Advertisement

2ನೇ ಮದುವೆ ಕಾರಣಕ್ಕೆ ವಿಚ್ಛೇದಿತ ಪತ್ನಿಗೆ ಜೀವನಾಂಶ ತಪ್ಪಿಸುವಂತಿಲ್ಲ: ಹೈಕೋರ್ಟ್‌

10:29 PM Oct 20, 2021 | Team Udayavani |

ಬೆಂಗಳೂರು: “ಇಸ್ಲಾಮಿನಲ್ಲಿ ಮದುವೆ ಎಂಬುದು ಒಂದು ಕರಾರು ಆಗಿದೆ. ಹಾಗಂತ, ಎರಡನೇ ಪತ್ನಿ ಹಾಗೂ ಆಕೆಯಿಂದ ಹುಟ್ಟಿದ ಮಕ್ಕಳ ನಿರ್ವಹಣೆ ಮಾಡಬೇಕಿರುವ ಹಿನ್ನಲೆಯಲ್ಲಿ ವಿಚ್ಛೇದನ ನೀಡಿದ ಮೊದಲ ಪತ್ನಿಗೆ ಜೀವನಾಂಶ ನೀಡುವ ಹೊಣೆಗಾರಿಕೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭುವನೇಶ್ವರಿ ನಗರದ ಎಜಾಜುರ್‌ ರೆಹ್ಮಾನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶದಲ್ಲಿ ಈ ಅಭಿಪ್ರಾಯ ಹೇಳಿದೆ.

ವಿಚ್ಛೇದಿತ ಪತ್ನಿ ಎರಡನೇ ಮದುವೆ ಆಗದಿದ್ದಾಗ ಮತ್ತು ಜೀವನ ನಿರ್ವಹಣೆಗೆ ಅಶಕ್ತಳಾಗಿದ್ದಾಗ “ಇದ್ದತ್‌’ (ತಲಾಕ್‌ ನೀಡಿದ ಬಳಿಕದ ನಾಲ್ಕು ತಿಂಗಳು) ಅವಧಿಯ ಅನಂತರವೂ ಆಕೆ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಮಾಜಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ಇದನ್ನೂ ಓದಿ:ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next