Advertisement
ಈ ಬಾರಿ 18,810 ಹೊಸದಾಗಿ, 3,943 ಪುನರಾವರ್ತಿತ ಹಾಗೂ 448 ಖಾಸಗಿ ಅಭ್ಯರ್ಥಿಗಳು ಒಳಗೊಂಡಂತೆ 23,201 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. 11,313 ಬಾಲಕರು, 11,818 ಬಾಲಕಿಯರು 35 ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದರು. ಕಳೆದ ಸಾಲಿನ(2015-16)ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟಾರೆ 17,892 ವಿದ್ಯಾರ್ಥಿಗಳಲ್ಲಿ 10,380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Related Articles
Advertisement
ಈ ಬಾರಿ ಒಟ್ಟಾರೆ ಪರೀಕ್ಷೆಗೆ ಹಾಜರಾಗಿದ್ದ 18,535 ವಿದ್ಯಾರ್ಥಿಗಳಲ್ಲಿ 10,225 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5,981 ವಿದ್ಯಾರ್ಥಿಗಳಲ್ಲಿ 2,401 (ಶೇ.40.14) ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 4,784 ವಿದ್ಯಾರ್ಥಿಗಳಲ್ಲಿ ಶೇ.55.31ರಷ್ಟು ಫಲಿತಾಂಶದೊಂದಿಗೆ 2,646 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,770 ವಿದ್ಯಾರ್ಥಿಗಳಲ್ಲಿ ಶೇ. 66.64 ರಷ್ಟು ಫಲಿತಾಂಶದೊಂದಿಗೆ 5,178 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 12,143 ಬಾಲಕರಲ್ಲಿ 4,745 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 11,783 ಬಾಲಕಿಯರಲ್ಲಿ 6,467 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.
ನಗರ ಪ್ರದೇಶದಲ್ಲಿ ಶೇ. 56.46 ಹಾಗೂ ಗ್ರಾಮೀಣ ಭಾಗದಲ್ಲಿ ಶೇ. 50.09 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಹರಪನಹಳ್ಳಿಯ ಎಸ್. ಯು.ಜೆ.ಎಂ ಕಾಲೇಜಿನ ಶೃತಿ ವಾಲೇಕಾರ್ 579 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಅದೇ ಕಾಲೇಜಿನ ಮಂಗಳ 576 ಅಂಕ ಪಡೆದಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಕನ್ನಿಹಳ್ಳಿ ಗ್ರಾಮದವರು. ಕಳೆದ ಬಾರಿಯಂತೆಯೇ ಈ ಬಾರಿಯೂ ಕಲಾ ವಿಭಾಗದಲ್ಲಿ ಹರಪನಹಳ್ಳಿ ತಾಲೂಕು ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಥಣಿ ಪಪೂ ಕಾಲೇಜಿನ ಐಶ್ವರ್ಯ ಶಾನಭೋಗ 584 (ಶೇ.97.33) ಅಂಕ ಪಡೆದಿದ್ದಾಳೆ.
ವಾಣಿಜ್ಯ ಹಾಗೂ ಸಂಖ್ಯಾಶಾಸ್ತ್ರದಲ್ಲಿ ತಲಾ ನೂರು, ಲೆಕ್ಕಶಾಸ್ತ್ರದಲ್ಲಿ 99, ಅರ್ಥಶಾಸ್ತ್ರದಲ್ಲಿ 98, ಹಿಂದಿಯಲ್ಲಿ 97 ಹಾಗೂ ಇಂಗ್ಲಿಷ್ ವಿಷಯದಲ್ಲಿ 90 ಅಂಕ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರೀ ಸಿದ್ದಗಂಗಾ ವಿಜ್ಞಾನ ಪಿಯು ಕಾಲೇಜಿನ ಪಿ.ಎಚ್. ಬಸವರಾಜ್ 589 ಅಂಕ (ಶೇ. 98.16) ಗಳಿಸಿದ್ದಾರೆ.
ಕನ್ನಡ, ಜೀವಶಾಸ್ತ್ರದಲ್ಲಿ ತಲಾ 99, ಆಂಗ್ಲ ಭಾಷೆಯಲ್ಲಿ 91, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಮೂಲತಃ ದಾವಣಗೆರೆ ತಾಲೂಕಿನ ಐಗೂರು ಗ್ರಾಮದವರು. ಡಾ| ತಿಮ್ಮಾರೆಡ್ಡಿ ಫೌಂಡೇಶನ್ ಬಾಲಕರ ಪಿಯು ಕಾಲೇಜಿನ ಎಚ್. ಆರ್. ಸಂಜಯ್ 581 (ಶೇ.96.83) ಅಂಕ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.