Advertisement

ಜಿಲ್ಲಾ ಕೆಎಸ್‌ಆರ್‌ಟಿಸಿಗೆ ದಿನಕ್ಕೆ 6 ಲ. ರೂ. ನಷ್ಟ

01:55 AM Aug 11, 2019 | sudhir |

ಉಡುಪಿ: ಕಳೆದ ನಾಲ್ಕುದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಯಿಂದಾಗಿ ಉಡುಪಿ ಕೆಎಸ್‌ಆರ್‌ಟಿಸಿ ಡಿಪೋಗೆ ದಿನಕ್ಕೆ 6 ಲ.ರೂ.ನಷ್ಟವಾಗುತ್ತಿದೆ.

Advertisement

ಬೆಳಗ್ಗೆ ಮರಳಿದ ಬಸ್‌

ಉಡುಪಿಯಿಂದ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕಮಗಳೂರು, ಮಡಿಕೇರಿ, ಹೈದ್ರಾಬಾದ್‌ ಮಾರ್ಗವಾಗಿ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಶನಿವಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಅಂಕೋಲಾದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವ ಬಸ್‌ ಸೇವೆ ಸ್ಥಗಿತಗೊಂಡು 3 ದಿನಗಳಾಗಿವೆ. ಇನ್ನೂ ಶುಕ್ರವಾರ ಬೆಂಗಳೂರು ಮಾರ್ಗವಾಗಿ ರಾತ್ರಿ ತೆರಳಿದ ಉಡುಪಿ ಬಸ್‌ಗಳು ಘಾಟಿಯಲ್ಲಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ರಾತ್ರಿ ಅಲ್ಲಿಯೇ ನಿಂತು ಬೆಳಗ್ಗೆ ಮತ್ತೆ ಉಡುಪಿಗೆ ಮರಳಿವೆ.

ಡಿಪೋದಿಂದ ಬಸ್‌ ಸ್ಥಗಿತ

Advertisement

ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಮೂಲಕ ಬೆಂಗಳೂರಿಗೆ 5 ಬಸ್‌, ಶಿವಮೊಗ್ಗ 10, ಹೈದ್ರಾಬಾದ್‌ 1, ಮಡಿಕೇರಿ 1, ಚಿಕ್ಕಮಗಳೂರು ಮಾರ್ಗದ 1 ಬಸ್‌ ಸೇರಿದಂತೆ ವಿವಿಧ ಮಾರ್ಗದ ಬಸ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಡಿಪೋಗೆ ದಿನಕ್ಕೆ 6 ಲ.ರೂ. ನಷ್ಟವಾಗುತ್ತಿದೆ ಎಂದು ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಮುಖ್ಯಸ್ಥ ಉದಯ ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.

ಭಕ್ತರ ಸಂಖ್ಯೆ ಕುಸಿತ

ಕೊಲ್ಲೂರು, ಶ್ರೀ ಕೃಷ್ಣ ಮಠಕ್ಕೆ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವ ಭಕ್ತರ ಸಂಖ್ಯೆ ಕುಸಿತವಾಗಿದೆ.

ಶೇ.50 ಪ್ರಯಾಣಿಕರ ಕುಸಿತ

ಉಡುಪಿಯಿಂದ ಧರ್ಮಸ್ಥಳಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಶೇ.50ರಷ್ಟು ಕುಸಿತವಾಗಿದೆ. ಸಾಮಾನ್ಯವಾಗಿ ವರಮಹಾಲಕ್ಷ್ಮೀ ಹಬ್ಬ ದಿನಗಳಲ್ಲಿ ಕೆ.ಎಸ್‌.ಆರ್‌.ಟಿ.ಸಿ. ತುಂಬಿರುತ್ತದೆ. ಆದರೆ ಮಳೆಯಿಂದಾಗಿ ಪ್ರಯಾಣಿಕರು ಪುಣ್ಯ ಕ್ಷೇತ್ರಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಖಾಸಗಿ ಬಸ್‌ಗಳ ಸೇವೆ ಮೊಟಕು

ಉಡುಪಿ, ಕುಂದಾಪುರದಿಂದ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ ಮಾರ್ಗದ ಖಾಸಗಿ ಬಸ್‌ ಸೇವೆ ಮೊಟಕುಗೊಂಡಿದೆ. ಹಿಂದೆ ಬುಕಿಂಗ್‌ ಮಾಡಿದವರಿಗೆ ಹಣ ಹಿಂದುರುಗಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಉಡುಪಿಗೆ ಬಂದ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಮೂರು ದಿನದಿಂದ ಬಸ್‌ ಮಾರ್ಗ ವಿಚಾರಿಸಿ ಕಚೇರಿಗೆ ನಿತ್ಯ 2,000 ಕರೆಗಳು ಬರುತ್ತಿವೆ. ಇನ್ನೂ ಕೆಲವರು ನೇರವಾಗಿ ಬಸ್‌ ನಿಲ್ದಾಣಕ್ಕೆ ಬಂದು ಕೇಳುತ್ತಿದ್ದಾರೆ. ಮಳೆಯ ಹಿನ್ನೆಲೆ ಯಲ್ಲಿ ಇತರೆ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next