ದ್ವಾರಕೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಪಂಚಕುಯಿ ಬೀಚ್‌ನಲ್ಲಿ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ಸ್ಕೂಬಾ ಡೈವಿಂಗ್ ಆನಂದಿಸಿದರು, ನೀರಿನಲ್ಲಿ ಮುಳುಗಿರುವ ಪೌರಾಣಿಕ ಹಿನ್ನಲೆಯ ದ್ವಾರಕೆ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿ “ಇದು ಅತ್ಯಂತ ದೈವಿಕ ಅನುಭವ” ಎಂದು ಹೇಳಿದ್ದಾರೆ.
ಸ್ಕೂಬಾ ಡೈವಿಂಗ್ ಅನ್ನು ದ್ವಾರಕೆ ದ್ವೀಪದ ಬಳಿ ಕರಾವಳಿಯಲ್ಲಿ ನಡೆಸಲಾಗುತ್ತದೆ, ಅಲ್ಲಿ ಜನರು ಪುರಾತತ್ತ್ವಜ್ಞರು ಉತ್ಖನನ ಮಾಡಿದ ಪ್ರಾಚೀನ ದ್ವಾರಕಾದ ನೀರೊಳಗಿನ ಅವಶೇಷಗಳನ್ನು ನೋಡಬಹುದಾಗಿದೆ.
“ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಸಮಯಾತೀತ ಭಕ್ತಿಯ ಪ್ರಾಚೀನ ಯುಗಕ್ಕೆ ಸಂಪರ್ಕ ಹೊಂದಿದ್ದು, ಭಗವಾನ್ ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ, ”ಎಂದು ಸ್ಕೂಬಾ ಡ್ರೈವಿಂಗ್ ಅನುಭವದ ನಂತರ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದ್ವಾರಕೆಯಲ್ಲಿರುವ ಶ್ರೀಕೃಷ್ಣ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಅವರು ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿರುವ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ದೇವಭೂಮಿ ದ್ವಾರಕೆ ಓಖಾ ಮುಖ್ಯ ಭೂಭಾಗಕ್ಕೆ ಬೇಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಅರಬ್ಬಿ ಸಮುದ್ರದ ಮೇಲೆ ದೇಶದ ಅತಿ ಉದ್ದದ ಕೇಬಲ್ ಸೇತುವೆಯಾದ ‘ಸುದರ್ಶನ ಸೇತು’ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾರಕೆಯನು ನಿರ್ಮಿಸಿದ ನಂಬಿಕೆಯಿದೆ.