ದಾವಣಗೆರೆ: ಬುಧವಾರ(ಜೂ. 21) ರಂದು ನಡೆಯುವ ಮೂರನೇ ವಿಶ್ವ ಯೋಗ ದಿನದ ಅಂಗವಾಗಿ ಭಾನುವಾರ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಯೋಗಾಸನ ಸ್ಪರ್ಧೆಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ವಿವಿಧ ಯೋಗ ಪ್ರದರ್ಶನದ ಮೂಲಕ ಚಾಲನೆ ನೀಡಿ, ಯೋಗದ ಮಹತ್ವದ ಬಗ್ಗೆ ತಿಳಿಸಿದರು.
8 ರಿಂದ 11 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ತ್ರಿಕೋಣಾಸನ(4), ಮತ್ಸಾಸನ(112), ಸರ್ವಾಂಗಸನ(234), 11 ರಿಂದ 15 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ವಾತಾಯಸನ(58), ಧನುರಾಸನ(63), ಮರೀಚ್ಯಾಸನ(144), 15 ರಿಂದ 18 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ
ಪಾಶೊತ್ತಾಸನ(28), ಚಕ್ರಾಸನ(486), ಉಪವಿಷ್ಠಕೋಣಾಸನ(151), 18 ರಿಂದ 21 ವರ್ಷದೊಳಗಿನ ಯುವಕ- ಯುವತಿಯರಿಗೆ ಪರಿವೃತ್ತಪಾರ್ಶ್ವಕೋಣಾಸನ (11), ಮತ್ಸಾಸನ (112), ಕರ್ಣಪೀಡಾಸನ (246), 21 ರಿಂದ 25 ವರ್ಷದೊಳಗಿನ ಯುವಕ-ಯುವತಿಯರಿಗೆ ವೀರಭದ್ರಾಸನ-3 (17), ಅರ್ಧಮತ್ಯೇಂದ್ರಾಸನ (313), ಸರ್ವಾಂಗಸನ (234) ಸ್ಪರ್ಧೆ ನಡೆದವು.
25 ರಿಂದ 35 ವರ್ಷದ ಪುರುಷ, ಮಹಿಳೆಯರಿಗೆ ತ್ರಿಕೋಣಾಸನ(4),ಪಶ್ಚಿಮೋತ್ತಾಸನ (155), ನಾವಾಸನ (78), 35 ರಿಂದ 45 ವರ್ಷದೊಳಗಿನ ಪುರುಷ, ಮಹಿಳೆಯರಿಗೆ ಗರುಡಾಸನ (56), ಉಷ್ಟಾಸನ (41), ಜಾನುಶೀರ್ಷಾಸನ (127), 45 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ ವೃಕ್ಷಾಸನ (2),
-ಗೋಮುಖಾಸನ (80), ಉಷ್ಟಾಸನ (41) ಸ್ಪರ್ಧೆ ನಡೆದವು. ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ವಾಸುದೇವರಾಯ್ಕರ್, ಕೊಟ್ರಪ್ಪ, ನೀಲಪ್ಪ, ಬೆಳ್ಳೊಡಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ| ಯು. ಸಿದ್ದೇಶ್ ಇತರರು ಇದ್ದರು.