Advertisement

ಮಿಸ್ ದಿವಾ ಯೂನಿವರ್ಸ್- 2022 ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಬ್ಯೂಟಿ ದಿವಿತಾ ರೈ

01:51 PM Aug 29, 2022 | Team Udayavani |

ಮುಂಬಯಿ: ಮಿಸ್‌ ದಿವಾ ಯೂನಿವರ್ಸ್‌ 2022 ಕಿರೀಟವನ್ನು ಈ ಬಾರಿ ಮಂಗಳೂರಿನ ದಿವಿತಾ ರೈ ತನ್ನ ಮುಡಿಗೇರಿಸಿಕೊಂಡಿದ್ದಾರೆ.2021ರ ಮಿಸ್‌ ಯುನಿವರ್ಸ್ ಹರ್ನಾಜ್‌ ಸಂಧು ಅವರು ಭಾನುವಾರ ಸಂಜೆ ಮುಂಬೈನಲ್ಲಿ ನಡೆದ ಗಣ್ಯರು ಸಿನಿಮಾ ತಾರೆಯರಿಂದ ತುಂಬಿದ್ದ  ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ತೊಡಿಸಿದರು.

Advertisement

ಮಿಸ್ ಯುನಿವರ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದೇ ವೇಳೆ ತೆಲಂಗಾಣ ಮೂಲದ ಪ್ರಜ್ಞಾ ಅಯ್ಯಗಾರಿ ಅವರು ಮಿಸ್ ದಿವಾ ಸೂಪರ್‌ನ್ಯಾಷನಲ್ 2022 ಆಗಿ ಆಯ್ಕೆಯಾಗಿದ್ದಾರೆ.

ಹರ್ನಾಜ್ ಸಂಧು ಅವರು ಕಿರೀಟವನ್ನು ತೆಗೆದು ದೀವಿತಾ ರೈ ಅವರಿಗೆ ತೊಡಿಸಿದ್ದಾರೆ. ನಂತರ ಇಬ್ಬರು ಸುಂದರಿಯರು ಜೊತೆಯಾಗಿ ರಾಂಪ್‌ನಲ್ಲಿ ಹೆಜ್ಜೆ ಇಡುವ ಮೂಲಕ ವೇದಿಕೆಗೆ ಇನ್ನಷ್ಟು ಕಳೆತಂದಿದ್ದರು.

ಇದನ್ನೂ ಓದಿ:ಕೋಬ್ರಾ ಜೊತೆ ಶ್ರೀನಿಧಿ ಎಂಟಿ: ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಕೆಜಿಎಫ್ ಚೆಲುವೆ

Advertisement

ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರು ದಿಲೀಪ್‌ ರೈ ಹಾಗೂ ಪವಿತ್ರಾ ದಂಪತಿಯ ಪುತ್ರಿ. ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ದೇಶದ ವಿವಿಧ ನಗರಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. ಈಕೆ ಆರ್ಕಿಟೆಕ್ಟ್‌ ಓದಿದ್ದು, ಮಾಡೆಲ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಇದರೊಂದಿಗೆ ಅವರು ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಪೈಂಟಿಂಗ್‌ ನಲ್ಲಿ ಆಸಕ್ತಿ ಹೊಂದಿದ್ದಾರೆ. ಸಂಗೀತ ಕೇಳುವುದು, ಪುಸ್ತಕ ಓದುವುದು ಇವರ ಹವ್ಯಾಸವಾಗಿದೆ. ಇದರೊಂದಿಗೆ ಅವರು 71ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next