Advertisement

ಗಮಕ ಕಲೆ ಪ್ರವರ್ಧಮಾನಕ್ಕೆ ತರುವ ಕೆಲಸವಾಗಲಿ: ಚಂದ್ರಶೇಖರ ಕೆದ್ಲಾಯ

08:52 PM Feb 29, 2020 | Sriram |

ಉಡುಪಿ: ಕರಾವಳಿ ಭಾಗದಲ್ಲಿ ಹಿಂದೆ ಇದ್ದ ಗಮಕ ಕಲೆಯನ್ನು ಪ್ರವರ್ಧಮಾನಕ್ಕೆ ತರುವ ಕೆಲಸ ಆಗಲಿ ಎಂದು ಗಮಕಿ ಚಂದ್ರಶೇಖರ ಕೆದ್ಲಾಯ ತಿಳಿಸಿದರು.

Advertisement

ಬೆಂಗಳೂರು ಕರ್ನಾಟಕ ಗಮಕ ಕಲಾ ಪರಿಷತ್‌, ಉಡುಪಿ ಜಿಲ್ಲಾ ಘಟಕ ಮತ್ತು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಶನಿವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಾಯಕ ತಾನು ಅರ್ಥ ಮಾಡಿಕೊಂಡು ಭಾವವನ್ನು ಹಾಡಿದರೆ ಕೇಳುಗರಿಗೆ ಮುದ ನೀಡುತ್ತದೆ. ತಾಳ ಬದ್ಧ, ಛಂದೋಬದ್ಧವಾಗಿಯೂ ಹಾಡಬಹುದು. ಆದರೆ ಪದವಿಂಗಡಣೆ ಮಾಡುವಾಗ ಅನರ್ಥವಾಗದಂತೆ ಎಚ್ಚರ ವಹಿಸಬೇಕು. ಗಾಯನ ಹಾವ -ಭಾವ ಮಿತ ಆಗಿರಬೇಕು. ಭಾವವಿಲ್ಲದೆ ಹಾಡಿದಾಗ ಗಾಯನ ಮನ ಮುಟ್ಟುವುದಿಲ್ಲ. ಗಮಕ ಗಾಯನದ ಜತೆ ವ್ಯಾಖ್ಯಾನವು ಇರುತ್ತದೆ. ಕತೆ ಹೇಳುವುದು, ಅರ್ಥವಿವರಣೆ ನೀಡುವುದು ಇಷ್ಟಕ್ಕೆ ಸೀಮಿತವಾಗದೆ ಕಾವ್ಯ ಸೌಂದರ್ಯವನ್ನು ಧ್ವನಿಯಲ್ಲಿ ಬಿಂಬಿಸಬೇಕೆಂದು ಅವರು ಅಭಿಪ್ರಾಯಿಸಿದರು.

ಬೆಂಗಳೂರು ಕರ್ನಾಟಕ ಗಮಕ ಪರಿಷತ್‌ನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ಡಾ| ವಾಸುದೇವ ಎಚ್‌. ಆರ್‌. ಹೊಸಹಳ್ಳಿ ಮಾತನಾಡಿದರು.ಸಾಹಿತಿ ಬೆಳಗೋಡು ರಮೇಶ್‌ ಭಟ್‌ ಹಾಗೂ ಚಂದ್ರಶೇಖರ ಕೆದ್ಲಾಯ ಅವರನ್ನು ಸಮ್ಮಾನಿಸಲಾಯಿತು.

ದ.ಕ ಜಿಲ್ಲಾ ಅಧ್ಯಕ್ಷ ಪ್ರೊ| ಮಧೂರು ಮೋಹನ ಕಲ್ಲೂರಾಯ, ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಸತೀಶ್‌ ಕುಮಾರ ಕೆಮ್ಮಣ್ಣು, ತಾ| ಘಟಕದ ಗೌರವಾಧ್ಯಕ್ಷ ಮಧೂರು ಬಾಲಸುಬ್ರಹ್ಮಣ್ಯಂ, ತಾ| ಘಟಕದ ಅಧ್ಯಕ್ಷೆ ಯಾಮಿನಿ ಪಿ.ಭಟ್‌, ಕಾರ್ಕಳ ತಾ| ಘಟಕದ ಅಧ್ಯಕ್ಷ ಪ್ರೋ| ನಾರಾಯಣ ಶೇಡಿಕಜೆ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ ಕುಮಾರ್‌ ಕಲ್ಕೂರ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪಿ.ಪಿ.ಸಿ ಕಾಲೇಜಿನ ಗೌರವ ಕಾರ್ಯದರ್ಶಿ ಡಾ| ಜಿ.ಎಸ್‌.ಚಂದ್ರಶೇಖರ್‌, ಕೋಶಾಧಿಕಾರಿ ಪ್ರದೀಪ್‌ ಕುಮಾರ್‌, ಪ್ರಾಂಶುಪಾಲ ಡಾ| ರಾಘವೇಂದ್ರ, ಸಮ್ಮೇಳನದ ಜತೆ ಕಾರ್ಯದರ್ಶಿ ಎ. ಶ್ರೀಕಾಂತ ಉಪಸ್ಥಿತರಿದ್ದರು.

Advertisement

ಸಮ್ಮೇಳನದ ಕಾರ್ಯದರ್ಶಿ ಪ್ರೊ| ಎಂ.ಎಲ್‌. ಸಾಮಗ ಸ್ವಾಗತಿಸಿ, ಪಡುಬಿದ್ರಿಯ ಡಾ| ರಾಘವೇಂದ್ರ ರಾವ್‌ ವಂದಿಸಿದರು. ಸುಜಯೀಂದ್ರ ಹಂದೆ ಎಚ್‌. ನಿರೂಪಿಸಿದರು.

ಗಮಕದಲ್ಲಿ ಹಲವು ಪ್ರಭೇದಗಳು: ಸ್ವಾಮೀಜಿ
ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಗಮಕವನ್ನು ಬಯಲಾಟ ತಾಳಮದ್ದಳೆ, ಹರಿಕತೆ, ವಾಚನ-ಪ್ರವಚನ ಮೊದಲಾದ ವಿಧಗಳಲ್ಲಿ ಗುರುತಿಸಬಹುದಾಗಿದೆ. ಆಚಾರ್ಯ ಮಧ್ವರ ಕಾಲದಿಂದಲೂ ಗುರುತಿ ಸಿಕೊಂಡಿರುವ ಈ ಗಮಕದ ಮೂಲವನ್ನು ಕಾಪಾಡಿಕೊಂಡು ಹೋಗುವಂತೆ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next