Advertisement

ಸಂಸದರ ವಿರುದ್ಧ ಕೋಲಾರ ಜಿಲ್ಲಾ ಶಾಸಕರ ಸಭೆ!

06:41 PM May 28, 2021 | Team Udayavani |

ಕೋಲಾರ: ಜಿಲ್ಲೆಯ ಬಹುತೇಕ ಶಾಸಕರು 2 ವರ್ಷಗಳನಂತರ ಮತ್ತೆ ಒಂದಾಗಿ ಸಭೆ ನಡೆಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ! ಆದರೆ, ಜಿಲ್ಲೆಯ ಜನರನ್ನುಮಾರಣಾಂತಿಕವಾಗಿ ಕಾಡುತ್ತಿರುವ ಕೊರೊನಾ ನಿಯಂತ್ರಣಕ್ಕೆ, ಕಷ್ಟದಲ್ಲಿರುವ ಜನರು, ರೈತರ ಪರವಾಗಿ ಶಾಸ ಕರುಈ ಸಭೆ ಸೇರಿಲ್ಲ ಎಂಬುದು ನಿರಾಸೆಗೆ ಕಾರಣವಾಗಿದೆ.ಜಿಲ್ಲೆಯಲ್ಲಿ ಕೊರೊನಾ ಉಲ್ಬಣಗೊಂಡು ಜನತೆಸಾಯುತ್ತಿದ್ದಾಗ, ಬೆಡ್‌ಗಳಿಗಾಗಿ ಪರದಾಡುತ್ತಿದ್ದಾಗ,ಆಮ್ಲಜನಕ, ರೆಮ್‌ಡೆಸಿವಿಯರ್‌ಗಾಗಿ ಅಲೆಯುತ್ತಿದ್ದಾಗ ಹೀಗೆ ಒಗ್ಗೂಡದ ಶಾಸಕರು, ಕೇವಲಸ್ವಾರ್ಥ ಸಾಧನೆಯ ರಾಜಕೀಯ ಅಜೆಂಡಕ್ಕಾಗಿಒಗ್ಗೂಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.

Advertisement

ಬಂಗಾರಪೇಟೆ ತಾಲೂಕಿನ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರು ತಮ್ಮದೇ ರೆಸಾರ್ಟ್‌ನಲ್ಲಿಬುಧವಾರ ಮಧ್ಯಾಹ್ನ ಆಯೋಜಿಸಿದ್ದ ಸಭೆಯಲ್ಲಿಹಿರಿಯ ಶಾಸಕ ರಮೇಶ್‌ಕುಮಾರ್‌, ಕೋಲಾರ ಶಾಸಕಕೆ.ಶ್ರೀನಿವಾಸಗೌಡ, ಕೆಜಿಎಫ್ ಶಾಸಕ ಎಚ್‌.ನಾಗೇಶ್‌,ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನಪರಿಷತ್‌ಸದಸ್ಯರಾದ ನಜೀರ್‌ ಅಹಮದ್‌, ಇಂಚರಗೋವಿಂದರಾಜು ಪಾಲ್ಗೊಂಡಿದ್ದರು.

ಈ ಸಭೆಗೆಕೆಜಿಎಫ್ ಶಾಸಕಿ ರೂಪಕಲಾ ಗೈರು ಹಾಜರಾಗಿದ್ದರು.ಸಂಸದರ ವಿರೋಧಕ್ಕೆ ಆಜೆಂಡಾ: ಎರಡು ವರ್ಷಗಳಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿತಮ್ಮದೇ ಪಕ್ಷಗಳ ನಿರ್ಧಾರವನ್ನು ಧಿಕ್ಕರಿಸಿ ಕಾಂಗ್ರೆಸ್‌ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪರನ್ನು ಸೋಲಿಸಲುಹೀಗೆ ಒಗ್ಗೂಡಿದ್ದ ನಾಯಕರು ಮತ್ತೆ ತಾವೇಬೆಂಬಲಿಸಿದ್ದ ಸಂಸದ ಎಸ್‌.ಮುನಿಸ್ವಾಮಿಯವರನ್ನುವಿರೋಧಿಸುವ ಏಕೈಕ ಅಜೆಂಡಾ ಇಟ್ಟುಕೊಂಡು ಕೂಟಸೇರಿ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಸಾರ್ವಜನಿಕರಆಕ್ರೋಶಕ್ಕೂ ಕಾರಣವಾಗಿದೆ.

ಕೆಲವರಿಂದ ಪ್ರಯತ್ನ: ಕೊರೊನಾ ನಿಯಂತ್ರಿಸುವವಿಚಾರದಲ್ಲಿ ಈ ಸಭೆಯಲ್ಲಿದ್ದ ಶಾಸಕರ ಪೈಕಿಮಾಲೂ ರಿನ ಕೆ.ವೈ.ನಂಜೇಗೌಡರದ್ದು ಒಂದಷ್ಟುಪ್ರಯತ್ನ ಇದೆ. ಕೆಜಿಎಫ್ ಶಾಸಕಿ ರೂಪಕಲಾ ಕ್ಷೇತ್ರದಬಡವರಿಗೆ ಆಹಾರ ಕಿಟ್‌ ವಿತರಿಸಿದ್ದರು.ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಜನರ ಮಧ್ಯೆಕಾಣಿಸಿಕೊಂಡಿದ್ದರು. ಮುಳಬಾಗಿಲು ಶಾಸಕ ಎಚ್‌.ನಾಗೇಶ್‌ ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿದ್ದರು.

ಈಗಷ್ಟೇ ಜಿಲ್ಲೆಗೆ ಬಂದಿದ್ದರು: ಶ್ರೀನಿವಾಸಪುರ ಶಾಸಕರಮೇಶ್‌ಕುಮಾರ್‌ ಮೂರು ದಿನಗಳ ಹಿಂದಷ್ಟೇಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಕೋಲಾರ ಶಾಸಕ ಕ್ಷೇತ್ರದಲ್ಲೇಇದ್ದರೂ ಕೆಲವರಿಗಷ್ಟೇ ಸೀಮಿತವಾಗಿದ್ದರು.ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ರೈತರಪರ ಧ್ವನಿ ಎತ್ತಿ, ಕೊರೊನಾ ನಿಯಂತ್ರಣಕ್ಕೆ ಆಸ್ಪತ್ರೆನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದರು.

Advertisement

ಮತ್ತೋರ್ವ ವಿಧಾನಪರಿಷತ್‌ ಸದಸ್ಯ ನಜೀರ್‌ಅಹಮದ್‌ ಜಿಲ್ಲೆಯತ್ತ ಕಾಲಿಟ್ಟಿರಲೂ ಇಲ್ಲ. ಮತ್ತೂಬ್ಬವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿತಮ್ಮದೇ ಸರಕಾರವಿದ್ದರೂ ಸರಕಾರಕ್ಕೆ ಮನವಿಗಳನ್ನುಸಲ್ಲಿಸುತ್ತಾ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.

ಸಂಕಷ್ಟದಲ್ಲಿ ಒಂದಾಗಲಿಲ್ಲ: ಕೋಲಾರ ಜಿಲ್ಲೆಯುಅನೇಕ ಸಮಸ್ಯೆಗಳನ್ನು ಎದುರಿಸಿದ್ದಾಗಲೂ, ಜಿಲ್ಲೆಗೆಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಶಾಸಕರು ಹೀಗೆಒಗ್ಗಟ್ಟಾಗಿರಲಿಲ್ಲ. ರೈತರ ಪರವಾಗಿಸಂಘಟಿತರಾಗಿರಲಿಲ್ಲ. ಟೊಮೆಟೋ, ತರಕಾರಿಬೀದಿಗೆ ಸುರಿದಾಗಲೂ ಕನಿಷ್ಠ ಧ್ವನಿ ಎತ್ತಿರಲಿಲ್ಲ.ಕೊರೊನಾ ವಿಚಾರದಲ್ಲಿ ಜನತೆ ಬೆಡ್‌ಗಳು ಸಿಗದೆಸರಣಿ ಸಾವುಗಳು ಸಂಭವಿಸುತ್ತಿದ್ದಾಗಲೂಒಂದಾಗಲಿಲ್ಲ. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿಆಮ್ಲಜನಕ ಕೊರತೆಯಿಂದ ಎಂಟು ಮಂದಿಸಾವನ್ನಪ್ಪಿದ ಘಟನೆ ನಡೆದಾಗಲೂ ಶಾಸಕರು ಹೀಗೆಒಗ್ಗೂಡಿ ಆಸ್ಪತ್ರೆಗೆ ಧಾವಿಸಿ ಬಂದಿರಲಿಲ್ಲ.

ಎರಡೇ ವರ್ಷದಲ್ಲಿ ಕೆಂಗಣ್ಣಿಗೆ ಗುರಿ: ಶಾಸಕರಅಧಿಕಾರ ಮತ್ತು ಕ್ಷೇತ್ರ ವ್ಯಾಪ್ತಿಯ ವಿಚಾರಗಳಲ್ಲಿಹಸ್ತಕ್ಷೇಪ ನಡೆಸದೆ ತಾವಾಯಿತು ತಮ್ಮಕೆಲಸವಾಯಿತು ಎಂಬಂತೆ ಇದ್ದು ಬಿಟ್ಟಿದ್ದ ಮಾಜಿಸಂಸದ ಕೆ.ಎಚ್‌.ಮುನಿಯಪ್ಪ ಈಗ ಇವರ ಕಣ್ಣಿಗೆಮರ್ಯಾದಾ ಪುರುಷೋತ್ತಮರಾಗಿ ಕಾಣಿಸುತ್ತಿದ್ದಾರೆ.ಸಂಸದರ ಕಾರ್ಯವ್ಯಾಪ್ತಿ ಏನೆಂಬುದನ್ನು ಅರ್ಥಮಾಡಿಕೊಂಡು, ಸದ್ಬಳಕೆ ಮಾಡಿಕೊಂಡು ಒಂದಷ್ಟುಅತಿ ಉತ್ಸಾಹದಿಂದಲೇ ಜನರ ಮಧ್ಯೆ ರಾಜಕೀಯಮಾಡುತ್ತಿರುವ ಸಂಸದ ಮುನಿಸ್ವಾಮಿ ಎರಡೇವರ್ಷದಲ್ಲಿ ಶಾಸಕರ ಕೂಟದ ಶತ್ರುವಾಗಿ ಹಿಟ್ಲರ್‌ಸ್ಥಾನ ಗಿಟ್ಟಿಸಿಕೊಂಡುಬಿಟ್ಟಿದ್ದಾರೆ.

ಇದೇ ಕಾರಣಕ್ಕೆಶಾಸಕರು ಸಭೆ ಸೇರಿ ಸಂಸದ ಎಸ್‌.ಮುನಿಸ್ವಾಮಿವಿರುದ್ಧ ಹಿರಿಯ ಶಾಸಕ ರಮೇಶ್‌ಕುಮಾರ್‌ನೇತೃತ್ವದಲ್ಲಿ ಕಾನೂನು ಹೋರಾಟ ಮಾಡ ಬೇಕೆಂಬನಿರ್ಣಯ ತೆಗೆದುಕೊಂಡು ಅಪಹಾಸ್ಯಕ್ಕೀಡಾಗಿದ್ದಾರೆ.ತಾನು ಮಾಡುವುದಿಲ್ಲ, ಮಾಡುವುವರನ್ನು ಸಹಿಸುವು ದಿಲ್ಲ ಎಂಬ ಜಾಯಮಾನ ಕೋಲಾರ ಜಿಲ್ಲೆಯಬಹುತೇಕ ಶಾಸಕ ಜನಪ್ರತಿನಿಧಿಗಳಲ್ಲಿದೆ. ಇದೇಕಾರಣಕ್ಕೆ ಬಂಗಾರಪೇಟೆ ರೆಸಾರ್ಟ್‌ನಲ್ಲಿ ಶಾಸಕರಒಕ್ಕೂಟದ ಸಭೆ ನಡೆದಿದೆ. ಸಂಸದ ಮುನಿಸ್ವಾಮಿವಿರುದ್ಧ ಕ್ಷುಲಕ ಸ್ವಾರ್ಥ ಕಾರಣಗಳಿಗೆ ತಿರುಗಿಬಿದ್ದಿರುವ ಶಾಸಕರ ನಡೆ ಟೀಕೆಗೂ ಗುರಿಯಾಗುತ್ತಿದೆ.

ಕೆ.ಎಸ್‌.ಗಣೇಶ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next