ಮದುವೆಗೆ ಹತ್ತು ದಿನಗಳು ಬಾಕಿ ಇರುವಾಗ ಹುಡುಗಿಯ ಬಗ್ಗೆ ಯಾರೋ ಎಚ್ಚರಿಸಿದ್ದರಂತೆ. ಹುಡುಗಿಯನ್ನು ಅವನು ಮೆಚ್ಚಿಕೊಂಡಿದ್ದ. ಹಾಗಾಗಿ, ಸುಮ್ಮನೆ ಹುಡುಗಿಯ ಬಗ್ಗೆ ಗಾಸಿಪ್ ಮಾಡುತ್ತಿದ್ದಾರೆಂದು ರಾಮೂ ಅದನ್ನು ತಳ್ಳಿಹಾಕಿದ್ದಾನೆ. ಮದುವೆಯಾದ ಮೇಲೆ ನಿಜವಾಗಿಯೂ ನಖರೆಯ ಹುಡುಗಿ ಅನ್ನಿಸಿತು.
ವಿಚ್ಛೇದನವಾಗಿ ಎರಡು ವರ್ಷಗಳಾಗಿದ್ದ ರಾಮೂಗೆ ಮೂವತ್ತೂಂದು ವರ್ಷ. ಒಳ್ಳೆಯ ಕೆಲಸದಲ್ಲಿದ್ದಾನೆ. ವಿಚ್ಛೇದನದ ವಿಚಾರ ಆಫೀಸ್‌ನಲ್ಲಿ ಯಾರಿಗೂ ಗೊತ್ತಿಲ್ಲ. ಸ್ನೇಹಿತರು, ಮಕ್ಕಳ ಹುಟ್ಟುಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುವಂತೆ ಕರೆದಾಗ ರಾಮೂವಿನ ಮುಖ ಪೆಚ್ಚಾಗುತ್ತದೆ. ಅಮ್ಮ ಊರಿನಿಂದ ಪದೇ ಪದೆ ಫೋನ್ ಮಾಡಿ, ಮರು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ರಾಮೂಗೆ ಮದುವೆ ಎಂದರೇ ಪ್ಯಾನಿಕ್ ಅಟ್ಯಾಕ್ ಆಗುತ್ತದೆ. ಅಮ್ಮನಿಗೆ ಅದನ್ನೆಲ್ಲಾ ವಿವರಿಸಲು ಸಾಧ್ಯವಿಲ್ಲ.
ತಂದೆ ವಿಧಿವಶರಾದಾಗ, ರಾಮೂಗೆ ಮೂರೇ ವರ್ಷ. ಚಿಕ್ಕ ಪಿಂಚಣಿಯಲ್ಲಿ ತಾಯಿ ಅಚ್ಚುಕಟ್ಟಾಗಿ ಮಕ್ಕಳನ್ನು ಸಾಕಿದಳು. ಮಿಠಾಯಿಯಿಂದ ಹಿಡಿದು ಸಿನಿಮಾ ನೋಡುವ ಖರ್ಚಿನ ತನಕ ದುಡ್ಡು ಹೊಂದಿಸಿಡುವಳು. ರಾಮೂ ಕಾಲೇಜು ಓದುವಾಗ ದಿನಪತ್ರಿಕೆ ಹಂಚಿದ, ಕಾರು ತೊಳೆದ, ಪರೀಕ್ಷೆಗೆ ಹೋಗುವಾಗ ಬಸ್ಸಿನ ಖರ್ಚು ಮಿಗಿಸಿ, ಬೇಕರಿಯಲ್ಲಿ ಬ್ರೆಡ್ಡು ತಿನ್ನುವ ಪರಿಸ್ಥಿತಿ ಇತ್ತು. ಏನೇ ಬಂದರೂ ಅದಕ್ಕೊಂದು ಧೈರ್ಯ ಅನ್ನುವುದಿತ್ತು. ಆದರೆ ಈಗ ಮರುಮದುವೆ ಎಂದರೆ ಉಸಿರುಗಟ್ಟಿದಂತಾಗುತ್ತದೆ.
ಮದುವೆಗೆ ಹತ್ತು ದಿನಗಳು ಬಾಕಿ ಇರುವಾಗ ಹುಡುಗಿಯ ಬಗ್ಗೆ ಯಾರೋ ಎಚ್ಚರಿಸಿದ್ದರಂತೆ. ಹುಡುಗಿಯನ್ನು ಅವನು ಮೆಚ್ಚಿಕೊಂಡಿದ್ದ. ಹಾಗಾಗಿ, ಅದೆಲ್ಲ ಗಾಸಿಪ್ ಎಂದು ರಾಮೂ ತಳ್ಳಿಹಾಕಿ¨ªಾನೆ. ಮದುವೆಯಾದ ಮೇಲೆ ನಿಜವಾಗಿಯೂ ನಖರೆಯ ಹುಡುಗಿ ಅನ್ನಿಸಿತು. ಯಾವ ವಿಚಾರಕ್ಕೂ ಸಹಮತವಿಲ್ಲ-ಸಹಕಾರವಿಲ್ಲ. ಕೂಡುವುದಕ್ಕೂ ಅವಳಿಗೆ ಇಷ್ಟವಿರಲಿಲ್ಲ. ಆದರೂ ಆತ ತಾಳ್ಮೆಗೆಡಲಿಲ್ಲ. ಅವಳ ತಂದೆಗೆ, ಗಂಡನ ಬಗ್ಗೆ ಇಲ್ಲಸಲ್ಲದೆ ದೂರು ಹೇಳಿ, ಮದುವೆಯಾದ ನಾಲ್ಕು ತಿಂಗಳಿಗೇ ಹುಡುಗಿ ವಿಚ್ಛೇದನದ ಮಾತನಾಡಿ¨ªಾಳೆ. ಅದಕ್ಕಾಗಿ, ರಾಮೂ ತಾಯಿಯೇ ಖುದ್ದು ಸಂಸಾರವನ್ನು ನಿಲ್ಲಿಸಲು ಬಂದರು. ಕಾರಣವಿಲ್ಲದೆ ಅತ್ತೆಯ ಜೊತೆಯೂ ಜಗಳ ಮಾಡಿ, ತಂದೆಯ ಮನೆಗೆ ಹೋದವಳು, ದಾಖಲಿಸಿದ್ದು ವರದಕ್ಷಿಣೆ ಕಿರುಕುಳದ ಪೊಲೀಸ್ ಕಂಪ್ಲೇಂಟ್. (ಈ ರೀತಿ ನೊಂದ ಅನೇಕ ಹುಡುಗರು ನನ್ನ ಬಳಿ ಕೌನ್ಸೆಲಿಂಗ್‌ಗೆ ಬರುತ್ತಿರುತ್ತಾರೆ) ನಂತರ, ನ್ಯಾಯಾಲಯವು ಹುಡುಗಿಗೆ ಜೀವನಾಂಶವಾಗಿ ಲಕ್ಷಗಟ್ಟಲೆ ಹಣ ಕೊಡಲು ಆದೇಶಿಸಿದೆ.
ಈಗ ಹುಡುಗಿ ತಾನು ಮೊದಲೇ ಪ್ರೀತಿಸಿದ್ದ ಹುಡುಗನ ಜೊತೆ ಧೈರ್ಯವಾಗಿ ಸಂಸಾರ ಮಾಡುತ್ತಿರುವುದನ್ನು ರಾಮೂ ನೋಡಿದ್ದಾನೆ. ಮದುವೆಯಾಗಿ ಮೋಸ ಹೋದೆ ಅನಿಸಿದೆ. ಸಮಯ, ಹಣ ಮತ್ತು ಮಾನ ಹೋದ ನಂತರ, ಇದರಲ್ಲಿ ನನ್ನ ತಪ್ಪೇನು ಎಂಬ ನೋವು, ಚಿಂತೆ ಕಾಡುತ್ತಿದೆ.
ಲವ್ ಮಾಡಿದ ಹುಡುಗನನ್ನು ಪೋಷಕರು ತಿರಸ್ಕರಿಸುವ ಭಯ ಹುಡುಗಿಯರಿಗೆ ಇರುತ್ತದೆ. ಹಾಗಾಗಿ, ಬಲವಂತದ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಹುಡುಗಿ ಸುಸಂಸ್ಕೃತಳಾದರೂ, ಬಲವಂತದ ಮದುವೆಯಿಂದ ತಪ್ಪಿಸಿಕೊಳ್ಳಲು ಮನಸ್ಸು ಯೋಚಿಸುತ್ತಿರುತ್ತದೆ. ಒಲ್ಲದ ಮದುವೆಗೆ ಹುಡುಗಿಯರು ಹೊಂದಿಕೊಳ್ಳಲು ಕಷ್ಟಪಟ್ಟರೆ, ಅದು ವರದಕ್ಷಿಣೆಯ ಕಿರುಕುಳವಲ್ಲ. ಇದನ್ನು ಪೋಷಕರು ಗಮನಿಸಬೇಕು. ಹುಡುಗಿಯೇ ದಾಂಪತ್ಯ ಜೀವನವನ್ನು ತಿರಸ್ಕರಿಸಿ, ಹುಡುಗನನ್ನ ಪೇಚಿಗೆ ಸಿಲುಕಿಸಬಾರದು. ಪೊಲೀಸ್ ಕಂಪ್ಲೇಂಟ್ ಕೊಡುವ ಮುನ್ನ ಮನೋವೈದ್ಯರ/ಚಿಕಿತ್ಸಾ ಮನೋವಿಜ್ಞಾನಿಗಳ ಸಲಹೆ ಪಡೆದುಕೊಳ್ಳಿ. ಪೋಷಕರು ಭಾವುಕರಾಗಿ ದುಡುಕಬೇಡಿ.
ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ