Advertisement
ದ.ಕ. ಜಿಲ್ಲಾಡಳಿತ ಮಂಗಳೂರು, ದ.ಕ. ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ನಗರಸಭೆ ಪುತ್ತೂರು, ತಾ.ಪಂ. ಪುತ್ತೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ ಹಾಗೂ ಜಿಲ್ಲಾ ಮಟ್ಟದ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಯುವಕ ಮಂಡಲವಾಗಲಿ ಅಥವಾ ಯುವತಿ ಮಂಡಲವಾಗಲಿ, ಯಾರು ಸಾಮಾಜಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾರೋ ಅವರಿಗೆ ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಯುವಜನತೆಯಲ್ಲಿ ಶಕ್ತಿ ಇದೆ. ಆದರೆ ಆ ಶಕ್ತಿಯನ್ನು ಸಮಾಜಕ್ಕೆ ಒಳಿತು ಮಾಡಲು ಉಪಯೋಗಿಸಬೇಕು ಎಂದರು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮಸಭಾ ಕಾರ್ಯಕ್ರಮದ ಬಳಿಕ ಸಂತ ಫಿ ಲೋಮಿನಾ ಕಾಲೇಜಿನ ರಂಗ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಮತ್ತು ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹಾ, ತಾಲೂಕು ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್ ಎಂ., ಸುಳ್ಯ ತಾಲೂಕಿನ ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಮೊದಲಾದವರು ಪಾಲ್ಗೊಂಡರು. ದ. ಕ. ಜಿಲ್ಲೆಯ ಯುವಸಬಲೀಕರಣ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರವೀಣ್ ಡಿ’ಸೋಜಾ ಸ್ವಾಗತಿಸಿ, ತಾಲೂಕು
ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು. ನೆಹರೂ ಯುವ ಕೇಂದ್ರದ ತಾಲೂಕು ಪ್ರತಿನಿಧಿ ಗುರುಪ್ರಿಯ ನಾಯಕ್, ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾನಿಲಯದ ಉಪನ್ಯಾಸಕ ಡಾ| ಪ್ರವೀಣ್ ಎಸ್. ಡಿ. ನಿರೂಪಿಸಿದರು. ಪ್ರಶಸ್ತಿ ಪ್ರದಾನ
2017-18ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿಗೆ ಆಯ್ಕೆಯಾದ ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ., ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ನಿಕಟಪೂರ್ವಾಧ್ಯಕ್ಷ ಸಚಿನ್ ಭಂಡಾರಿ, ಸುಳ್ಯದ ಫ್ರೆಂಡ್ಸ್ ಕ್ಲಬ್ ಪೈಲಾರು ಸಂಘದ ತೇಜಸ್ವಿ ಕಡಪಳ, ಮಂಗಳೂರಿನ ಸಸಿಹಿತ್ಲು ಯುವಕ ಮಂಡಲದ ನರೇಶ್ ಕುಮಾರ್ ಸಸಿಹಿತ್ಲು, ಬಂಟ್ವಾಳದ ಅಳಿಕೆ ನವಚೇತನ ಯುವತಿ ಮಂಡಲದ ಅಮಿತಾ ಕಲಾ ಅವರಿಗೆ ಜಿಲ್ಲಾಯುವ ಪ್ರಶಸ್ತಿ ಮತ್ತು ಮಂಗಳೂರು ತಾಲೂಕಿನ ಎಕ್ಕಾರು ವಿಜಯ ಯುವ ಸಂಗಮ, ಬೆಳ್ತಂಗಡಿ ತಾಲೂಕಿನ ಶ್ರೀ ಗುರು ಮಿತ್ರ ಸಮೂಹಕ್ಕೆ ಜಿಲ್ಲಾ ಸಾಂಘಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮ್ಮಾನ
ಸವಣೂರು ಯುವಕ ಮಂಡಲದ ಅಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ವಿಜೇತ, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರನ್ನು ಸಮ್ಮಾನಿಸಲಾಯಿತು. ಕಾರ್ಯಾಗಾರ
ಸಭಾ ಕಾರ್ಯಕ್ರಮದ ಬಳಿಕ ಯುವಜನತೆ ಮತ್ತು ನಾಯಕತ್ವದ ಕುರಿತು ಸವಣೂರು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹಾಗೂ ಆರೋಗ್ಯಯುಕ್ತ ಸಮಾಜಕ್ಕೆ ಯುವಜನರ ಪಾತ್ರದ ಕುರಿತು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಕಾರ್ಯಾಗಾರ ನಡೆಸಿಕೊಟ್ಟರು.