Advertisement

36 ಎಸೆತಗಳಲ್ಲಿ ಶತಕ ಸಿಡಿಸಿದ ಡಿವೈನ್‌

12:29 AM Jan 15, 2021 | Team Udayavani |

ವೆಲ್ಲಿಂಗ್ಟನ್‌:  ನ್ಯೂಜಿಲ್ಯಾಂಡ್‌ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸೋಫಿ ಡಿವೈನ್‌ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ. ಕಿವೀಸ್‌ನ ದೇಶಿ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಅಬ್ಬರಿಸಿದ ಸೋಫಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

Advertisement

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಈ ಮೊದಲು ವೆಸ್ಟ್‌ ಇಂಡೀಸ್‌ನ ಡಿಯಾಂಡ್ರಾ ಡಾಟಿನ್‌ ಹೆಸರಲ್ಲಿತ್ತು. ಅವರು 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೇವಲ 38 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

ಎದುರಾಳಿ ಒಟಾಗೊ ಸ್ಪಾರ್ಕ್ಸ್ ತಂಡದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿದ ಸೋಫಿ ಡಿವೈನ್‌, ಬರೋಬ್ಬರಿ 9 ಸಿಕ್ಸರ್‌ ಮತ್ತು 9 ಬೌಂಡರಿ ಬಾರಿಸಿ ವೆಲ್ಲಿಂಗ್ಟನ್‌ ಬ್ಲೇಝ್ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಒಟ್ಟು 38 ಎಸೆತಗಳಲ್ಲಿ ಅಜೇಯ 108 ರನ್‌ ಪೇರಿಸಿ ಪಂದ್ಯಶ್ರೇಷ್ಠ ಗೌರವಕ್ಕೂ ಭಾಜನರಾದರು.

ಮೊದಲು ಬ್ಯಾಟಿಂಗ್‌ ನಡೆಸಿದ ಒಟಾಗೊ ತಂಡ 20 ಓವರ್‌ಗಳಲ್ಲಿ 7 ವಿಕೆಟಿಗೆ 128 ರನ್‌ ಪೇರಿಸಿತು. ವೆಲ್ಲಿಂಗ್ಟನ್‌ ಕೇವಲ 8.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 131 ರನ್‌ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next