗಿಸುವುದು, ಮಹಿಳಾ ಕೆಲಸಗಾರರ ಮಕ್ಕಳ ಲಾಲನೆ ಪಾಲನೆ, ಗಿಡ ನೆಡುವುದು, ಬಾಂಡಲಿಗೆ ಜಲ್ಲಿ, ಮಣ್ಣು ತುಂಬುವುದು ಸೇರಿ ಚಿಕ್ಕಪುಟ್ಟ 24 ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.

21,133 ಮಂದಿಗೆ ಉದ್ಯೋಗ
2018-19ರಲ್ಲಿ 62,235 ಮಂದಿ ನೋಂದಾಯಿಸಿದ್ದು, ಅವರಲ್ಲಿ 9,449 ಮಂದಿ ಕೆಲಸ ಪಡೆದು ಕೊಂಡರೆ, 2020-21ರಲ್ಲಿ ನೋಂದಣಿಯಾದ 96,909 ಮಂದಿ ಯಲ್ಲಿ 20,623 ಮಂದಿ ಉದ್ಯೋಗ ಗಳಿಸಿ ದ್ದಾರೆ. 2021-22ರಲ್ಲಿ 96,746 ಮಂದಿ ನೋಂದಾಯಿಸಿದ್ದು, ಅವರಲ್ಲಿ 21,133 ಮಂದಿ ಫ‌ಲಾನು  ಭವಿಗಳು ಉದ್ಯೋ ಗಾವ ಕಾಶ ವನ್ನು ಪಡೆದು  ಕೊಂಡಿರುವು ದಾಗಿ ಅಂಕಿ- ಅಂಶಗಳು ತಿಳಿಸಿವೆ.

ಇದನ್ನೂ ಓದಿ:ಕಾರು ಹರಿಸಿ ಕೊಲೆ ಯತ್ನ ಆರೋಪ : ಟಿಎಂಸಿ ಯುವ ನಾಯಕಿ ಸಯೋನಿ ಬಂಧನ

Advertisement

ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ
ದಿವ್ಯಾಂಗರು ಅರ್ಜಿ ಸಲ್ಲಿಸಿದ ವಾರದೊಳಗೆ ಗ್ರಾ.ಪಂ.ನಿಂದ ವಿಶೇಷ ಉದ್ಯೋಗ ಚೀಟಿ ಸಿಗಲಿದೆ. ಸಂಪೂರ್ಣ ದೃಷ್ಟಿ ದೋಷ, ಬುದ್ಧಿಮಾಂದ್ಯತೆ, ದೇಹ ಸ್ವಾಧೀನ ತಪ್ಪಿರುವವರನ್ನು ಹೊರತು ಪಡಿಸಿದರೆ ಉಳಿದೆಲ್ಲರಿಗೂ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಸರಕಾರ 2013
ರಲ್ಲಿ ದಿವ್ಯಾಂಗ ರಿಗಾಗಿ 9 ವಿಭಾಗದಲ್ಲಿ ವಿವಿಧ ಕೆಲಸಗಳನ್ನು ಗುರುತಿಸಿದ್ದು, ಫ‌ಲಾನುಭವಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ನೀಡಲು ಆದೇಶಿಸಿದೆ.

ಬೆಳಗಾವಿಯಲ್ಲೇ ಹೆಚ್ಚು
ಬೆಳಗಾವಿಯಲ್ಲಿ ಅತ್ಯ ಧಿ ಕ 10,946, ಚಿಕ್ಕಬಳ್ಳಾಪುರದಲ್ಲಿ 9,259,ಕೊಪ್ಪಳದಲ್ಲಿ 9,219, ಬಾಗಲಕೋಟೆಯಲ್ಲಿ 6,668, ರಾಯಚೂರು ಜಿಲ್ಲೆಯಲ್ಲಿ 5,388 ಮಂದಿ ದಿವ್ಯಾಂಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 10,660 ಮಂದಿ ಉದ್ಯೋಗಾವಕಾಶ ಪಡೆದಿ
ದ್ದಾರೆ. ಕೊನೆಯ 5 ಸ್ಥಾನಗಳಲ್ಲಿರುವ ದಕ್ಷಿಣಕನ್ನಡದಲ್ಲಿ 1,204, ಉತ್ತರ ಕನ್ನಡದಲ್ಲಿ 1,011, ಧಾರವಾಡದಲ್ಲಿ 990, ಉಡುಪಿಯಲ್ಲಿ 585 ಹಾಗೂ ಬೆಂಗಳೂರು ನಗರದಲ್ಲಿ 373 ಮಂದಿ ನೊಂದಾಯಿಸಿಕೊಂಡಿದ್ದು, ಅವರಲ್ಲಿ ಒಟ್ಟು 495 ದಿವ್ಯಾಂಗರು ಉದ್ಯೋಗ ಪಡೆದುಕೊಂಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ದಿನಗೂಲಿ 600ರಿಂದ 700 ರೂ ಇದೆ. ನರೇಗಾದಲ್ಲಿ ದಿನಗೂಲಿ 289 ರೂ. ಇರುವ ಹಿನ್ನೆಲೆಯಲ್ಲಿ ಕರಾವಳಿಗರು ನರೇಗಾದಲ್ಲಿ ಉದ್ಯೋಗ ಪಡೆಯಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.

ನರೇಗಾ ಯೋಜನೆಯಲ್ಲಿ ದಿವ್ಯಾಂಗರಿಗೆ ಅವಕಾಶ ಕಲ್ಪಿಸಲು ಇಲಾಖೆ ಕ್ರಮ ಕೈಗೊಂಡಿದೆ. ದಿವ್ಯಾಂಗರಿಗೆ ಆದ್ಯತೆ ಸಹ ನೀಡ ಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಯಾಗಿ ದ್ದಾರೆ. ಇದು ಉತ್ತಮ ಬೆಳವಣಿಗೆ.
– ಕೆ.ಎಸ್‌. ಈಶ್ವರಪ್ಪ ,
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next