ತುಮಕೂರು: ಪ್ರಸವಪೂರ್ವ ಲಿಂಗಪತ್ತೆ ಮಾಡುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಮತ್ತುಕುಟುಂಬಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಎಚ್ಚರಿಕೆ ನೀಡಿದರು.
ಪ್ರಸವ ಪೂರ್ವ ಲಿಂಗಪತ್ತೆ ನಿಯಂತ್ರಣಕುರಿತ ಜಿಲ್ಲಾ ಮಟ್ಟದ ಸಲಹಾ ಸಮಿತಿಯಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 105 ಸ್ಕ್ಯಾನಿಂಗ್ ಸೆಂಟರ್‌ನೋಂದಣಿಯಾಗಿದ್ದು, ಅದರಲ್ಲಿ ಪ್ರಸ್ತುತ 95ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಆನ್ ಲೈನ್ ಬಾಲಿಕ ಸಾಫ್ಟವೇರ್‌ನಲ್ಲಿ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳ ನೋಂದಣಿ ಕುರಿತ ಮಾಹಿತಿ ಇರುತ್ತದೆ. ಸ್ಕ್ಯಾನಿಂಗ್ ಸೆಂಟರ್‌ಗಳ ವೈದ್ಯರಿಗೆ ಪಿಸಿಪಿಎನ್‌ಡಿಟಿ ಕಾಯ್ದೆ ಹಾಗೂ ಅನುಷ್ಠಾನದಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಸೆಂಟರ್‌ಗಳು ಫಾರಂ-ಎಫ್ ಅನ್ನು ಅಪ್ ಲೋಡ್ ಮಾಡುತ್ತಿದ್ದು, ಇದರಿಂದ ಮಾನಿಟರಿಂಗ್ ಮಾಡಲು ಅನುಕೂಲವಾಗಿದೆ. ಎಲ್ಲಾಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಜಿಲ್ಲಾ ತಪಾಸಣಾ ಹಾಗೂ ಮೇಲ್ವಿಚಾರಣಾ ಸಮಿತಿ ಅನಿರೀಕ್ಷಿತ ಭೇಟಿ ನೀಡಿ ನ್ಯೂನತೆಗಳ ಬಗ್ಗೆ ಪರಿಶೀಲಿಸಿದೆ. ಅಲ್ಲದೆ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್‌ಸೆಂಟರ್‌ಗಳ ವಿರುದ್ಧ ಕಾಯ್ದೆ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದರು. ಪ್ರತಿ ಮಾಹೆಯ ಮಾಸಿಕ ಸಭೆಗಳಲ್ಲಿ ವೈದ್ಯಾಧಿಕಾರಿಗಳಿಗೆ ಸಿಬ್ಬಂದಿಯವರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ಪಿಸಿಪಿಎನ್‌ಡಿಟಿ ಕಾಯ್ದೆಯ ಬಗ್ಗೆ ಜನರಿಗೆಅರಿವು ಮೂಡಿಸುವಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಗರ್ಭಧಾರಣೆ ಮತ್ತು ಪ್ರಸವ ಪತ್ತೆ ತಂತ್ರ ವಿಧಾನಗಳ ಲಿಂಗ ಆಯ್ಕೆಯ ನಿಷೇಧ ಅಧಿ ನಿಯಮ, 1994 ಕಾಯ್ದೆ ಅಡಿ ಪ್ರಸವ ಪೂರ್ವ ಲಿಂಗ ಪತ್ತೆಯಲ್ಲಿ ತೊಡಗಿರುವ ಸ್ಕ್ಯಾನಿಂಗ್ ಸೆಂಟರ್‌ಗಳು, ಅಕ್ರಮವಾಗಿ ಸ್ಕ್ಯಾನಿಂಗ್ ಮೆಷಿನ್ ಮಾರಾಟ ಮಾಡುತ್ತಿರುವವರ, ಪೋರ್ಟಬಲ್ ಸ್ಕ್ಯಾನಿಂಗ್ ಮೆಷಿನ್ ಅನ್ನು ತಂದು ರಾತ್ರಿ ಸಮಯದಲ್ಲಿ ಸ್ಕ್ಯಾನ್ ಮಾಡುತ್ತಿರುವವರ ಬಗ್ಗೆ ನಿಗಾವಹಿಸಲು ತಿಳಿಸಲಾಗಿದೆ. ಮಾಹಿತಿಯನ್ನು ನೀಡಿದವರಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
ಅಕ್ರಮ ಲಿಂಗ ಪತ್ತೆ ಹಚ್ಚುವ ಸ್ಕ್ಯಾನಿಂಗ್ ಸೆಂಟರ್‌ಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಗುಪ್ತಕಾರ್ಯಾಚರಣೆಗೆ ಸಹಕರಿಸಲು ಸಿದ್ಧವಿರುವವರ ಮಾಹಿತಿಯನ್ನು ಸಮಿತಿಗೆ ಅಥವಾ ಆರೋಗ್ಯ ಇಲಾಖೆಗೆ ನೀಡಬಹುದು ಎಂದು ತಿಳಿಸಿದರು.ಸಮಿತಿಯ ಅಧ್ಯಕ್ಷರಾದ ಡಾ.ಶಿವರಾಜ್‌ಪ್ರಸೂತಿ ತಜ್ಞರು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ, ಮಕ್ಕಳ ತಜ್ಞೆ ಡಾ. ಮುಕ್ತಾಂಬ,ವಕೀಲರಾದ ಕುಮಾ ರಸ್ವಾಮಿ, ರಾಣಿ ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಡಿ. ಮತ್ತಿತರು ಹಾಜರಿದ್ದರು.