ಬಂಟ್ವಾಳ: ವಿದ್ಯಾರ್ಥಿ ಕ್ರೀಡಾಪಟುಗಳ ಮಾನಸಿಕ ಹಾಗೂ ದೈಹಿಕ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ದೆ„ಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮಯ್ಯ ಹೇಳಿದರು.
ಅವರು ಜು. 21ರಂದು ಬಂಟ್ವಾಳ ಎಸ್‌ವಿಎಸ್ ದೇಗುಲ ವಿದ್ಯಾಸಂಸ್ಥೆ ಆಶ್ರಯದಲ್ಲಿ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ 2017-18 ನೇ ಸಾಲಿನ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ದೇಗುಲದ ಮೊಕ್ತೇಸರ ದಾಮೋದರ ಪ್ರಭು ಮಾತನಾಡಿ, ಈ ವಿದ್ಯಾಸಂಸ್ಥೆಗೆ ಕ್ರೀಡಾಕೂಟದ ಆತಿಥ್ಯ ವಹಿಸುವ ಅವಕಾಶ ದೊರೆತಿದ್ದು, ಇದಕ್ಕೆ ಪೂರಕವಾಗಿ ಇಲಾಖೆಯ ಸಹಕಾರ ಬೇಕಿದೆ ಎಂದರು.
ಮುಂದಿನ ನ. 15 ಮತ್ತು 16ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಬಂಟ್ವಾಳದ ಎಸ್‌ವಿಎಸ್ ದೇಗುಲದ ಕ್ರೀಡಾಂಗಣದಲ್ಲಿ ಆಯೋಜಿಸುವ ಬಗ್ಗೆ ಎಸ್‌ವಿಎಸ್ ದೇಗುಲ ವಿದ್ಯಾಸಂಸ್ಥೆಯ ಸಂಚಾಲಕ ಬಿ.ಪುರುಷೋತ್ತಮ ಶೆಣೆ„ ಸಭೆಯಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ದ.ಕ.ಜಿಲ್ಲಾ ದೆ„ಹಿಕ ಶಿಕ್ಷಣ ಅಧೀಕ್ಷಕ ರಘುನಾಥ, ದಕ್ಷಿಣ ಕನ್ನಡ ಜಿಲ್ಲಾ ದೆ„ಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್, ಗೌರವಾಧ್ಯಕ್ಷ ಗಂಗಾಧರ ರೈ, ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಟೇನ್ಲಿ ತಾವ್ರೋ, ತಾಲೂಕು ಸಮನ್ವಯಾಧಿಕಾರಿ ರಾಜೇಶ್, ವಿವಿಧ ತಾಲೂಕುಗಳ ದೆ„ಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರತ್ನಾವತಿ, ಲಕ್ಷ್ಮೀಶ ರೈ, ಸುಂದರ ಗೌಡ, ಯಶೋಧರ ಸುವರ್ಣ, ಗುರುನಾಥ ಬಾಗೇವಾಡಿ, ಉಷಾ, ಶಿವಾನಂದ ಕಾಯ್ಕಿಣಿ, ವಿವಿಧ ಶಿಕ್ಷಣ ಸಂಘಟನೆಗಳ ಪ್ರಮುಖರಾದ ಕಡ್ತಾಲ ಶೇಖರ, ಅಖೀಲ್ ಶೆಟ್ಟಿ, ತಾರೇಶ ನಾಯ್ಕ, ರಘು ಅಳಿಕೆ, ಶಿವಪ್ರಸಾದ್ ಶೆಟ್ಟಿ, ರಾಮಚಂದ್ರ ರಾವ್, ಚೆನ್ನಕೇಶವ, ಜೋಯಲ್ ಪಿಂಟೋ, ರಾಧಾಕೃಷ್ಣ ಅಡ್ಯಂತಾಯ, ಜಗದೀಶ ಕಲ್ಲಡ್ಕ, ವಲಯ ಸಂಯೋಜಕರಾದ ಪ್ರಕಾಶ ಮಂಚಿ, ಶ್ರೀಕಾಂತ್, ಸುಜಾತಾ ಆರ್. ಶೆಟ್ಟಿ, ಪುಷ್ಪಾ, ಎಸ್‌ವಿಎಸ್ ದೇಗುಲ ಆಂಗ್ಲಮಾಧ್ಯಮ ಶಾಲಾ ಮುಖ್ಯಗುರು ರೋಶನಿ ತಾರಾ ಡಿ’ಸೋಜಾ, ಕುಸುಮಾವತಿ, ನಂದಿನಿ ಬಾಯಿ, ಚಂದ್ರಕಲಾ, ವಾಮದಪದವು ಸರಕಾರಿ ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲ ರಾಘವೇಂದ್ರ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾಗಿ ನಿಯುಕ್ತಿಗೊಂಡ ವೈ. ಶಿವರಾಮಯ್ಯ,ದ.ಕ. ಜಿಲ್ಲಾ ದೆ„ಹಿಕ ಶಿಕ್ಷಣ ಅಧೀಕ್ಷಕ ರಘುನಾಥ, ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಅವರನ್ನು ಅಭಿನಂದಿಸಲಾಯಿತು.
ಮಂಗಳೂರು ಉತ್ತರ ವಲಯಕ್ಕೆ ಬಂಟ್ವಾಳದಿಂದ ವರ್ಗಾವಣೆಗೊಂಡ ಗುರುನಾಥ ಬಾಗೇವಾಡಿ ಅವರನ್ನು ಸಮ್ಮಾನ ಮೂಲಕ ಬೀಳ್ಕೊಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ದ.ಕ. ಜಿಲ್ಲಾ ದೆ„ಹಿಕ ಶಿಕ್ಷಣ ಅಧೀಕ್ಷಕ ಕೆ.ಬಿ.ಕೇಶವ ಅವರಿಗೆ ಸಂತಾಪ ಸೂಚಿಸಲಾಯಿತು.
ದ.ಕ.ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದ.ಕ.ಜಿಲ್ಲಾ ದೆ„ಹಿಕ ಶಿಕ್ಷಣ ಶಿಕ್ಷಕರ ಸಂಘ, ಬಂಟ್ವಾಳ ತಾ| ದೆ„ಹಿಕ ಶಿಕ್ಷಣ ಶಿಕ್ಷಕರ ಸಂಘ, ಬಂಟ್ವಾಳ ಎಸ್‌ವಿಎಸ್ ದೇಗುಲ ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ ಸ್ವಾಗತಿಸಿದರು. ಬಂಟ್ವಾಳ ದೆ„ಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರತ್ನಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಕಿಣಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಶೆಟ್ಟಿ, ಜಯರಾಮ್, ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.