Advertisement
ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ವಿ.ಸಿ. ಐರಸಂಗ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಅಧ್ಯಕ್ಷೆಯಲ್ಲಿ ಮಾ.25 ಮತ್ತು 26ರಂದು ಸಮ್ಮೇಳನ ನಡೆಯಲಿದೆ. ಮಾ.25ರಂದು ಬೆಳಗ್ಗೆ 8:30ಗಂಟೆಗೆ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಸತೀಶ ಪರ್ವತಿಕರ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.
Related Articles
Advertisement
ಕನ್ನಡಕ್ಕಾಗಿ ನಡೆ ಮೆರವಣಿಗೆ: ಮಾ.25ರಂದು ಬೆಳಗ್ಗೆ 9 ಗಂಟೆಗೆ ಕನ್ನಡಕ್ಕಾಗಿ ನಡೆ ಎಂಬ ಧ್ಯೇಯವಾಕ್ಯದಲ್ಲಿ ನಗರದ ಕಲಾಭವನದಿಂದ ಜಿಲ್ಲಾ ಸಾಹಿತ್ಯ ಭವನದವರೆಗೆ ಮೆರವಣಿಗೆ ನಡೆಯಲಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಮೆರವಣಿಗೆಗೆ ಚಾಲನೆ ನೀಡಲಿದ್ದು,
ಡಾ| ಎಂ.ಎಂ. ಕಲಬುರ್ಗಿ ಮುಖ್ಯವೇದಿಕೆ: ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಗೆ ಡಾ| ಎಂ.ಎಂ.ಕಲಬುರ್ಗಿ ಎಂದು ಹೆಸರಿಡಲಾಗಿದೆ. ಉಳಿದಂತೆ ಡಾ|ವಾಮನ ಬೇಂದ್ರೆ, ಸದಾನಂದ ಕನವಳ್ಳಿ, ಗೋಪಾಲ ವಾಜಪೇಯಿ, ಗಜಾನನ ಮಹಾಲೆ ಹಾಗೂ ಆರ್ಯ ಆಚಾರ್ಯ ಎಂಬ ಐದು ಮಹಾದ್ವಾರಗಳು ಇರಲಿವೆ. ವಿವಿಧ ವಿಷಯಗಳ ಕುರಿತು ಐದು ವೈಚಾರಿಕ ಗೋಷ್ಠಿಗಳು ಜರುಗಲಿವೆ.
ಮಾ.26ರಂದು ಸಮ್ಮೇಳನದ ಸರ್ವಾಧ್ಯಕ್ಷ ಕವಿ ವಿ.ಸಿ. ಐರಸಂಗ ಅವರ ಕವಿತೆಗಳ ವಾಚನ ಹಾಗೂ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಸಮಯದಲ್ಲಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು. ಅಂದು ಸಂಜೆ 5:00ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ನಾಡೋಜ ಡಾ| ಪಾಟೀಲ ಪುಟ್ಟಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಪೊ| ಮಾಲತಿ ಪಟ್ಟಣಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ ಇರಲಿದೆ. ಅನುದಾನದ ಕೊರತೆಯಿಂದಾಗಿ ಎರಡು ದಿನದ ಸಮ್ಮೇಳನದಲ್ಲಿ ರಾತ್ರಿ ಊಟದ ವ್ಯವಸ್ಥೆ ಇಲ್ಲ. ಕೇಂದ್ರ ಸಮಿತಿ ನೀಡಿರುವ 5 ಲಕ್ಷ ರೂ. ಗಳ ಅನುದಾನದಲ್ಲಿ ಆದಷ್ಟು ಕಡಿಮೆ ವೆಚ್ಚದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಕಸಾಪ ಗೌರವ ಕಾರ್ಯದರ್ಶಿ ಪ್ರೊ| ಕೆ.ಎಸ್. ಕೌಜಲಗಿ, ಡಾ| ಜಿನದತ್ತ ಹಡಗಲಿ, ಪ್ರೊ| ಎಸ್. ಎಸ್.ದೊಡಮನಿ, ಹಿರಿಯ ಸಾಹಿತಿ ಮೋಹನ್ ನಾಗಮ್ಮನವರ, ಎಫ್.ವಿ.ಕಣವಿ, ದಿಂಡವಾಡ ಪತ್ರಿಕಾಗೋಷ್ಠಿಯಲ್ಲಿದ್ದರು.